ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದ ನಂತರ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ``ಕಬ್ಜ``
Posted date: 16 Tue, Jun 2020 01:54:19 PM

ಭಾರತದ ಹೆಸರಾಂತ ಪತ್ರಿಕೆ ಹಾಗೂ ವೆಬ್ಸೈಟ್ಗಳು ನಡೆಸಿರುವ  ಟಾಪ್ 10 ಭಾರತದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್ ಎರಡನೇ ಸ್ಥಾನದಲ್ಲಿದ್ದರೆ,`` ಕಬ್ಜ`` ಚಿತ್ರ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಘಟಾನುಘಟಿಗಳ ಸಿನಿಮಾಗಳು ಸ್ಥಾನಗಳನ್ನು ಪಡೆದಿದೆ,
ಇಂಡಿಯಾದ ಮೋಸ್ಟ್ ಎಕ್ಸ್ಪೆಕ್ಟೆಡ್ ಟಾಪ್ ಟೆನ್ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಎರಡು ಚಿತ್ರಗಳು ಸ್ಥಾನವನ್ನು ಪಡೆದಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯ.

ಸೂಪರ್ ಸ್ಟಾರ್ ಉಪೇಂದ್ರ ಅವರು 20 ವರ್ಷಗಳ ಹಿಂದೆ ಭಾರತ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ ಸಾಧಕ.  ಓಂ ಸಿನಿಮಾ ಇತ್ತೀಚೆಗೆ 25 ವರ್ಷಗಳ ಸಂಭ್ರಮಾಚರಣೆ ಆಚರಿಸಿದೆ ಹಾಗೂ ಮತ್ತೆ ಮುಂದಿನ 25 ವರ್ಷಗಳ ಕಾಲ ನೆನಪಿರುವಂತೆ ಮಾಡುವ ಸಿನಿಮಾ ಕಬ್ಜ ಎಂದು ಉಪೇಂದ್ರ ಅವರು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

ಸರ್ಕಾರದಿಂದ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ ನಂತರ ಬೆಂಗಳೂರು ಹಾಗೂ ಹೈದರಾಬಾದಿನಲ್ಲಿ ಇನ್ನೂ ಹಲವಾರು ವೈಭವಪೂರಿತ ಸೆಟ್ಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಸಜ್ಜಾಗಿದೆ.

ನಿರ್ದೇಶಕ ಆರ್ ಚಂದ್ರು ಅವರು ಕೆಜಿಎಫ್ ರೀತಿಯೇ ಕಬ್ಜ ಚಿತ್ರದ ಮೇಲೆ ಪ್ರೇಕ್ಷಕರಿಗೆ ಭರವಸೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಕಬ್ಜ ಚಿತ್ರದ ಟ್ರೈಲರ್ ಹಾಗೂ ಶೋ ರೀಲ್ ಅನ್ನು ನೋಡಿದ ತೆಲುಗು ಹಾಗೂ ಹಿಂದಿ ಚಿತ್ರರಂಗದ ಬಹು ದೊಡ್ಡ ನಿರ್ಮಾಪಕರುಗಳು ಉಪೇಂದ್ರ ಹಾಗೂ ಆರ್ ಚಂದ್ರು ಅವರನ್ನು ಶ್ಲಾಘಿಸಿದ್ದಾರೆ.

ಕಬ್ಜ ಚಿತ್ರ ಬಿಡುಗಡೆಯ ನಂತರ ಭಾರತ ಚಿತ್ರರಂಗವೇ ತಿರುಗಿ ನೋಡುವಂಥ ಸಿನಿಮಾ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಹಾಗೂ ಕೊರೋನಾದ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿತ್ರೋದ್ಯಮ ಉಳಿಯಬೇಕಾದರೆ ಕೆಜಿಎಫ್ ಮತ್ತು ಕಬ್ಜ ಅಂತಹ ಪ್ರಯೋಗಾತ್ಮಕ ಪ್ಯಾನ್ ಇಂಡಿಯಾ ಸಿನಿಮಾಗಳ ಅವಶ್ಯಕತೆ ಇದೆ ಎಂದು ಸ್ವತಹ ಬುದ್ಧಿವಂತ ಉಪೇಂದ್ರ ಅವರೇ ಹೇಳಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದ ನಂತರ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ``ಕಬ್ಜ`` - Chitratara.com
Copyright 2009 chitratara.com Reproduction is forbidden unless authorized. All rights reserved.