ಕಾಲ ಬ್ರಹ್ಮ ಸಂಪೂರ್ಣ
Posted date: 13 Wed, Jun 2018 08:58:14 AM

ಎಲ್ಲರ ಕಾಲವನ್ನು ಬರೆಯೋನು ಬ್ರಹ್ಮ! ಅದಕ್ಕೆ ಈ ಸಿನಿಮಾದ ಹೆಸರು ‘ಕಾಲ ಬ್ರಹ್ಮ’. ನಟ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಪ್ರತಾಪ್ ಕನ್ನಡ ಚಿತ್ರ ರಂಗಕ್ಕೆ ಪಾದ ಬೆಳಸಿದ್ದಾರೆ.

ಬಣ್ಣ ಬದುಕು ಕ್ರಿಯೆಟಿವ್ಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಈ ಚಿತ್ರ ಮಾತಿನ ಭಾಗದ ಚಿತ್ರೀಕರಣ ಮಾಡಿಕೊಂಡಿದೆ. ೩೩ ದಿವಸಗಳ ಕಾಲ ದೊಡ್ಡಬಳ್ಳಾಪುರ ಸುತ್ತ ಮುತ್ತ ಈ ಮೂಡ ನಂಬಿಕೆ ಹಾಗೂ ಇಂದಿನ ಸ್ಥಿತಿಗತಿ ಬಗ್ಗೆ ಒಳಗೊಂಡಿರುವ ಕಥಾವಸ್ತು ಚಿತ್ರದ ನಿರ್ದೇಶಕರು ಪ್ರತಾಪ್. ನಿರ್ದೇಶಕ ಪ್ರತಾಪ್ ಹಾಗೂ ರಂಗ ಧಾಮ ಕೊತ್ತುರು ನಿರ್ಮಾಪಕರುಗಳು.

ಪ್ರತಾಪ್ ತಂಡ ಇದೀಗ ಹಾಡಿನ ಭಾಗದ ಚಿತ್ರಿಕರಣಕ್ಕಾ ಸಜ್ಜಾಗಿದ್ದಾರೆ.
ವಿ ಮನೋಹರ್ ಸಂಗೀತ ಮತ್ತು ಸಾಹಿತ್ಯವನ್ನು ಸಹ ನೀಡಿದ್ದಾರೆ. ಸೂರ್ಯೋದಯ ಈ ಚಿತ್ರದ ಛಾಯಾಗ್ರಾಹಕರು. ರಾಖಿ ರಮೇಶ್ ಸಾಹಸ, ಬಾಲು ನೃತ್ಯ ನಿರ್ದೇಶನ ಮಾಡಿದ್ದಾರೆ.

ಪ್ರತಾಪ್ ಅವರಿಗೆ ನಾಯಕಿ ಆಗಿ ಸಹನಾ ಅಭಿನಯಿಸಿದ್ದಾರೆ. ಕಮಲ್,ಬಿ ಡಿ ಜತ್ತಿ, ರಂಜಿತ ಸೂರ್ಯವಂಶಿ, ಶಾಂತ ಆಚಾರ್ಯ, ಮೀಸೆ ಅಂಜನಪ್ಪ, ಸಿದ್ದರಾಮ ಕಾರ್ನೀಕ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಾಲ ಬ್ರಹ್ಮ ಸಂಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.