ಕುತೂಹಲ ಹುಟ್ಟಿಸಿದೆ `ಡೇವಿಡ್` ಚಿತ್ರದ ಟ್ರೇಲರ್
Posted date: 04 Mon, Nov 2019 08:52:52 AM

ವಿಶ್ವ ವಿಖ್ಯಾತ ಕಾನ್ ಫ಼ಿಲಂ ಫ಼ೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು, ಈಗಾಗಲೇ ಒಳ್ಳೆಯ ಪ್ರಶಂಸೆ ಪಡೆದಿರುವ `ಡೇವಿಡ್` ಚಿತ್ರದ ಟ್ರೇಲರ್ ನವಂಬರ್ ೧ರ ಕನ್ನಡ ರಾಜ್ಯೋತ್ಸವದಂದು ಡಿಬಿಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿತ್ತು.  ಬಿಡುಗಡೆಯಾದ ಕೆಲವೆ ಗಂಟೆಗಳಲ್ಲಿ ಚಿತ್ರದ ಕುತೂಹಲಕಾರಿ  ಟ್ರೇಲರ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ .   

ಕನ್ನಡದಲ್ಲಿ ಪ್ರಥಮ ಬಾರಿಗೆ ವಿಭಿನ್ನ ಹಾಗೂ ವಿಶೇಷರೀತಿಯಲ್ಲಿ ಚಿತ್ರೀಕರಿಸಲಾಗಿದೆ  ಹಾಗೂ ಚಿತ್ರ ಹೊಸರೀತಿಯ ತಾಂತ್ರಿಕತೆಯಿಂದ ಕೂಡಿದೆ ಎಂದು ಚಿತ್ರದ ನಿರ್ದೇಶಕ ಭಾರ್ಗವ್ ಯೋಗಂಭರ್ ತಿಳಿಸಿದ್ದಾರೆ. ನಿರ್ದೇಶಕರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.  

ಮಹಾನಂದಿ ಪ್ರೊಡಕ್ಷನ್ಸ್, ಲಯನ್ಸ್ ಗ್ರಿಪ್ಸ್ ಹಾಗೂ ಡಾರ್ಲಿಂಗ್ ಫ಼ಿಲಂಸ್(ಆಸ್ಟ್ರೇಲಿಯಾ) ಲಾಂಚನದಲ್ಲಿ ಪ್ರಸಾದ್ ರುದ್ರಮುನಿ, ಪ್ರದೀಪ್, ಉಮೇಶ್, ಸ್ಟೀವ್ ರೈಸ್, ಶೈಲಜ, ಬಾಲಸುಬ್ರಮಣ್ಯ ಹಾಗೂ ದೇವೇಂದ್ರ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಶ್ರೇಯಸ್ ಚಿಂಗ(ರಂಗ್‌ಬಿರಂಗ್ ಖ್ಯಾತಿ), ಅವಿನಾಶ್ ಯಳಂದೂರು, ಹರೀಶ್, ಬುಲೇಟ್ ಪ್ರಕಾಶ್, ರಾಕೇಶ್ ಅಡಿಗ, ಕಾವ್ಯ ಶಾ, ನವ್ಯ ರಮೇಶ್, ಪ್ರತಾಪ್ ನಾರಾಯಣ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಳಿವುಡ್‌ನ ಸ್ಟೀವ್ ರೈಸ್ ಹಾಗೂ ದೇವ ಅವರ ಛಾಯಾಗ್ರಹಣ, ಸಿದ್ಧಾರ್ಥ್ ಹಾಗೂ ಮುಖೇಶ್ ಸಂಕಲನ ಹಾಗೂ ಲವ್ ಪ್ರಾಣ್ ಮೆಹ್ತ ಅವರ ಹಿನ್ನಲೆ ಸಂಗೀತ ಈ ಚಿತ್ರಕ್ಕಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕುತೂಹಲ ಹುಟ್ಟಿಸಿದೆ `ಡೇವಿಡ್` ಚಿತ್ರದ ಟ್ರೇಲರ್ - Chitratara.com
Copyright 2009 chitratara.com Reproduction is forbidden unless authorized. All rights reserved.