ಕೂಗು ಮಾರ್ಚ್ 20 ರಂದು ಬಿಡುಗಡೆ
Posted date: 09 Mon, Mar 2020 06:13:06 PM

ಭಾಸ್ಕರ್ ಫಿಲಂಸ್ ಲಾಂಚನದಲ್ಲಿ ಡಾ.ಕೆ.ಪದ್ಮನಾಭನ್ ನಿರ್ಮಿಸುತ್ತಿರುವ " ಕೂಗು" ಸಿನಿಮಾ ಮಾರ್ಚ್ 20 ರಂದು ಬಿಡುಗಡೆಯಾಗಲಿದೆ. ರೈತರ ಮೇಲಿನ ಕಾಳಜಿಯಿಂದಲೇ ದೇಶಕ್ಕೆ ಅನ್ನಕೊಡುವುದು ರೈತ ಅಂತಾರೆ.ಆದರೆ ಅಂತ ರೈತನ ಬದುಕೇ ನೆಮ್ಮದಿಯಾಗಿಲ್ಲ ಎನ್ನುವ ಅಂಶಗಳನ್ನಿಟ್ಟುಕೊಂಡು ಆರ್.ರಂಗನಾಥ್ ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ.

ಚಿತ್ರಕ್ಕೆ ಎ.ಟಿ ರವೀಶ್ ಸಂಗೀತ, ಚಂದ್ರಣ್ಣ ಛಾಯಾಗ್ರಹಣ, ಸೋಸಲೆ ಗಂಗಾದರ ಸಂಭಾಷಣೆ ಮತ್ತು ಸಾಹಿತ್ಯ. ಶ್ರೀನಿವಾಸ್ ಪಿ. ಬಾಬು ಸಂಕಲನ, ಜಾಲಿಬಾಸ್ಟಿನ್, ವೇಲು ಸಾಹಸ, ಇಜಾದ್ ಸರ್ದಾರಿಯಾ ನೃತ್ಯ ನಿರ್ದೆಶನ, ರಮೇಶ್ ಕನಸಿನ ಭಾರತ ಕಥೆ, ಹರೀಶ್ ನಾಗರಾಜ್ ಮಂಚೇನಹಳ್ಳಿ ಸಹ ನಿರ್ಮಾಪಕರಾಗಿದ್ದಾರೆ. ಡಾ. ಕೆ.ಪದ್ಮನಾಭನ್, ಸಂಗೀತ, ವರ್ಷ,ದತ್ತ, ಅಶೋಕ್ ಡಾಬಾ, ಧನಂಜಯಸ್ವಾಮಿ ಕುಣಿಗಲ್,ದನಂಜಯ ರಕ್ಷಣಾ ವೇದಿಕೆ, ನಾಗಮಂಗಲ ಶಾಸಕ ಸುರೇಶ್ ಗೌಡರು ಸೇರಿದಂತೆ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed