ಕೆಜಿಎಫ್ ಚಿತ್ರದ ಕಲಾ ನಿರ್ದೇಶಕನಿಂದ ಬಿಲ್ ಗೇಟ್ಸ್ ಚಿತ್ರಕ್ಕೆ ಕಲಾ ನಿರ್ದೇಶನ
Posted date: 07 Thu, Mar 2019 12:45:37 PM

ಇತ್ತೀಚಿನ ದಿನದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಹಾಗು ನಿರೀಕ್ಷೆ ಮೂಡಿಸಿರುವ ಸಿನಿಮಾ ಬಿಲ್ ಗೇಟ್ಸ್. ಶ್ರೀ ಪಾಂಚಜನ್ಯ ಸಿನಿ ಕ್ರಿಯೆಷನ್ಸ್ ಅಡಿಯಲ್ಲಿ ಸ್ನೇಹಿತರೇ ಸೇರಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಶ್ರೀನಿವಾಸ್ ಮಂಡ್ಯ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರಿಗೆ ಇರುವ ಸಿನಿಮಾ ಪ್ಯಾಷನ್ ಮತ್ತು ನಿರ್ಮಾಪಕರ ಸಹಕಾರದಿಂದ ಮೇಕಿಂಗ್ ವಿಚಾರದಲ್ಲಿ ರಾಜಿಯಾಗದೆ ಇಡೀ ಚಿತ್ರವನ್ನು ಹೆಸರಿಗೆ ತಕ್ಕ ಹಾಗೆ ಅದ್ದೂರಿಯಾಗಿ ರೂಪಿಸಲಾಗಿದೆಯಂತೆ.
ಹೊಸಾ ವಿಚಾರವೆಂದರೆ, ಕೆಜಿಎಫ್ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದ ಸ್ಯಾಂಡಲ್ ವುಡ್ ನ ಪ್ರಖ್ಯಾತ ಕಲಾ ನಿರ್ದೇಶಕ ಶಿವಕುಮಾರ್‌ರವರು ಬಿಲ್ ಗೇಟ್ಸ್ ಚಿತ್ರದಲ್ಲೂ ಕೆಲಸ ಮಾಡುತ್ತ್ತಿದ್ದಾರೆ. ನಿರ್ದೇಶಕರು ಬಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಕಲ್ಪನೆಯಂತೆ ದೊಡ್ಡ ದೊಡ್ಡ ಸಟ್ ಗಳನ್ನ ಹಾಕಿಸಿದ್ದಾರೆ. ಅದರಲ್ಲೂ ಚಿಕ್ಕಣ್ಣ ಹಾಗು ಶಿಶಿರ ರವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಯಮಲೋಕದ ಅರಮನೆ ಸೆಟ್ ಅಂತೂ ತುಂಬಾ  ಅದ್ಬುತವಾಗಿ ರೆಡಿ ಮಾಡಲಾಗಿದೆಯಂತೆ. ನಿರ್ದೇಶಕರ ಕಲ್ಪನೆಯಂತೆ   ಪ್ರೇಕ್ಷಕ ಮಹಾ ಪ್ರಭುಗಳಿಗೆ ಒಂದು ಸುಂದರವಾದ ಲೋಕವನ್ನು ಸೃಷ್ಟಿ ಮಾಡಿಕೊಟ್ಟಿದ್ದಾರೆ ಕಲಾ ನಿರ್ದೇಶಕರು.
ಈ ಚಿತ್ರದಲ್ಲಿ ಚಿಕ್ಕಣ್ಣ, ಶಿಶಿರ, ಕುರಿಪ್ರತಾಪ್ ರಾಜಶೇಖರ್ ರಶ್ಮಿತಾ ವಿ ಮನೊಹರ್ ಹಾಗೂ ಅಕ್ಷರ ರೆಡ್ಡಿ. ಬ್ಯಾಂಕ್ ಜನಾರ್ದನ್ ಗಿರಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಇದೂ ಒಂದು ಅದ್ಭುತವಾದ ಕಾಮಿಡಿ ಕೌಟುಂಬಿಕ ಸಿನಿಮಾ ಎಲ್ಲಾ ವರ್ಗದವರು ಕುಳಿತು ನೊಡುವಂತಹ ಸಿನಿಮಾ. ಇತ್ತೀಚಿಗೆ ಸಿನಿಮಾ ಚಿತ್ರಿಕರಣ ಮುಗಿಸಿ ಕುಂಬಳಕಾಯಿ ಒಡೆದಿದ್ದಾರೆ. ಪೈನಲ್ ಪೊಸ್ಟ್ ಪ್ರೋಡಕ್ಷನ್ ಹಂತದಲ್ಲಿ ಚಿತ್ರತಂಡ ಇದೆ. ಅತೀ ಶೀಘ್ರದಲ್ಲೇ ಪ್ರೆಕ್ಷಕರಿಗೆ ಕಾಮಿಡಿ ರಸದೌತಣ ಬಡಿಸಲು ಬೆಳ್ಳೆ ತೆರೆಗೆ ಬರಲು ಸಿದ್ಧವಾಗಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೆಜಿಎಫ್ ಚಿತ್ರದ ಕಲಾ ನಿರ್ದೇಶಕನಿಂದ ಬಿಲ್ ಗೇಟ್ಸ್ ಚಿತ್ರಕ್ಕೆ ಕಲಾ ನಿರ್ದೇಶನ - Chitratara.com
Copyright 2009 chitratara.com Reproduction is forbidden unless authorized. All rights reserved.