ಕೆಲವು ದಿನಗಳ ನಂತರ ಸೆನ್ಸಾರ್ ಪಡೆಯಿತು
Posted date: 07 Thu, Jun 2018 10:32:10 AM

ಹಲವು ದಿನಗಳ ನಂತರ ಈ ‘ಕೆಲವು ದಿನಗಳ ನಂತರ’ ಚಿತ್ರ ತಂಡ ಒಂದು ಅತ್ಯುತ್ತಮ ಕೆಲಸ ಮಾಡಿರುವುದು ನಿಮಗೆ ತಿಳಿದೇ ಇದೆ. ಅದೇ ೧೦೦ ಸದಸ್ಯರ ತಂಡ ನೇತ್ರದಾನ ಸಹಿ ಮಾಡಿ ನೀಡಿರುವುದು.

‘ಕೆಲವು ದಿನಗಳ ನಂತರ’ ಚಿತ್ರವನ್ನು ಸೆನ್ಸಾರ್ ಮಂಡಲಿ ವೀಕ್ಷಣೆ ಮಾಡಿ ‘ಎ’ ಅರ್ಹತಾ ಪತ್ರವನ್ನು ದಯಪಾಲಿಸಿದೆ. ಸಾಮಾಜಿಕ ಕಳಕಳಿ ಜೊತೆಗೆ ಹಾರರ್ ಅಂಶ ಸಹ ಇಟ್ಟುಕೊಂಡು ನಿರ್ದೇಶನ ಮಾಡಿದ್ದಾರೆ ಶ್ರೀನಿ.ಮಾಲೂರು, ಚಿಕ್ಕಮಗಳೂರು, ಸಾವನದುರ್ಗ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಮುತುರಾಜ್, ವಸಂತ್ ಕುಮಾರ್ ಹಾಗೂ ಚಂದ್ರಕುಮಾರ್ ಜಂಟಿ ನಿರ್ಮಾಣದ ಚಿತ್ರಕ್ಕೆ ರಾಕಿ ಸೋನು ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ಒಂದು ಅಪರೂಪದ ಹಾಡನ್ನು ಬರಹಗಾರ, ನಿರ್ದೇಶಕ ಬ ಲಾ ಸುರೇಶ್ ಅವರು ನೀಡಿದ್ದಾರೆ.

ಶುಭ ಪೂಂಜಾ, ಪವನ್, ಲೋಕೇಶ್, ಜಗದೀಶ್, ಸೋನು ಪಾಟಿಲ್,ರಮ್ಯ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೆಲವು ದಿನಗಳ ನಂತರ ಸೆನ್ಸಾರ್ ಪಡೆಯಿತು - Chitratara.com
Copyright 2009 chitratara.com Reproduction is forbidden unless authorized. All rights reserved.