ಕೆಸರಲ್ಲೆ ಕಮಲ ಅರಳೋದು
Posted date: 17 Sun, May 2020 10:10:46 PM

ಕೆಸರಲ್ಲೆ  ಕಮಲ ಅರಳೋದು ಎಂಬ ಕನ್ನಡ ಜನಪ್ರಿಯ ನಾಣ್ಣುಡಿಯಂತೆ ಕಷ್ಟಗಳನ್ನೆ ಸಾಧನೆಯ ಮೆಟ್ಟಿಲಾಗಿಸಿಕೊಂಡು ಇಂದು ಸಾಧಕರ ಹಾದಿಯಲ್ಲಿರುವ ಬರವಸೆಯ ಯುವ ನಿರ್ದೇಶಕ ಪ್ರಭಾಕರ್ ಶೇರ್ ಖಾನೆ ಯವರು ತಮ್ಮ ಚೊಚ್ಚಲ ನಿರ್ದೇಶನದ ಕೌಟಿಲ್ಯ  ಚಿತ್ರದ ಮುಖಾಂತರ ಸಿನಿ ಲೋಕಕ್ಕೆ ದಾಪುಗಾಲಿಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ನಾಗನೂರು ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಇವರು ಬಾಲ್ಯದಿಂದಲೇ  ಸಿನಿಮಾದಲ್ಲಿ ಆಸಕ್ತಿ ಬೆಳೆಸಿಕೊಂಡರು.         ಮುಂದಿನ ದಿನಗಳಲ್ಲಿ ಇವರ ಈ ಆಸಕ್ತಿಯೇ ಅವರನ್ನು ಯಾರು ಪರಿಚಿತರಿಲ್ಲದ ಬೃಹತ್ ಬೆಂಗಳೂರಿನ ಗಾಂಧಿ ನಗರಕ್ಕೆ ಕರೆತರುತ್ತದೆ. ದೊಡ್ಡ ಕನಸನ್ನು ಹೊತ್ತಿದ್ದ ಇವರಿಗೆ ಯಾರ ಸಹಾಯವು  ಸಿಗದೆ ಅನೇಕ ಅವಮಾನಗಳನ್ನ   ಅನುಭವಿಸುತ್ತಾರೆ  ಬೆಟ್ಟದಂತಹ ಕನಸು ಮಂಜಿನಂತೆ ಕರಗುವಾಗ ವಿಷ್ಣು ಭಂಡಾರಿ ಎಂಬುವವರಿಂದ  ಆಧರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ ನ ಪರಿಚಯವಾಗುತ್ತದೆ ನಂತರ ಅಲ್ಲಿಯೇ ನಿರ್ದೇಶನದ ತರಬೇತಿ ಪಡೆಯುತ್ತಾರೆ ನಂತರ ಗಾಳಿಪಟ ಎಂಬ ಧಾರವಾಹಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಾರೆ ತದ ನಂತರ   ಗೊಂಬೆಗಳ ಲವ್,   ನಾನು ಲವರ್ ಆಫ್ ಜಾನು,  ಕೆಂಡ ಸಂಪಿಗೆ ಹೀಗೆ ಅನೇಕ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿ ನಿರ್ದೇಶನದಲ್ಲಿ ಪರಿಣಿತಿ ಪಡೆದ ಇವರು ಇಂದು ತಮ್ಮ ಕನಸಿನ ಕೂಸಾದ ಕೌಟಿಲ್ಯ ಚಿತ್ರ ನಿರ್ದೇಶನದ  ಮುಖಾಂತರ ಸಿನಿ ಲೋಕದಲ್ಲಿ ತಮ್ಮ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ  ಶ್ರೀ ಕಲ್ಲೂರು  ಆಂಜನೇಯ ಬ್ಯಾನರ್ ಅಡಿಯಲ್ಲಿ ವಿಜೇಂದ್ರ B.A  ರವರ ನಿರ್ಮಾಣದ ಪ್ರಖ್ಯಾತ ಶನಿ ಧಾರಾವಾಹಿ ಖ್ಯಾತಿಯ ಶಿವನ ಪಾತ್ರಧಾರಿ ಅರ್ಜುನ್ ರಮೇಶ್ ಹಾಗು ಮನಸಾರೆ ಧಾರವಾಹಿ ಖ್ಯಾತಿಯ ನಾಯಕಿ ಪ್ರಿಯಾಂಕ ಚಿಂಚೋಳಿ ರವರು ಅಭಿನಯಿಸಿರುವ    ಕೌಟಿಲ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಮುಗಿಸಿ ರಿಲೀಸ್ ಹಂತದಲ್ಲಿದ್ದು  ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಗೊಳ್ಳಲಿ ಎಂದು ಶುಭ ಹಾರೈಸುವ ಮದುವೆ ಅಂದ್ರೇನೆ ಕಾಮಿಡಿ ಗುರು ಚಿತ್ರತಂಡKannada Cinema's Latest Wallpapers
Kannada Cinema's Latest Videos
Kannada Movie/Cinema News - ಕೆಸರಲ್ಲೆ ಕಮಲ ಅರಳೋದು - Chitratara.com
Copyright 2009 chitratara.com Reproduction is forbidden unless authorized. All rights reserved.