ಕ್ರೀಡೆಯಿಂದ ಸಿನಿಮಾಕ್ಕೆ ಮೂರು ಮತ್ತೊಂದು ಚಿತ್ರದಲ್ಲಿ ಮಮತಾ
Posted date: 16 Tue, Feb 2021 � 05:41:37 PM

ವಿಪ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೀಣಾ ನಿರ್ಮಿಸುತ್ತಿರುವ `ಮೂರು ಮತ್ತೊಂದು` ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ. ಪ್ರಶಾಂತ್ ಅಂಕಪುರ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಲವ್ , ಸಸ್ಪೆನ್ಸ್ ಹಾಗೂ ಹಾರರ್ ಕಥಾಹಂದರ ಒಳಗೊಂಡಿದೆ. ಮೈಸೂರು ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ ಚಿತ್ರದಲ್ಲಿ ಮೂರು ಹಾಡುಗಳಿವೆ. ಮೂರು ಮತ್ತೊಂದು ಅಂದರೆ ಮೂವರ ನಡುವಿನ ಬರುವ ಮತ್ತೊಬ್ಬ ವ್ಯಕ್ತಿ ಸಸ್ಪೆನ್ಸ್.

ನಾಯಕಿ ಮಮತಾ, ಬಿಕಾಂ ಓದುತ್ತಿರುವ ವಿದ್ಯಾರ್ಥಿನಿ. ಬೆಂಗಳೂರು ಮೂಲದ ಈಕೆ ನೃತ್ಯ ನಾಟಕ, ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದಾರೆ.ಭರತ ನಾಟ್ಯ ಅಭ್ಯಾಸ ಮಾಡಿದ್ದಾರೆ. ಬಳಿಕ ಗಣೇಶ್ ಫಿಲಂ ಡ್ಯಾನ್ಸ್ ಸೇರಿ ಅಲ್ಲಿ ನೃತ್ಯವನ್ನು ಕಲಿತಿದ್ದಾರೆ. ಚಿತ್ರದ ಕುರಿತು ಮಾಹಿತಿ ಹಂಚಿಕೊಂಡವರು ಶಾಲೆಯಲ್ಲಿ ಓದುತ್ತಿರುವಾಗಲೇ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ.

ಪುಟ್ ಬಾಲ್ ಆಟಗಾರ್ತಿಯಾಗಿ 5 ಜನ ಆಟಗಾರರಲ್ಲಿ ನಾನು ಒಬ್ಬಳಾಗಿ ರಾಷ್ಟ್ರದ ಮಟ್ಟದ ಪುಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೆ.ಡ್ರೀಮ್ ಎ ಡ್ರೀಮ್ ಸಂಸ್ಥೆಯಿಂದ ಗೋವಾದಲ್ಲಿ ನಡೆದ ಆಟಗಾರ್ತಿಯಾಗಿ ಪಾಲ್ಗೊಂಡಿದೆ. ನಿರ್ದೇಶಕರು ಪರಿಚಯವಾದ ನಂತರ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ ಎಂದು ಹೇಳಿಕೊಂಡರು.

ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಪಳನಿ ಸೇನಾಪತಿ ಸಂಗೀತ ,ಗಣೇಶ್ ಶೆಟ್ಟಿ ಚಿತ್ರಕಥೆ ಸಂಭಾಷಣೆ ಹಾಗೂ ಸಹಕಾರ ನಿರ್ದೇಶನವಿದೆ. ಹರಹರ ಮಹಾದೇವ, ಜೈ ಹನುಮಾನ್ ,ಮಹಾಕಾಳಿ, ಶನಿ, ಗಟ್ಟಿಮೇಳ, ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಾಜ್ ಮಣೀಶ್ ನಾಯಕ.ಚಿತ್ರದಲ್ಲಿ ಜಗದೀಶ್ ಇದ್ದಾರೆ. ಹ್ಯಾರಿಸ್ ಜಾನಿ ಸಾಹಸ ನಿರ್ದೇಶನವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed