ಜನವರಿಯಲ್ಲಿ ಶುಗರ್ ಫ್ಯಾಕ್ಟರಿ ಆರಂಭ
Posted date: 08 Sun, Nov 2020 06:04:20 PM

ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಅಭಿನಯದ ನೂತನ ಚಿತ್ರಕ್ಕೆ ಶುಗರ್ ಫ್ಯಾಕ್ಟರಿ ಎಂಬ ಶೀರ್ಷಿಕೆ ಖಾತ್ರಿಯಾಗಿದೆ. ಕೃಷ್ಣ ಅವರಿಗೆ ನಾಯಕಿಯಾಗಿ ಬೆಡಗಿ ಸೋನಾಲ್ ಮಾಂಟೆರೊ ಅಭಿನಯಿಸುತ್ತಿದ್ದಾರೆ.
ಫನ್ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರ ಚಿತ್ರವನ್ನು ದೀಪಕ್ ಅರಸ್ ನಿರ್ದೇಶಿಸುತ್ತಿದ್ದಾರೆ.
ಈ ಹಿಂದೆ ಮನಸಾಲಜಿ ಎಂಬ ಚಿತ್ರ ನಿರ್ದೇಶಿಸಿದ್ದ ದೀಪಕ್ ಅರಸ್ ಅವರಿಗೆ ಇದು ದ್ವಿತೀಯ ನಿರ್ದೇಶನದ ಚಿತ್ರ.
ದೀಪಕ್ ಅರಸ್ ಕನ್ನಡದ ಖ್ಯಾತ ನಟಿ ಅಮೂಲ್ಯ ಅವರ ಸಹೋದರ.
 ದೀಪಕ್ ಅರಸ್ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು ಬಹದ್ದೂರ್ ಚೇತನ್ ಕುಮಾರ್ ಬರೆಯುತ್ತಿದ್ದಾರೆ.
ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌
ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ನಂತರ ಹಂತಹಂತವಾಗಿ ಗೋವಾ, ಮೈಸೂರು ಹಾಗೂ ಅಬ್ರಾಡ್ ನಲ್ಲಿ ಚಿತ್ರೀಕರಣ ಸಾಗಲಿದೆ.
ಆರು ಹಾಡುಗಳಿದ್ದು, ಕಬೀರ್ ರಫಿ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ತಮ್ಮ ಕ್ಯಾಮೆರಾದಲ್ಲಿ ಶುಗರ್ ಫ್ಯಾಕ್ಟರಿ ಯನ್ನು ಸುಂದರವಾಗಿ ಸೆರೆಹಿಡಿಯಲಿದ್ದಾರೆ.‌
ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಮೂರು ನಾಯಕಿಯರಿದ್ದು, ಸೋನಾಲ್ ಮಾಂಟೆರೊ ಮೊದಲ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನಿಬ್ಬರು ನಾಯಕಿಯರು ಸೇರಿದಂತೆ ಉಳಿದ ತಾರಾಬಳಗದ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed