ಜೀ ಕನ್ನಡದ ನಾಗಿಣಿ 1000 ಕಂತುಗಳನ್ನು ಪೂರ್ಣಗೊಳಿಸಿದೆ
Posted date: 30 Sat, Nov 2019 08:06:28 AM

ಕನ್ನಡ ಟೆಲಿವಿಷನ್ ಉದ್ದಿಮೆಯಲ್ಲಿ ನಂ 1 ಜನರಲ್ ಮನರಂಜನಾ ವಾಹಿನಿಯಾದ ಜೀ ಕನ್ನಡ, ನವೆಂಬರ್ 25, 2019 ರಂದು ನಾಗಿಣಿಯ 1000 ಕಂತುಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮೈಲಿಗಲ್ಲನ್ನು ಸಾಧಿಸಿದ್ದು, ಫೆಬ್ರವರಿ 2016 ರಂದು ಆರಂಭವಾದ ದಿನದಿಂದ ಕನ್ನಡದ ಕಿರುತೆರೆ ಉದ್ದಿಮೆಯಲ್ಲಿ ಕನ್ನಡ ಟೆಲಿವಿಷನ್ ನ ಅತ್ಯಂತ ಜನಪ್ರಿಯ ಶೋಗಳಲ್ಲಿ ಇದು ಒಂದಾಗಿದೆ. ಕನ್ನಡ ಕಿರುತೆರೆ ಉದ್ದಿಮೆಯಲ್ಲಿ ಪ್ರಥಮ ಬಾರಿಗೆ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲದಿಂದ ಈ ಅತೀಂದ್ರಿಯ ಶೋ ಸಾಧನೆ ನಿಜಕ್ಕೂ ಅದ್ಭುತ, ಇದರೊಂದಿಗೆ, ಈ ಡಿಸೆಂಬರ್ ನಿಂದ ಹೊಸ ತಾರಾಗಣದೊಂದಿಗೆ ಜೀ ಕನ್ನಡ ಮತ್ತು ಜೀ ಕನ್ನಡ ಹೆಚ್ ಡಿ ವೀಕ್ಷಕರಿಗೆ ಮಾತ್ರ ಹೊಸ ಟೆಲಿವಿಷನ್ ಅನುಭವ ನೀಡಲು ನಾಗಿಣಿ ಧಾರಾವಾಹಿ ಸಿದ್ಧವಾಗುತ್ತಿದೆ.

ಕೃಷ್ಣ ಛಾಯಾ ಚಿತ್ರ ನಿರ್ಮಾಣದ ಮತ್ತು ಹಯವದನ ನಿರ್ದೇಶನದ, ಈ ಶೋ ವಾಹಿನಿಯನ್ನು ದೃಢವಾಗಿಸುವುದರೊಂದಿಗೆ, ಜೀ ಕನ್ನಡ ಇಂತಹ ವಿಶಿಷ್ಟ ಕಥಾಹಂದರದೊಂದಿಗೆ ಮೆಚ್ಚಿನ ಮನರಂಜನೆಯ ತಾಣವಾಗಿದೆ. 3 ವರ್ಷಗಳ ಅವಧಿಯಲ್ಲಿ, ಶೋ ಅತ್ಯಧಿಕ ವೀಕ್ಷಕ ವಲಯ ಹೊಂದುವುದನ್ನು ಮುಂದುವರೆಸಿದ್ದು, ನಾಗಿಣಿ ತಂಡ ಅಮೃತಾ (ದೀಪಿಕಾ) ಮತ್ತು ಅರ್ಜುನ್ (ದೀಕ್ಷಿತ್) ಜೀವನದ ಪ್ರತಿಯೊಂದು ಹಂತವನ್ನೂ ಮುನ್ನಡೆಸಲು ಸ್ಫೂರ್ತಿ ನೀಡಿದೆ.
ಶೀಘ್ರವೇ ಬರುತ್ತಿರುವ ನಾಗಿಣಿ 2 ಮುಂದಿನ ಅಧ್ಯಾಯ ವೀಕ್ಷಿಸಲು
ಜೀ ಕನ್ನಡ ಮತ್ತು ಜೀ ಕನ್ನಡ ಹೆಚ್ ಡಿ ಗೆ ಟ್ಯೂನ್ ಇನ್ ಮಾಡಿ

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೀ ಕನ್ನಡದ ನಾಗಿಣಿ 1000 ಕಂತುಗಳನ್ನು ಪೂರ್ಣಗೊಳಿಸಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.