ಟಿಕ್-ಟಾಕ್ ಗಣೇಶ ಆರ್.ಆರ್. ನಗರದಲ್ಲಿ
Posted date: 04 Sat, Jan 2020 05:44:59 AM

ವಿ೩ ಕ್ರಿಯೇಷನ್ಸ್ ಲಾಂಛನದಲ್ಲಿ ನರೇಶ್.ಜಿ ನಿರ್ಮಾಣದ ಟಿಕ್-ಟಾಕ್ ಗಣೇಶ  ಚಿತ್ರಕ್ಕೆ ರಾಜರಾಜೇಶ್ವರಿನಗರದ  ಖಾಸಗಿ ಮನೆಯೊಂದರಲ್ಲಿ ನಾಯಕ ನಾಯಕಿಯೊಂದಿಗೆ ಪೋಷಕ ಪಾತ್ರಧಾರಿಗಳು ಅಭಿನಯಿಸಿದ ದೃಶ್ಯಗಳು ಇತ್ತೀಚೆಗೆ ನಡೆಯಿತು. ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ವಿ೩, ಇವರು ಈ ಹಿಂದೆ ಸಾಪ್ಟ್‌ವೇರ್ ಗಂಡ ಚಿತ್ರ ನಿರ್ದೇಶಿಸಿದ್ದರು.  ಈ ಚಿತ್ರಕ್ಕೆ ಕಥೆ - ಸತೀಶ್ ಗುಬ್ಬಚ್ಚಿ, ಛಾಯಾಗ್ರಹಣ - ಲಕ್ಷ್ಮೀಕಾಂತ್,  ಸಂಗೀತ -ವೀರಸಮರ್ಥ, ಹಾಡುಗಳನ್ನು - ವಿ೩, ಸಾಯಿಸಾಗರ್, ಹಾಗೂ ವಿಜಯ ಭರಮಸಾಗರ  ಬರೆದಿದ್ದಾರೆ. ಸಾಹಸ-ಥ್ರಿಲ್ಲರ್ ಮಂಜು, ನೃತ್ಯ-ಜೈ, ಕಲೆ-ಆನಂದ್, ನಿರ್ವಹಣೆ-ದಾಡಿ ರಮೇಶ, ಸಂಪೂರ್ಣ ಹಾಸ್ಯಮಯ ಈ ಚಿತ್ರದಲ್ಲಿ ಲವ್-ಹಾಗೂ ಆಕ್ಷನ್‌ಗಳಿಂದ ಕೂಡಿರುತ್ತದೆ.  ತಾರಾಗಣದಲ್ಲಿ - ಮೆಂಟಲ್ ಮಂಜ ಅರ್ಜುನ್, ಶುಭರಕ್ಷ, ಸಾನ್ವಿ ಪೊನ್ನಪ್ಪ, ನಿಖಿತ, ಅಮೃತ, ಮಮತ, ಟಿಕ್-ಟಾಕ್ ವಿನುತ, ಟಿಕ್-ಟಾಕ್ ಧನಲಕ್ಷ್ಮಿ, ಶಶಿಧರ್, ಸುಬ್ಬಯ್ಯ, ಪೃಥ್ವಿ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಟಿಕ್-ಟಾಕ್ ಗಣೇಶ ಆರ್.ಆರ್. ನಗರದಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.