ಡಬಲ್ ಇಸ್ಮಾರ್ಟ್ ಸಿನಿಮಾದ ಎರಡನೇ ಹಾಡು ರಿಲೀಸ್..ಭರ್ಜರಿಯಾಗಿ ಸ್ಟೆಪ್ ಹಾಕಿದ ರಾಮ್ ಪೋತಿನೇನಿ ಹಾಗೂ ಕಾವ್ಯಾ ಥಾಪರ್
Posted date: 21 Sun, Jul 2024 11:34:29 AM
ಡಬಲ್ ಇಸ್ಮಾರ್ಟ್ ಸಿನಿಮಾದ ಸ್ಟೆಪ್ಪಮಾರ್ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಚಿತ್ರತಂಡ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ಮಾರ್ ಮುಂತಾ ಚೋಡ್ ಚಿಂತಾ ಎಂಬ ಗಾನಬಜಾನಕ್ಕೆ ನಾಯಕ ಉಸ್ತಾದ್ ರಾಮ್ ಪೋತಿನೇನಿ ಹಾಗೂ ನಾಯಕಿ ಕಾವ್ಯಾ ಥಾಪರ್ ಸಖತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಕಾಸರ್ಲ ಶ್ಯಾಮ್ ಸಾಹಿತ್ಯದ ದೇಸಿ ನಂಬರ್ ಗೆ ಮಣಿ ಶರ್ಮಾ ಟ್ಯೂನ್ ಹಾಕಿದ್ದು, ರಾಹುಲ್ ಸಿಪ್ಲಿಗುಂಜ್ ಮತ್ತು ಕೀರ್ತನಾ ಶರ್ಮಾ ಧ್ವನಿಯಾಗಿದ್ದಾರೆ. ಮಾರ್ ಮುಂತಾ ಚೋಡ್ ಚಿಂತಾ ಲಿರಿಕಲ್ ವಿಡಿಯೋದ ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇರೋದು ವಿಶೇಷವಾಗಿದೆ. 

ಇಸ್ಮಾರ್ಟ್ ಶಂಕರ್ ಸಿನಿಮಾದ ಮುಂದುವರೆದ ಭಾಗವೇ ಈ ಡಬಲ್ ಇಸ್ಮಾರ್ಟ್ ಚಿತ್ರ. ಈ ಮೂಲಕ ಡೈರೆಕ್ಟರ್ ಪೂರಿ ಜಗನ್ನಾಥ್ ಹೊಸ ರೀತಿಯಲ್ಲಿಯೆ ಶಂಕರ್‌ನ ಕಥೆ ಹೇಳಲು ಹೊರಟ್ಟಿದ್ದಾರೆ. 2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರುತ್ತಿದೆ. ಟಾಲಿವುಡ್‌ನಲ್ಲಿ ಈಗಾಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ.


ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್ ಇಸ್ಮಾರ್ಟ್’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಪುರಿ ಕನೆಕ್ಟ್ಸ್’ ಬ್ಯಾನರ್ ಮೂಲಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಮ್‌ ಪೊತೀನೇನಿಗೆ ನಟಿ ಕಾವ್ಯಾ ಥಾಪರ್ ಜೋಡಿ ಆಗಿದ್ದಾದೆ. ಸಂಜಯ್ ದತ್ ಈ ಸಿನಿಮಾದಲ್ಲಿ ಖಡಕ್ ವಿಲನ್ ಆಗಿಯೇ ಕಾಣಿಸುತ್ತಿದ್ದಾರೆ. ಇವರ ಈ ಸಿನಿಮಾ ಬಗ್ಗೆ ಕೂಡ ನಿರೀಕ್ಷೆ ಇದ್ದೇ ಇದೆ.

ಡಬಲ್ ಇಸ್ಮಾರ್ಟ್ ಸಿನಿಮಾದ ಶೂಟಿಂಗ್ ಇನ್ನು ನಡೆಯುತ್ತಿದೆ. ಭರದಿಂದಲೇ ಚಿತ್ರೀಕರಣ ನಡೆಯುತ್ತಿರೋ ಈ ಸಿನಿಮಾ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಆಗಸ್ಟ್-15 ರಂದು ಚಿತ್ರ ಎಲ್ಲೆಡೆ ರಿಲೀಸ್ ಮಾಡಲಾಗುತ್ತಿದೆ. ವಿಶ್ವದಾದ್ಯಂತ ಬರ್ತಿರೋ ಈ ಚಿತ್ರದ ಪ್ರಚಾರ ಕೂಡ ಈಗಾಗಲೇ ಶುರು ಆಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed