ತಾಳಟ್ಟಿ ಚಿತ್ರ ಚಿತ್ರೀಕರಣ ಮುಕ್ತಾಯ
Posted date: 12 Mon, Oct 2020 07:29:13 PM

ಸೆವೆನ್‌ಸ್ಟಾರ್ ಪ್ರೊಡಕ್ಷನ್ಸ್ ಮತ್ತು ಸೃಜನ ಮೀಡಿಯಾಹೌಸ್ ಸಹಕಾರದಲ್ಲಿ, ಕಲ್ಪತರು ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಹಾರರ್, ಸಸ್ಪೆನ್ಸ್ ಕಥೆ ಹೊಂದಿದ ಚಿತ್ರ ತಾಳಟ್ಟಿ. ಹರ್ಷವರ್ಧನ್, ಹಯಾತ್‌ಖಾನ್, ರಾಕೇಶ್.ಡಿ,  ದಿಲೀಪ್‌ಕುಮಾರ್ ಸೇರಿ  ಈ ಚಿತ್ರಕ್ಕೆ  ಬಂಡವಾಳ ಹೊಡಿರುವ ಈ ಚಿತ್ರಕ್ಕೆ  ಗಿಲ್ಲಿ ವೆಂಕಟೇಶ್ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರೀತಿ, ಪ್ರೇಮ ಎಂದು ಯುವತಿಯರ ಹಿಂದೆ ಅಲೆದಾಡುವ  ಪ್ರೇಮಿಗಳಿಗೆ ತಾನು ಬಯಸಿದ ಪ್ರೀತಿ ಸಿಕ್ಕರೆ ಸ್ವರ್ಗ, ಸಿಗದಿದ್ದರೆ ನರಕ. ಈ ಸ್ವರ್ಗ ಮತ್ತು ನರಕದ ಹಾದಿಗಳು ಜೋಡಿರಸ್ತೆ ಇದ್ದಂತೆ. ಈ ಎರಡು ದಾರಿಯ ಅನುಭವವನ್ನ ಎಳೆ, ಎಳೆಯಾಗಿ ಬಿಚ್ಚಿಡುವ  ಪ್ರಯತ್ನ ಈ ಚಿತ್ರದಲ್ಲಿದೆ. ನಾಯಕನ ಸ್ನೇಹಿತನಿಂದಾದ ಒಂದು ಘಟನೆಯಿಂದ ಸದ್ಯದ ಪರಿಸ್ಥಿತಿಯಲ್ಲಿ ಒಳಿತಾದರೂ, ಮುಂದೆ ಅದೇ ಘಟನೆಯಿಂದ ನಾಯಕನ ಕುಟುಂಬಕ್ಕೆ ತೊಂದರೆಯುಂಟಾಗಿ, ನಾಯಕನ ಜೀವಕ್ಕೂ ತೂಗುಕತ್ತಿಯಾಗುತ್ತದೆ. ಕೊನೆಗೆ ನಾಯಕ ತನ್ನ ಜೀವವನ್ನ ಉಳಿಸಿಕೊಳ್ಳಲು ಪಡುವ  ಪ್ರಯತ್ನವೇ ತಾಳಟ್ಟಿ ಚಿತ್ರದ ಕಥಾನಕ.

ಈ ಚಿತ್ರಕ್ಕೆ ಇಮ್ತಿಯಾಜ್‌ಖಾನ್ ಹಾಗೂ ಅಶೋಕ್ ಹಣಗಿ ಅವರ ಕ್ಯಾಮರಾ  ಕೈಚಳಕವಿದ್ದು,  ರಕ್ಷಿತ್ ಜಿ. ಮಲ್ಲಪ್ಪ ಸಂಕಲನಕಾರ್ಯ ನಿರ್ವಹಿಸಿದ್ದಾರೆ. ಅಭಿನಂದನ್ ಕಶ್ಯಪ್ ಅವರು ಈ ಚಿತ್ರಕ್ಕೆ  ಸಂಗೀತ ಸಂಯೋಜನೆ ಮಾಡಿzರೆ. ಇನ್ನು ಈ ಚಿತ್ರದ ನಾಯಕ ನಟನಾಗಿ  ಯತೀಶ್, ನಾಯಕಿಯಾಗಿ ಪ್ರತಿಮಾ, ಹಯಾತ್ ಖಾನ್, ದೀಪಾ, ಬೇಬಿ ಕೃತಿ ನಟರಾಜ, ದಿಲೀಪ್‌ಕುಮಾರ್, ಸಿದ್ದು ಮಂಡ್ಯ, ಮೋನಿಷಾ, ಕಲಾ ಮಂಜುನಾಥ್,  ಮಾದಪ್ಪ ಮಂಡ್ಯ, ಶ್ರೀನಿವಾಸ್ ಸೇರಿದಂತೆ  ಹಲವಾರು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ  ನಟಿಸಿzರೆ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ  ಸೆಂಟಿಮೆಂಟ, ಎಮೋಷನ್ಸ್, ಫ್ಯಾಮಿಲಿ ರಿಲೇಶನ್ ಜೊತೆಗೆ ಪ್ರೇPಕರನ್ನು ಕಾಮಿಡಿ ಮೂಲಕ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಕಂಟೆಂಟ್ ಇದೆ ಎನ್ನುವುದು ನಿರ್ದೇಶಕರ ಮಾತು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ತಾಳಟ್ಟಿ ಚಿತ್ರ ಚಿತ್ರೀಕರಣ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.