ತೆರೆಯ ಹಿಂದಿನ ಕಥೆಯ ಹೇಳಲು ಮುಂದಾದ ಐದು ನಿರ್ದೇಶಕರ ಹೊಸ ಪ್ರಯತ್ನ``ಬಿಟಿಎಸ್``
Posted date: 23 Fri, Aug 2024 05:08:23 PM
ಹಾಗೊಮ್ಮೆ ಹೀಗೋಮ್ಮೆ ಸಿನಿಮಾವನ್ನು ಒಂದಕ್ಕಿಂತ ಹೆಚ್ಚು ಮಂದಿ ನಿರ್ದೇಶನ ಮಾಡುತ್ತಾರೆ. ಇದೀಗ ಅಂತಹುದೇ ಮತ್ತೊಂದು ಪ್ರಯತ್ನ. " ಬಿಟಿಎಸ್" . ಐದು ಕಥೆ ಮತ್ತು ಐದು ನಿರ್ದೇಶಕರು ಆಸಕ್ತಿಕರ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಮನ ಗೆಲ್ಲಲು ಮುಂದಾಗಿದ್ದಾರೆ.

ಬಿಟಿಎಸ್ ( ಬಿಹೈಂಡ್ ದಿ ಸ್ಕ್ರೀನ್ )  ಚಿತ್ರಕ್ಕೆ  ಪ್ರಜ್ಚಲ್ ರಾಜು  ,ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ,  ರಾಜೇಶ್ ಎನ್  ಶಂಕದ್,  ಅಪೂರ್ವ ಭಾರದ್ವಜ್  ಆಕ್ಷನ್ ಕಟ್ ಹೇಳಿದ್ದಾರೆ‌. ಯುವ ಪ್ರತಿಭಾನ್ವಿತರ ತಂಡ ನಟ ರಾಜ್ ಬಿ ಶೆಟ್ಟಿ ಸಾಥ್ ನೀಡಿ, ಪ್ರಯತ್ನ ಯಶಸ್ವಿ ಆಗಲಿ ಎಂದು ಹಾರೈಸಿದ್ದಾರೆ.

ತೆರೆಯ ಹಿಂದಿನ ವಿಷಯಗಳನ್ನು ಐವರು ನಿರ್ದೇಶಕರು ತೆರೆಯ ಮೇಲೆ ತರುವ ಮೂಲಕ ಹೊಸ ಪ್ರಯತ್ನ ಮಾಡಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ ಇತ್ತು  ಭೀಮ ಚಿತ್ರದ ನಿರ್ದೇಶಕ ಕೃಷ್ಣ ಸಾರ್ಥಕ್ ಬಿಡುಗಡೆ ಮಾಡಿ ತಂಡಕ್ಕೆ ಒಳ್ಳೆಯದಾಗಲಿ  ಎಂದು ಹಾರೈಸಿದರು.
 
ಈ ವೇಳೆ ನಿರ್ದೇಶಕರಲ್ಲಿ ಒಬ್ಬರಾದ  ಕುಲದೀಪ್ ಕಾರಿಯಪ್ಪ ಮಾತನಾಡಿ ಜೀವನದಲ್ಲಿ ಸಾಧನೆ ಮಾಡಲು ಮುಂದಾದಾಗ ನಮ್ಮನ್ನು ಯಾರು ಬೆಂಬಲಿಸುವುದಿಲ್ಲ ಎಂದು ಸಮಾಜವನ್ನು ಬೈಯ್ಯಲು ಮುಂದಾಗುತ್ತೇವೆ.  ಸಾಧನೆ ಮಾಡಲು ಮುಂದಾದಾಗ 
ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ  ಎನ್ನುವುದು  ಚಿತ್ರ ತಿರುಳು.  ಕಥೆಯ " ಹೆಸರು ಹೀರೋ" ಅಪರೂಪದ ವಿಷಯಗಳನ್ನು  ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು  ವಿವರ ನೀಡಿದರು

ಮತ್ತೊಬ್ಬ ನಿರ್ದೇಶಕ ಸಾಯಿ ಶ್ರೀನಿಧಿ  ಮಾತನಾಡಿ ಸಾಲ ಮಾಡಿಯಾದರೂ ಚಿತ್ರ ಮಾಡಬೇಕು ಅನ್ನಿಸಿತು ಆಗ ನೆರವಾದರು ಮುರುಳಿ ಕೃಷ್ಣ, ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ‌ , ಕಾಫಿ ಸಿಗರೆಟ್  ಮತ್ತು ಲೈನ್ ಎನ್ನುವುದು ನನ್ನ ಕಥೆಯ ಭಾಗ ಎಂದರು.

ಉಳಿದ ನಿರ್ದೇಶಕರಾದ ಪ್ರಜ್ವಲ್ ರಾಜ್ , ಬಾನಿಗೊಂದು ಎಲ್ಲೆ ಎಲ್ಲಿದೆ  ಎನ್ನುವುದು ನಾನು ನಿರ್ದೇಶನ ಮಾಡಿರುವ ಕಥೆಯ ಭಾಗ ಎಂದು ಹೇಳಿಕೊಂಡರು.

ನಿರ್ದೇಶಕಿ ಅಪೂರ್ವ ಭಾರದ್ವಜ್ ಮಾತನಾಡಿ ಇಷ್ಟು ವರ್ಷ ನಟಿಯಾಗಿ ಕಾಣಿಸಿಕೊಂಡಿದ್ದೆ. ಈಗ ನಿರ್ದೇಶಕಿಯಾಗಿದ್ದೇನೆ
ಐದು  ನಿರ್ದೇಶಕರು ಐದು ಕಥೆ ಹೇಳುವುದು ಎನ್ನುವ ವಿಷಯ ಆಸಕ್ತಿಕರವಾದದ್ದು ಹೀಗಾಗಿ ಒಂದು ಕಥೆಯನ್ನು ನಿರ್ದೇಶನ ಮಾಡಲು ಒಪ್ಪಿಕೊಂಡೆ. ಮಹದೇವ ಪ್ರಸಾದ್ ಮತ್ತು  ಶ್ರೀಪ್ರಿಯಾ ನನ್ನ ಕಥೆಯಲ್ಲಿ ಕಾಣಿಸಿಕೊಂಡಿದ್ದೇನೆ.‌ಮೇಕಪ್ ಕುರಿತ ಕಥೆ. ಮೇಕಪ್  ಮ್ಯಾನ್  ಮತ್ತು ಟಚ್ಚಪ್ ಬಾಯ್ ಗೆ ಚಿತ್ರ ಅರ್ಪಿಸುವೆ ಎಂದು ಮಾಹಿತಿ ಹಂಚಿಕೊಂಡರು

ಹಿರಿಯ ನಟ ಮೂಗು ಸುರೇಶ್ ಮಾತನಾಡಿ,ಕಥೆ ಹೇಳುವಾಗ ಬಹಳಷ್ಟು ನಿರ್ದೇಶಕರು ನಿರ್ಮಾಪಕರ ಮನಸ್ಸು ಗೆದ್ದು ಬಿಡ್ತಾರೆ ಆದರೆ ಅದು ಸಿನಿಮಾದಲ್ಲಿ ಯಶಸ್ಸು ಗಳಿಸಲು ವಿಫಲರಾಗುತ್ತಾರೆ. ಅದ್ಯಾಕೋ ಗೊತ್ತಿಲ್ಲ. ಕನ್ನಡದಲ್ಲಿ ಬಹಳಷ್ಟು ಕಥೆಗಾರು ಇದ್ದಾರೆ. ಆದರೆ ಯಶಸ್ಸು ಮಾತ್ರ ಕಡಿಮೆ ಎಂದರು

38 ವರ್ಷಗಳ ಚಿತ್ರ ಜೀವನದಲ್ಲಿ ಅನೇಕ ನೋವು ಅವಮಾನ ಎದುರಿಸಿದ್ದೇನೆ.  ಎಲ್ಲವನ್ನೂ ನುಂಗಿಕೊಂಡು ಮುನ್ನಡೆಯಬೇಕು ಎನ್ನುವುದನ್ನು ಅರಿತಿರುವನು ನಾನು. ಪ್ರತಿಭಾನ್ವಿತ ತಂಡದ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ ಎಂದು ಹೇಳಿದರು.

ನಿರ್ಮಾಪಕ ಮುರುಳಿ ಕೃಷ್ಣ ಮಾತನಾಡಿ,  ಬಿಟಿಎಸ್  ಚಿತ್ರಕ್ಕೆ ಐದು ಮಂದಿ‌ ನಿರ್ದೇಶಕರು ಅವರೇ ಚಿತ್ರದ ಆಧಾರ ಸ್ತಂಭ. ಚಿತ್ರ ಎಲ್ಲರಿಗೂ ಇಷ್ಡವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ನಟಿಸಿರುವ ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪಿಯಾ, ಕೌಶಿಕ್,  ,ಚಂದನ, ವಿಜಯ್ ಕೃಷ್ಣ ಸೇರಿದಂತೆ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಇದೇ ವೇಳೆ  ನಿರ್ದೇಶಕರಾದ ರಾಮೇನಹಳ್ಳಿ ಜಗನ್ನಾಥ್, ವಿನಯ್ ಪ್ರೀತಂ, ಗುರುರಾಜ ಕುಲಕರ್ಣಿ, ಶ್ರೀಧರ್ ಶಿಕಾರಿಪುರ, ಜೈಶಂಕರ್,
ದೇವನೂರು ಚಂದ್ರು, ಚೇತನ್ ಕೇಶವ್ , ಇಸ್ಲಾವುದ್ದೀನ್ ಮತ್ತಿತರರು ಅನುಭವಿ ನಿರ್ದೇಶಕರು ಮಾಡಿರುವ ಚಿತ್ರದ ರೀತಿ ಇದೆ ಒಳ್ಳೆಯದಾಗಲಿ ಎಂದು ಹಾರೈಸಿದರು.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed