ದ. ಆಫ್ರಿಕಾಗೆ ಹಾರಿದ ಜಾಕಿ
Posted date: 21/July/2010

ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಡಾ|| ರಾಜ್‌ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ ಜಾಕಿ ಚಿತ್ರ ತಂಡವು ಎರಡು ಗೀತೆಗಳ ಚಿತ್ರೀಕರಣಕ್ಕಾಗಿ ದ. ಆಫ್ರಿಕಾಗೆ ಭಾನುವಾರ ಪ್ರಯಾಣ ಬೆಳೆಸಿತು. ಪುನೀತ್‌ರಾಜ್‌ಕುಮಾರ್, ಭಾವನರಾವ್ ಅಭಿನಯದೊಂದಿಗೆ ಈ ಗೀತೆಗಳಿಗೆ ಟಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಹಾಗೂ ಹರ್ಷ ನೃತ್ಯ ನಿರ್ದೇಶನದಲ್ಲಿ ದಕ್ಷಿಣ ಆಫ್ರಿಕಾ, ನಮೀಬಿಯಾ, ಇಟಲಿ ಸುತ್ತಮುತ್ತಾ ಚಿತ್ರದ ನಿರ್ದೇಶಕ ಸೂರಿ ಚಿತ್ರಿಸಿಕೊಳ್ಳಲಿದ್ದಾರೆ. ಚಿತ್ರವು ಸೆಪ್ಟೆಂಬರ್‌ನಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.
    ಚಿತ್ರಕ್ಕೆ ಯೋಗ್ರಾಜ್ ಆರ್. ಭಟ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯ, ಸತ್ಯ ಹೆಗ್ಡೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಶಶಿಧರ ಅಡಪ ಕಲೆ, ಇಮ್ರಾನ್ ನೃತ್ಯ, ರವಿವರ್ಮ ಡಿಫರೆಂಟ್ ಡ್ಯಾನಿ ಸಾಹಸ, ಮಲ್ಲಿಕಾರ್ಜುನ ನಿರ್ಮಾಣ ನಿರ್ವಹಣೆ, ಚನ್ನ ನಿರ್ಮಾಣ ಮೇಲ್ವಿಚಾರಣೆ ಇದ್ದು, ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಮತ್ತು ನಿರ್ದೇಶನದ ಹ್ರೊಣೆಯನ್ನು ಸೂರಿ ಹೊತ್ತಿದ್ದಾರೆ.
    ತಾರಾಗಣದಲ್ಲಿ ಪುನೀತ್‌ರಾಜ್‌ಕುಮಾರ್, ಭಾವನಾ, ಸುಮಿತ್ರ, ರಂಗಾಯಣರಘು, ಹೊನ್ನಾವಳ್ಳಿ ಕೃಷ್ಣ, ರವಿಕಾಳೆ, ಸತ್ಯಜಿತ್, ಶೋಭರಾಜ್, ರಾಜು ತಾಳಿಕೋಟೆ, ಬುಲೆಟ್ ಪ್ರಕಾಶ್, ಸಂಪತ್, ಉಮೇಶ್, ರವಿಕಿರಣ್, ಸಿದ್ದರಾಜು, ಹರ್ಷಿಕಾ, ನಿಶಾ, ನಾಯಿಚಂದ್ರು, ಪೆಟ್ರೋಲ್ ಪ್ರಸನ್ನ, ಅಪೂರ್ವ, ಸುಶ್ಮಾ ಬಿರಾದಾರ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ದ. ಆಫ್ರಿಕಾಗೆ ಹಾರಿದ ಜಾಕಿ - Chitratara.com
Copyright 2009 chitratara.com Reproduction is forbidden unless authorized. All rights reserved.