ನಂದಿಯಿಂದ ನಗರಕ್ಕೆ `ಕುಚಿಕೂ ಕುಚಿಕೂ`
Posted date: 09 Mon, Jan 2012 ? 09:11:04 AM

ಶ್ರೀಚೆಲುವರಾಯಸ್ವಾಮಿ ಮೂವೀಸ್ ಲಾಂಛನದಲ್ಲಿ ಎನ್.ಕೃಷ್ಣಮೂರ್ತಿ ಅವರು ನಿರ್ಮಿಸುತ್ತಿರುವ ‘ಕುಚಿಕೂ ಕುಚಿಕೂ‘ ಚಿತ್ರಕ್ಕೆ ನಂದಿಬೆಟ್ಟದಲ್ಲಿ ಹತ್ತು ದಿನಗಳ ಕಾಲ ಚೇಸಿಂಗ್ ಹಾಗೂ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ. ಪ್ರವೀಣ್, ವಿಜಯ್‌ಕೌಂಡಿನ್ಯ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈಗ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ.  
   ಡಿ.ರಾಜೇಂದ್ರಬಾಬು ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ನಕ್ಷತ್ರ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಸುಮಿತ್ರ, ರಮೇಶ್‌ಭಟ್, ವಿಜಯ್ ಕೌಂಡಿನ್ಯ, ಸುಂದರರಾಜ್, ಕಾರ್ತಿಕ್, ಶೈಲಜಾಜೋಶಿ, ಮನೋಜ್, ಭುವನಾ ಮುಂತಾದವರಿದ್ದಾರೆ.
ಹಂಸಲೇಖರ ಸಾಹಿತ್ಯ ಹಾಗೂ ಸಂಗೀತವಿರುವ ಈ ಚಿತ್ರಕ್ಕೆ ಎಂ.ಯು.ನಂದಕುಮಾರ್(ಜೋಗಯ್ಯ)ರ ಛಾಯಾಗ್ರಹಣವಿದೆ. ಲಕ್ಷ್ಮಣರೆಡ್ಡಿ ಸಂಕಲನ, ಜಾಲಿಬಾಸ್ಟಿನ್ ಸಾಹಸ ನಿರ್ದೇಶನ, ನಾಗೇಶ್ ಹಾಗೂ ಸತೀಶ್ ನೃತ್ಯ ನಿರ್ದೇಶನ, ಮೋಹನ್‌ಮಾಳಗಿ ಸಹನಿರ್ದೇಶನವಿರುವ ಈ ಚಿತ್ರಕ್ಕೆ ರಾಖೇಶ್ ಕಥೆ ಬರೆದಿದ್ದಾರೆ. ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಂದಿಯಿಂದ ನಗರಕ್ಕೆ `ಕುಚಿಕೂ ಕುಚಿಕೂ` - Chitratara.com
Copyright 2009 chitratara.com Reproduction is forbidden unless authorized. All rights reserved.