ನಡುವೆ ಅಂತರವಿರಲಿ ನಾಳೆಯಿಂದ ಬಿಡುಗಡೆ
Posted date: 04 Thu, Oct 2018 06:35:57 PM

ಬೃಂದಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀನ್-ಜಿ.ಕೆ. ನಾಗರಾಜು ನಿರ್ಮಾಣದ, ನಡುವೆ ಅಂತರವಿರಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದ್ದು ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಚಿತ್ರಕಥೆ-ನಿರ್ದೇಶನ ರವೀನ್,  ಸಂಭಾಷಣೆ - ಮಂಜುಮಾಂಡವ್ಯ, ಛಾಯಾಗ್ರಹಣ-ಯೋಗಿ, ಸಂಗೀತ-ಕದರಿ ಮಣಿಕಾಂತ್, ಸಂಕಲನ-ಗಣೇಶ್ ಮಲ್ಲಯ್ಯ, ಸಾಹಸ-ರವಿವರ್ಮ, ನೃತ್ಯ - ಮುರಳಿ, ಸಾಹಿತ್ಯ-ಡಾ||ವಿನಾಗೇಂದ್ರಪ್ರಸಾದ್, ಯೋಗರಾಜ್ ಭಟ್, ಗೌಸ್‌ಫೀರ್. ಸಹನಿರ್ದೇಶನ-ರಾಮಕೃಷ್ಣ, ನಿರ್ವಹಣೆ- ಮೈಸೂರ್ ಕೃಷ್ಣ,  ಐದು ಹಾಡುಗಳಿರುವ ಈ ಚಿತ್ರ ಈಗಿನ ಜನರೇಷನ್ ನೈಜಘಟನೆಯ ಕಥಾವಸ್ತು, ಪ್ರೀಮೆಚ್ಯೂರ‍್ಡ್ ಲವ್ ಸ್ಟೋರಿಯಾಗಿರುತ್ತೆ. ತಾರಾಗಣದಲ್ಲಿ - ಪ್ರಖ್ಯಾತ್ ಪರಮೇಶ್, ಐಶಾನಿ ಶೆಟ್ಟಿ, ಚಿಕ್ಕಣ್ಣ, ರಕ್ಷಿತ್ ಕುಮಾರ್, ತುಳಸಿ ಶಿವಮಣಿ, ಅರಣಾ ಬಾಲರಾಜ್, ಶ್ರೀನಿವಾಸಪ್ರಭು, ಮಂಜುಮಾಂಡವ್ಯ, ಮುಂತಾದವರಿದ್ದಾರೆ.

ಹದಿಹರೆಯದ ಪ್ರೀತಿಯ ಭಾವನೆಗಳು
ಪ್ರಿಮೆಚ್ಯೂರ್ ಪ್ರೇಮ ಕತೆ ಹೊಂದಿರುವ ನಡುವೆ ಅಂತರವಿರಲಿ ಚಿತ್ರವನ್ನು  12 ವರ್ಷದಿಂದ 50 ವರ್ಷದ ವಯೋಮಾನದವರಿಗೆ  ಟೆಸ್ಟ್ ಚೆಕ್ ಎಂದು ತೋರಿಸಿದ್ದಾರೆ.  55 ನೋಡುಗರಲ್ಲಿ 38 ಮಂದಿ  ಕಣ್ಣೀರು ಹಾಕಿದ್ದಾರೆ. ಅಂದರೆ ಎಷ್ಟರಮಟ್ಟಿಗೆ ಸಿನಿಮಾ ಆವರಿಸಿಕೊಂಡಿದೆ ಎಂಬುದನ್ನು ಗಮನಿಸಬೇಕಾಗಿದೆ. ಓದುವ ವಯಸ್ಸಿನಲ್ಲಿ ಓದಬೇಕು. ಅದು ಬಿಟ್ಟು ಪ್ರೀತಿ, ಪ್ರೇಮ ಅಂತ ಹಿಂದೆ ಹೋದರೆ ಅವರು ನೋವು ಅನುಭವಿಸುವುದು ಅಲ್ಲದೆ ಮನೆಯವರು ಕೂಡ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ.  18-20 ವಯಸ್ಸಿನ ಯುವಜನತೆಯ ಮನಸ್ಸು ಚಂಚಲವಾಗಿರುತ್ತದೆ. ಇದೇ ಅಂತರದಲ್ಲಿ ತಪ್ಪುಗಳು ಆಗುತ್ತದೆ. ಅದಕ್ಕೆ ಈ ವಯಸ್ಸುನಲ್ಲಿ ಅಂತರವಿರುವುದು ಒಳ್ಳೇದು ಎಂದು ಹೇಳುವ ಪ್ರಯತ್ನ ಮಾಡಲಾಗಿದೆ.  ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿರುವ ರವೀನ್‌ಕುಮಾರ್ ಕತೆ,ಚಿತ್ರಕತೆ ಬರೆದು ಮೊದಲಬಾರಿ ನಿರ್ದೇಶನ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರಿಗೆ ಜೊತೆಯಾಗಿ ನಾಗರಾಜ್ ಪಾಲುದಾರರು.
ರಂಗಭೂಮಿ ನಟ, ಸದ್ಯ ಇಂಜನಿಯರಿಂಗ್ ಓದುತ್ತಿರುವ ಪ್ರಖ್ಯಾತ್‌ಪರಮೇಶ್ ಸಂಭಾಷಣೆ,ನಿರ್ದೇಶಕ ಮಂಜುಮಾಂಡವ್ಯ  ಇವರ ಶೋಧದಿಂದ ನಾಯಕನಾಗಿ ಆಯ್ಕೆಯಾಗಿದ್ದಾರೆ.  ಐಶಾನಿಶೆಟ್ಟಿ ನಾಯಕಿ. ಇಬ್ಬರು ಮೇಕಪ್‌ರಹಿತ ನಟನೆ ಮಾಡಿರುವುದು ವಿಶೇಷ. ಉಳಿದಂತೆ ನಾಯಕಿಯ ಪೋಷಕರಾಗಿ ಅಚ್ಯುತಕುಮಾರ್-ತುಳಸಿಶಿವಮಣಿ, ನಗಿಸಲು ಚಿಕ್ಕಣ್ಣ , ಉದಯ್‌ಮೆಹ್ತಾ ನಟಿಸಿದ್ದಾರೆ. ಮಣಿಕಾಂತ್ ಖದ್ರಿ ಹಾಡುಗಳಲ್ಲಿ  ಶಕುಂತ್ಲೆ ಬಂದಳು ಗೀತೆ ಹಿಟ್ ಆಗಿದೆ. ಸದರಿ ಗೀತೆಯನ್ನು ಡಾ.ನಾಗೇಂದ್ರಪ್ರಸಾದ್ ಬೆಳಿಗ್ಗೆ ಆರು ಗಂಟೆಯಲ್ಲಿ  ಕೇವಲ ಐದು ನಿಮಿಷದಲ್ಲಿ ರಚಿಸಿದ್ದಾರಂತೆ.  ವಿತರಕ ಕಾರ್ತಿಕ್‌ಗೌಡ ಮುಖಾಂತರ ಸುಮಾರು 100 ಕೇಂದ್ರಗಳಲ್ಲಿ ಅಕ್ಟೋಬರ್ 5ರಂದು 
ನಾಳೆಯಿಂದ ರಾಜ್ಯದ್ಯಂತ ತೆರೆ ಕಾಣಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಡುವೆ ಅಂತರವಿರಲಿ ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.