ನವಂಬರ್ 8 ರಂದು ಬರಲಿದೆ `ಮಂಗಳವಾರ ರಜಾದಿನ`
Posted date: 04 Mon, Nov 2019 08:59:25 AM

ತ್ರಿವರ್ಗ ಫ಼ಿಲಂಸ್ ಹಾಗೂ ಲೋಟಸ್ ಲೈಟ್ಸ್ ಸ್ಟುಡಿಯೊಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಮಂಗಳವಾರ ರಜಾದಿನ‘ ಚಿತ್ರದ ಮೊದಲ ವಿಡಿಯೋ ಹಾಡು ನವಂಬರ್ ೮ರಂದು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಲಿದೆ. ಬಿಗ್‌ಬಾಸ್ ಖ್ಯಾತಿಯ ಚಂದನ್ ಆಚಾರ್, ಲಾಸ್ಯ ನಾಗರಾಜ್, ರಜನಿಕಾಂತ್ ಹಾಗೂ ನಂದನ್ ರಾಜ್ ಈ ಹಾಡಿನ ಚಿತ್ರೀಕರಣದಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಹಾಸ್ಯಭರಿತ ಈ ಗೀತೆಯನ್ನು ಯುವಿನ್ ಅವರು ಬರೆದು, ನೃತ್ಯ ನಿರ್ದೇಶನವನ್ನು ಯುವಿನ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ೪೫ ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರದ ಪ್ರಥಮಪ್ರತಿ ಸಹ ಸಿದ್ದಾವಾಗಿದೆ.

ಕ್ಷೌರಿಕನ ಸುತ್ತ ಹೆಣೆಯಲಾದ ಈ ಚಿತ್ರ ಹಾಸ್ಯಭರಿತ, ಕೌಟುಂಬಿಕ ಕಥಾಹಂದರವನ್ನು ಹೊಂದಿದೆ. ಕ್ಷೌರಿಕನ ಪಾತ್ರದಲ್ಲಿ ಬಿಗ್‌ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯಿಸಿದ್ದಾರೆ. ಲಾಸ್ಯ ನಾಗರಾಜ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಹಂಗೀರ್, ರಜನಿಕಾಂತ್, ಗೋಪಾಲಕೃಷ್ಣ ದೇಶಪಾಂಡೆ, ನಂದನ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಪ್ರಜೋತ್ ಡೇಸಾ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್, ಡಾ||ವಿ.ನಾಗೇಂದ್ರಪ್ರಸಾದ್, ಯುವಿನ್ ಹಾಡುಗಳನ್ನು ರಚಿಸಿದ್ದಾರೆ. ಋತ್ವಿಕ್ ಮುರಳಿಧರ್ ಹಿನ್ನಲೆ ಸಂಗೀತ,  ಉದಯ್ ಲೀಲಾ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ನವಂಬರ್ 8 ರಂದು ಬರಲಿದೆ `ಮಂಗಳವಾರ ರಜಾದಿನ` - Chitratara.com
Copyright 2009 chitratara.com Reproduction is forbidden unless authorized. All rights reserved.