ನಾಗರಭಾವಿಯಲ್ಲಿ ರೂಪ್‌ಸಂಗಮ್ ನೂತನ ಮಳಿಗೆ ಆರಂಭ
Posted date: 04 Tue, Dec 2018 08:39:46 AM

ನವೀನ ವಿನ್ಯಾಸದ ಮಹಿಳೆಯರ ಮತ್ತು ಮಕ್ಕಳ ಸಿದ್ದ ಉಡುಪುಗಳ ಮಾರಾಟದಲ್ಲಿ ತನ್ನದೇ ಆದ ವಿಶೇಷತೆ ಹೊಂದಿರುವ ಬಟ್ಟೆ ಅಂಗಡಿ ರೂಪ್ ಸಂಗಮ್ ಬೆಂಗಳೂರು ನಗರದಲ್ಲಿ ತನ್ನ ಮೂರನೇ ಮಳಿಗೆಯನ್ನು ಆರಂಭಿಸಿದೆ. ಈಗಾಗಲೇ ಮಲ್ಲೇಶ್ವರಂನಲ್ಲೂ ತನ್ನ ಶಾಖೆಯನ್ನು ಹೊಂದಿರುವ ಈ ಸಿದ್ದ ಉಡುಪುಗಳ ಷೋ ರೂಂ ಈಗ ನಾಗರಭಾವಿಯಲ್ಲಿ ಮತ್ತೊಂದು ಶಾಖೆಗೆ ಚಾಲನೆ ನೀಡಿದೆ. ರೂಪ್ ಸಂಗಮ್ ಮಳಿಗೆಯ ಮಾಲೀಕರಾದ ಕೃಷ್ಣ ಆರ್. ಗೌಡ ಹಾಗೂ ಅವರ ಪುತ್ರರಾದ ರಾಜೇಶ್ ಕೆ.ಗೌಡ ರೂಪ್ ಸಂಗಮ್ ಹೊಸ ಮಳಿಗೆಯ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ನೆರವೇರಿಸಿದರು. ರಾಕಿಂಗ್‌ಸ್ಟಾರ್ ಯಶ್ ಈ ನೂತನ ಮಳಿಗೆಯ ಉದ್ಘಾಟನೆಯನ್ನು  ನೆರವೇರಿಸಬೇಕಿತ್ತು. ಬೆಳಿಗ್ಗೆಯಷ್ಟೇ ಮಗಳು ಹುಟ್ಟಿದ ಸಂಭ್ರಮದಲ್ಲಿದ್ದ ಯಶ್ ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ತನ್ನ ಶುಭ ಹಾರೈಕೆಗಳನ್ನು ಮಾಲೀಕರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಲೀಕರ ಸ್ನೇಹಿತರಾದ ರಥಾವರ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಕೂಡ ಹಾಜರಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೇಶ್ ಕೆ.ಗೌಡ ನಮ್ಮ ಮಳಿಗೆಯಲ್ಲಿ ಆರಂಭದಿಂದಲೂ ಗ್ರಾಹಕರಿಗೆ ರಿಯಾಯಿತಿ ದರದ ಆಸೆ ತೋರಿಸದೆ ಉತ್ತಮ ಕ್ವಾಲಿಟಿಯ ಬಟ್ಟೆಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದ್ದೇವೆ. ಮಹಿಳೆಯರ, ಮಕ್ಕಳ ವಿಶೇಷ ಕಲೆಕ್ಷನ್‌ಗಳು ನಮ್ಮ ಷೋರೂಂನಲ್ಲಿ ಲಭ್ಯವಿವೆ ಎಂಬುದಾಗಿ ಹೇಳಿದರು.  

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಾಗರಭಾವಿಯಲ್ಲಿ ರೂಪ್‌ಸಂಗಮ್ ನೂತನ ಮಳಿಗೆ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.