ನಿರ್ದೇಶಕ ಎ ಆರ್ ಬಾಬು ನಿಧನ
Posted date: 04 Tue, Dec 2018 10:00:20 AM

ಹಲವು ವರ್ಷಗಳಿಂದ ಅಸ್ವಸ್ಥರಾಗಿದ್ದ ಹಲೋ ಯಮ ಖ್ಯಾತಿಯ ನಿರ್ದೇಶಕ ಎ ಆರ್ ಬಾಬು ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ.

1998 ರಿಂದ ನಿರ್ದೇಶಕರಾಗಿ ಕೆಲಸ ಮಾಡಿರುವ ಎ ಆರ್ ಬಾಬು ಕಿಡ್ನೀ ವೈಫಲ್ಯದಿಂದ ಅನಾರೋಗ್ಯದಲ್ಲಿದ್ದರು. ಅವರ ಶಿಷ್ಯ ಹ್ಯಾಟ್ ಟ್ರಿಕ್ ನಿರ್ದೇಶಕ ಪ್ರೇಮ್ ನಿರ್ಗತಿಕ ನಿರ್ದೇಶಕ ಎಂದು ಹೇಳಿದ್ದು ಅವರಿಗೆ ಇತ್ತೀಚಿಗೆ ಬಹಳ ನೋವು ತಂದಿತ್ತು. ಪ್ರೇಮ್ ಈ ನಿರ್ದೇಶಕರ ಕೈ ಕೆಳಗೆ ಕೆಲಸ ಕಲಿತವರು ಹಲೋ ಯಮ ಸಿನಿಮಾ ಇಂದ. ಎ ಆರ್ ಬಾಬು ಅವರ ಅತ್ಯುತ್ತಮ ಚಿತ್ರಗಳಲ್ಲಿ ಹಲೋ ಯಮ ಸಹ ಒಂದು.

ಎ ಆರ್ ಬಾಬು ಅವರ ಇನ್ನಿತರ ಚಿತ್ರಗಳು ಅಂದರೆ ಸಪ್ನೋಕಿ ರಾಣಿ, ಚಂಕಾಯಿಸಿ ಚಿಂದಿ ಉಡಾಯಿಸಿ, ಮರು ಜನ್ಮ, ಆಗೊದೆಲ್ಲ ಒಳ್ಳೇದಕ್ಕೆ, ಜೀ ಬೂಂಬ, ಖಳನಾಯಕ, ಕೂಲಿ ರಾಜ, ಚೋರ ಗುರು ಚಂಡಾಳ ಶಿಷ್ಯ.

ಎ ಆರ್ ಬಾಬು ಅವರ ಪುತ್ರ ಶಾನ್ ಸಹ ಚಿತ್ರರಂಗದಲ್ಲಿ ತೊಡಗಿಸಿಕೊಂಡವರು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಿರ್ದೇಶಕ ಎ ಆರ್ ಬಾಬು ನಿಧನ - Chitratara.com
Copyright 2009 chitratara.com Reproduction is forbidden unless authorized. All rights reserved.