ಪಂಚುಗಳ ಮಿಂಚು ಕಾಮಿಡಿಜಂಕ್ಷನ್ ಉದಯ ಕಾಮಿಡಿಯಲ್ಲಿ
Posted date: 13 Wed, Jun 2018 05:59:45 PM

ಕಾಮಿಡಿರಿಯಾಲಿಟಿ ಶೋಗಳಿಗೆ ಜನ ಮುಗಿ ಬೀಳುತ್ತಾರೆ. ಇದುಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವಟ್ರೆಂಡು. ಕಾಮಿಡಿಎಲ್ಲಾ ವರ್ಗದ ವಯೋಮಾನದ ಪ್ರೇಕ್ಷಕರಿಗೂ ಖುಷಿ ನೀಡುತ್ತದೆ. ರಿಯಾಲಿಟಿ ಶೋಗಳಲ್ಲಿ ಕಾಮಿಡಿಗೆ ನಂಬರ್ ವನ್ ಸ್ಥಾನ. ಹಾಸ್ಯಕ್ಕೆ ಮೀಸಲಾದ ಉದಯ ಕಾಮಿಡಿಚಾನಲ್ ಮೊದಲಿನಿಂದಲೂ ಸದಭಿರುಚಿಯ ಹಾಸ್ಯವನ್ನುಉಣಬಡಿಸುತ್ತಾ ಬಂದಿದೆ. ಈಗ ಮತ್ತೊಂದು ಮಹೋನ್ನತ ಹಾಸ್ಯಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲು ಸಿದ್ಧವಾಗಿದೆ.ಅದೇ ಕಾಮಿಡಿಜಂಕ್ಷನ್.
ಸಾವಿರಾರು ಎಪಿಸೋಡುಗಳಿಗೆ ಹಾಸ್ಯ ಸಂಭಾಷಣೆ ಬರೆದಿರುವ ನಗೆ ಸಾಹಿತಿಎಂ.ಎಸ್.ನರಸಿಂಹಮೂರ್ತಿ ಬರವಣಿಗೆಯ ಹೊಣೆ ಹೊತ್ತಿದ್ದಾರೆ. ಜೊತೆಗೆ ಸ್ಟ್ಯಾಂಡಪ್‌ಕಾಮಿಡಿ ನೀಡಿರಂಜಿಸಲಿದ್ದಾರೆ.
ಹಾಸ್ಯ ವೈವಿಧ್ಯ ಇರುವಅರ್ಧಗಂಟೆಯ ಈ ಕಾರ್ಯಕ್ರಮ ‘ಪಂಚುಗಳ ಮಿಂಚು ಎಂದು ಹೇಳಲಾಗಿದೆ. ನಾನ್‌ಸ್ಟಾಪ್ ನಗೆ ತುಂಬಿರುವ ಈ ಶೋ ನೃತ್ಯ, ಹಾಡು, ಗೇಮು, ಪ್ರಹಸನ ಮುಂತಾದ ಮಸಾಲೆ ಒಳಗೊಂಡ ಅಪರೂಪದಕಾಮಿಡಿ ಸರಕಿನ ಬ್ಯಾಸ್ಕೆಟ್.
‘ನಮಸ್ಕಾರಕಣಣ್ಣೋ ಎಂದುಡೈಲಾಗ್ ಹೊಡೆದುಖ್ಯಾತಿಯ ‘ಮಾರಮ್ಮನಡಿಸ್ಕ್ ಓನರ್‌ಆದಚಿತ್ರನಟಟೆನ್ನಿಸ್ ಕೃಷ್ಣ ಮೊದಲ ಬಾರಿಗೆರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಮನೆಯಯಜಮಾನನಾಗಿ ‘ವಿಶ್ವನ ಪಾತ್ರಕ್ಕೆ ಮೆರುಗು ನೀಡಿದ್ದಾರೆ. ವಿಶ್ವ-ವಿಶಾಲೂ ದಂಪತಿಗೆ ಲೈಲಾ ಎಂಬ ಮುದ್ದಾದ ಮಗಳು. ವಿಶ್ವ ಚಿತ್ರನಟಿಯೊಬ್ಬಳನ್ನು ಮದುವೆಆಗಬೇಕೆಂದು ಕನಸು ಕಂಡಿದ್ದ. ವಿಶಾಲೂ ಕ್ರಿಕೆಟ್ ಪಟುವನ್ನು ಕೈ ಹಿಡಿಯಲು ಹಾತೊರೆದಿದ್ದಳು. ಆದರೆ ಬ್ರಹ್ಮ ಹಾಕಿದಗಂಟುಎಡವಟ್ಟಾಗಿ ವಿಶ್ವ-ವಿಶಾಲೂ ಜೋಡಿಯಾದರು.
ತಮ್ಮ ಕನಸುಗಳನ್ನು ಮಗಳ ಮೂಲಕ ಸಾಕಾರ ಮಾಡಿಕೊಳ್ಳಬೇಕೆಂದು ಸಿನಿಮಾಅಥವಾಕ್ರೀಡಾರಂಗದ ಅಳಿಯನನ್ನು ತರುವಅವಿರತ ಪ್ರಯತ್ನ ಈ ಶೋನಲ್ಲಿ ನಗೆಯ ಮಹಾಪೂರವನ್ನೇ ಹರಿಸುತ್ತದೆ.
ಚಿತ್ರನಟ ಹಾಗೂ ಖ್ಯಾತ ಹಾಸ್ಯಪಟು ಮಿಮಿಕ್ರಿ ಗೋಪಿ ವಿವಿಧ ವೇಷಗಳಲ್ಲಿ ಕಾಣಿಸಿಕೊಂಡು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೊಸ ಬಗೆಯ ವ್ಯಾಖ್ಯಾನ ನೀಡಲಿದ್ದಾರೆ.
ಚಲನಚಿತ್ರ ನಟಿ ಸನಾತನಿ ಮೊದಲ ಬಾರಿಗೆ ನಿರೂಪಕಿಯಾಗಿ ನೃತ್ಯ ಮತ್ತು ಜೋಕುಗಳ ಮೂಲಕ ಹೊಸ ಪಾತ್ರದಲ್ಲಿ ನಗೆಯನ್ನ ಹಂಚಿದ್ದಾರೆ. ಉದಯ ಕಾಮಿಡಿಚಾನಲ್‌ನ ಹಾಸ್ಯಕಲಾವಿದರಾಕೆಂಪೇಗೌಡ, ಶ್ರೀಕಂಠ, ಸ್ಮೈಲ್ ಶಶಿ, ಹರೀಶ್, ಕೃಷ್ಣ ವಿವಿಧ ಪಾತ್ರಗಳಲ್ಲಿ ರಂಜಿಸಿದ್ದಾರೆ. ಅನೇಕ ಹೊಸ ಮುಖಗಳನ್ನು ಮೊದಲ ಬಾರಿಗೆಇಲ್ಲಿ ಪರಿಚಯಿಸಲಾಗಿದೆ.
 ಈ ಬಗ್ಗೆ ಮಾತಾಡುತ್ತಾ, ‘ನಾವು ನೀಡಿರುವ ಅನೇಕ ಹೊಚ್ಚ ಹೊಸ ಹಾಸ್ಯ ಕಾರ್ಯಕ್ರಮಗಳಲ್ಲಿ ಇದು ಭಿನ್ನವಾಗಿ ನಿಲ್ಲುತ್ತದೆ ಹಾಗೂ ವೀಕ್ಷಕರಿಗೆ ಭರಪೂರ ಮನರಂಜನೆಯನ್ನು ನೀಡುತ್ತದೆ ಎಂದುಉದಯ ಕಾಮಿಡಿ ವಾಹಿನಿಯ ಮುಖ್ಯಸ್ಥರಾದ ಭುವನ್‌ಶಾಸ್ತ್ರಿ ಅಭಿಪ್ರಾಯ ಪಟ್ಟಿರುತ್ತಾರೆ.
ಪಂಚುಗಳ ಮಿಂಚನ್ನು ಹೊತ್ತುಕೊಂಡು ಕಾಮಿಡಿಜಂಕ್ಷನ್ ಇದೇಜೂನ್ 16ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 8.30ಕ್ಕೆ ಉದಯ ಕಾಮಿಡಿಚಾನಲ್‌ನಲ್ಲಿಪ್ರಸಾರವಾಗಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪಂಚುಗಳ ಮಿಂಚು ಕಾಮಿಡಿಜಂಕ್ಷನ್ ಉದಯ ಕಾಮಿಡಿಯಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.