ಪತಿ ಬೇಕು.ಕಾಂ ನಾಳೆಯಿಂದ ಬಿಡುಗಡೆ
Posted date: 06 Thu, Sep 2018 09:19:05 AM

ಇಂದಿನ ಆಧುನಿಕ ಜಗತ್ತಿನಲ್ಲಿ ವಿವಾಹ ಅಂತರ್ಜಾಲ ಮಾಧ್ಯಮದ ಸಹಾಯದಿಂದ ಆಗುತ್ತಿದೆ ಎಂಬುದು ತಿಳಿದಿರುವ ವಿಚಾರ. ಅಂತಹುದೇ ಕೆಲವು ಪ್ರಸಂಗಗಳು ?ಪತಿಬೇಕು.ಕಾಂ? ಕನ್ನಡ ಸಿನಿಮಾದಲ್ಲಿ ಮನಸ್ಸಿಗೆ ತಟ್ಟುವ ಹಾಗೆ ಹೃದಯಕ್ಕೆ ಹತ್ತಿರವಾಗುವ ಹಾಗೆ ನಿರ್ದೇಶನ ಮಾಡಿದ್ದಾರೆ ಯುವ ನಿರ್ದೇಶಕ ರಾಕೇಶ್.
ಈ ಚಿತ್ರದ ನಿರ್ದೇಶನದ ಜೊತೆಗೆ ಜೈ ಮಾರುತಿ ಪಿಕ್ಚರ್ಸ್ ಅಡಿಯಲ್ಲಿ ಶ್ರೀನಿವಾಸ್ ಹಾಗೂ ಮಂಜುನಾಥ್ ಜೊತೆ ಹಣ ಸಹ ಹೂಡಿದ್ದಾರೆ ರಾಕೇಶ್. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಜನಪ್ರಿಯ ನಿರೂಪಕಿ ಶೀತಲ್ ಶೆಟ್ಟಿ ಹಾಗೂ ಅವರ ಹೆತ್ತವರ ಪಾತ್ರಗಳಲ್ಲಿ ಹರಿಣಿ ಹಾಗೂ ಕೃಷ್ಣ ಅಡಿಗ ಅಭಿನಯಿಸಿದ್ದಾರೆ. ಮದುವೆಗಾಗಿ ಗಂಡು ಹುಡುಕುವ ಹಲವಾರು ಪ್ರಸಂಗಗಳು ಇಂದಿನ ಯುವ ಜನಾಂಗಕ್ಕೆ ಹತ್ತಿರವಾಗಲಿದೆ ಎಂದು ನಿರ್ದೇಶಕ ರಾಕೇಶ್ ಹೇಳುತ್ತಾರೆ. ಯಾಕಪ್ಪಾ ದ್ಯಾವರೆ ಅಡಿಸ್ತಿಯ ಕ್ಯಾಬರೆ....ಎಂಬ ಹಾಡು ಈ ಚಿತ್ರದಲ್ಲಿ ಆನೇಕ ವಿಚಾರಗಳನ್ನು ಹೇಳುತ್ತದೆ ಚಿತ್ರವು
ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. .
ಯು ಅರ್ಹತಾ ಪತ್ರ ಪಡೆದಿರುವ ?ಪತಿ ಬೇಕು.ಕಾಂ? ಚಿತ್ರಕ್ಕೆ ಯೋಗಿ ಛಾಯಾಗ್ರಹಣ, ಕೌಶಿಕ್ ಶರ್ಮ ಸಂಗೀತ, ವಿಜಯಕುಮಾರ್ ಸಂಕಲನ, ಹರ್ಷವರ್ಧನ ರಾಜ್ ಹಿನ್ನಲೆ ಸಂಗೀತ ನೀಡಿದ್ದಾ
ರೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪತಿ ಬೇಕು.ಕಾಂ ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.