ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪದ, ಪದ - ?ಶೈಲೂ? ಪರಮಾನಂದ
Posted date: 06 Tue, Sep 2011 ? 12:09:19 PM

ಅಂದು ’ಆಕಸ್ಮಿಕ’ ಚಿತ್ರದಲ್ಲಿ ಅಣ್ಣಾವ್ರು ಹಾಡಿದರು ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು. ಅದು ನಾಡು, ಭಾಷೆ, ಸಂಸ್ಕೃತಿಗೆ ಸಂಬಂಧಪಟ್ಟ ಜನಪ್ರಿಯ ಗೀತೆಯಾಯಿತು. ಇಂದಿನ ಕಾಲಕ್ಕೆ ಕನ್ನಡ ಪದದ ಬಗ್ಗೆ ಪುನೀತ್ ರಾಜ್‌ಕುಮಾರ್ ಅತ್ಯಂತ ಸಂತೋಷದಿಂದ ’ಶೈಲೂ’ ಕನ್ನಡ ಚಿತ್ರಕ್ಕೆ ನಾಯಕನಟ ಗಣೇಶ್ ಅವರ ಹಾಡಿಗೆ ಧ್ವನಿಗೂಡಿಸಿದ್ದಾರೆ.

ಪದ, ಪದ ಕನ್ನಡ ಪದ ನಾನು ರತ್ನನ್ ಪದ ಕೇಳ್ಕೊಂಡು ಬೆಳೆದೋನು.................. ಎಂದು ಜಿ.ಪಿ.ರಾಜರತ್ನಂ ಅವರನ್ನು ನೆನಪಿಸುವಂತಹ ಗೀತೆಯನ್ನು ರಚಿಸಿದವರು ಬಹುಮುಖಿ ಎಸ್. ನಾರಾಯಣ್. ಗಣೇಶ್ ಅವರ ಬಾಯಿಂದ ಹೊರಡುವ ಪುನೀತ್ ಅವರ ಧ್ವನಿ ’ಶೈಲೂ’ ಚಿತ್ರದ ಪ್ರಮುಖ ಘಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ನಿರ್ಮಾಪಕ ಕೆ.ಮಂಜು ತಿಳಿಸಿದ್ದಾರೆ.


ಶಿಸ್ತಿನ ಸಿಪಾಯಿ ನಿರ್ದೇಶಕ ಎಸ್. ನಾರಾಯಣ್ ’ಶೈಲೂ’ ಚಿತ್ರವನ್ನು ಅಂದುಕೊಂಡ ಹಾಗೆ ಚಿತ್ರೀಕರಣವನ್ನು ಮುಗಿಸಿ ಇನ್ನಿತರ ಚಟುವಟಿಕೆಗಳನ್ನು ಪೂರ್ಣಗೊಳಿಸಿದ್ದಾರೆ. ೧೦ ವರ್ಷಗಳ ಬಳಿಕ ’ಜಮೀನ್ದಾರ’ ನಂತರ ಕೆ. ಮಂಜು ಅವರ ನಿರ್ಮಾಣದಲ್ಲಿ ನಿರ್ದೇಶಕರು ರಿಮೇಕ್ ಚಿತ್ರಕ್ಕೂ ಕನ್ನಡದ ಸೊಬಗು ಸೌಂದರ್ಯವನ್ನು ತಂದಿದ್ದಾರೆ. ’ಶೈಲೂ’ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಲಯಾಳಿ ಹುಡುಗಿ ಭಾಮಾ ಜೊತೆಗೆ ರಂಗಾಯಣ ರಘು ಹಾಗೂ ಸುಚೇಂದ್ರ ಪ್ರಸಾದ್ ಸಹ ಮುಖ್ಯ ಭೂಮಿಕೆಯಲ್ಲಿ ಇರುವ ಚಿತ್ರ  ಮುನ್ನಾರ್ ಅಂತಹ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಹತ್ತಾರು ದಿವಸ ಚಿತ್ರೀಕರಣವನ್ನು ಮುಗಿಸಿ ಇಡೀ ಚಿತ್ರಕ್ಕೆ ಒಂದು ವಿಶೇಷ ಛಾಪು ಮೂಡುವಂತೆ ಮಾಡಲಾಗಿದೆ. ಬೆಂಗಳೂರು, ಮೈಸೂರು, ಗೋಪಾಲಸ್ವಾಮಿ ಬೆಟ್ಟ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವ ’ಶೈಲೂ’ ನಿರ್ಮಾಪಕ ಕೆ. ಮಂಜು ಅವರ ಹಲವು ಸಿನಿಮಾಗಳ ಸಾಲಿನಲ್ಲಿ ಪ್ರಮುಖವಾದದ್ದು.

ಜಾಸ್ಸಿ ಗಿಫ್ಟ್ ಅವರ ಸಂಗೀತ, ಜಗದೀಶ್ ವಾಲಿ ಅವರ ಛಾಯಾಗ್ರಹಣ ಇರುವ ’ಶೈಲೂ’ ಚಿತ್ರಕ್ಕೆ ನಿರ್ದೇಶಕ ಎಸ್. ನಾರಾಯಣ್, ಕವಿರಾಜ್, ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯವನ್ನು ರಚಿಸಿದ್ದಾರೆ.
ವಿಠ್ಠಲ, ಯತಿರಾಜ್ ಹಾಗೂ ಗಜೇಂದ್ರ ಸಹ ತಾರಾಗಣದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪದ, ಪದ - ?ಶೈಲೂ? ಪರಮಾನಂದ - Chitratara.com
Copyright 2009 chitratara.com Reproduction is forbidden unless authorized. All rights reserved.