ಪಾಪಿ ಚಿರಾಯು ಚಿತ್ರ ಈ ವಾರ ಬಿಡುಗಡೆ
Posted date: 06 Wed, Nov 2019 09:53:46 AM

ಬಿ.ಬಸವರಾಜ್ ಮೂವೀಸ್ ಲಾಂಛನದಲ್ಲಿ, ಬಿ.ಬಸವರಾಜು - ನಿರ್ಮಾಣದ ಪಾಪಿ ಚಿರಾಯು ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ  ಯು/ಎ ಸರ್ಟಿಫಿಕೆಟ್ ಪಡೆದ ಈ ಚಿತ್ರ ಈವಾರ ಬಿಡುಗಡೆಯಾಗುತ್ತಿದೆ. ನಟರಾಜ್ ಜೆ.ಕೆ.ಗೌಡ-ನಿರ್ದೇಶಸಿರುವ ಈ ಚಿತ್ರಕ್ಕೆ ಛಾಯಾಗ್ರಹಣ - ಮಂಜುನಾಥ ಬಿ ಪಾಟೀಲ್, ಸಂಗೀತ - ಜೈ ಮೋಹನ್ (ಮಜಾ ಟಾಕೀಸ್), ಸಾಹಸ - ಕೌರವ ವೆಂಕಟೇಶ್, ನೃತ್ಯ - ಮಂಜು ಸುಳ್ಯ, ಸಂಕಲನ - ಗಂಗಾಧರ್, ತಾರಾಗಣದಲ್ಲಿ - ರಾಜ್ ಬಿ ಗೌಡ, ಕುರಿ ಪ್ರತಾಪ್,  ನಿರಂಜನ್ ದೇಶಪಾಂಡ್, ಮಂಜು ಪಾವಗಡ, ಚೈತ್ರ ಮುಂತಾದವರು ಅಭಿನಯಿಸಿದ್ದಾರೆ.  ಒಟ್ಟು5 ಹಾಡುಗಳಿರುವ ಈ ಚಿತ್ರವು ಮೈಸೂರು, ಮಂಡ್ಯ, ಕುಶಾಲನಗರ ಮುಂತಾದೆಡೆಗಳಲ್ಲಿ ಚಿತ್ರೀಕರಣ ಸಾಗಿದೆ. ಒಬ್ಬ ಚಿಂದಿ ಆಯ್ದುಕೊಂಡಿರುವ ಹುಡುಗನಿಗೆ ಒಬಳು ವೇಶ್ಯೆಯ ಮೇಲೆ ಪ್ರೀತಿ ಹುಟ್ಟುತ್ತದೆ.  ಇಬ್ಬರೂ ತಮ್ಮದೇ ಒಂದು ಪ್ರಪಂಚ ಕಟ್ಟಿಕೊಂಡು ಬದುಕಬೇಕೆಂದಿರುವಾಗ ಸಮಾಜ ಅವರನ್ನು ಹೇಗೆ ನೋಡುತ್ತದೆ ಎಂಬುದೇ ಚಿತ್ರದ ಕಥಾವಸ್ತು.Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed