ಪ್ರಥಮ ಹಂತ ಮುಗಿಸಿದ ಸಾರ್ವಜನಿಕ
Posted date: 03 Mon, Dec 2018 08:26:23 AM

ಈ ವರ್ಷತೆರೆಕಂಡು ಪ್ರೇಕ್ಷಕರು ಹಾಗೂ ಪತ್ರಿಕೆಗಳ ಮುಕ್ತಕಂಠದಲ್ಲಿ ಪ್ರಶಂಸೆಗೊಳಗಾಗಿ ಶತದಿನೋತ್ಸವ ಆಚರಿಸಿದ ``ಗುಲ್ಟ``ಚಿತ್ರತಂಡವು ಈಗ ಮತ್ತೊಂದುಚಿತ್ರ ನಿರ್ಮಿಸುತ್ತಿದೆ.

ವಿವಿಡ್ ಫಿಲಂಸ್ ಲಾಂಚನದಡಿಯಲ್ಲಿ ಶ್ರೀ ಪ್ರಶಾಂತರೆಡ್ಡಿ, ದೇವರಾಜ್, ಜನಾರ್ಧನ್, ಚಿಕ್ಕಣ್ಣ ನಿರ್ಮಿಸುತ್ತಿರುವಎರಡನೇಕಾಣಿಕೆ ``ಸಾರ್ವಜನಿಕರಿಗೆ ಸುವರ್ಣವಕಾಶ`` ಹಾಸ್ಯಚಿತ್ರದ ಪ್ರಥಮ ಹಂತದಚಿತ್ರೀಕರಣವುಇದೇ ೨೩ರಂದು ನಗರದಲ್ಲಿ ಮುಕ್ತಾಯಗೊಂಡಿತು.  

ಹದಿನೈದು ದಿವಸಗಳ ಕಾಲ ನಡೆದಚಿತ್ರದಚಿತ್ರೀಕರಣದಲ್ಲಿ ರಿಷಿ, ಧನ್ಯ, ಸೀನುಮಿತ್ರ ಮುಂತಾದವರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ವಿಘ್ನೇಶ್‌ರಾಜ್‌ಛಾಯಾಗ್ರಹಣದಲ್ಲಿ ನಿರ್ದೇಶಕಅನೂಪ್‌ರಾಮಸ್ವಾಮಿಕಶ್ಯಪ್‌ನಗರದ ಸುತ್ತಮುತ್ತ ಚಿತ್ರಿಸಿಕೊಂಡರು.

ಚಿತ್ರದ ದ್ವಿತೀಯಾ ಹಂತದಚಿತ್ರೀಕರಣವು ಸದ್ಯದಲ್ಲೇಆರಂಭವಾಗಲಿದೆಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರಕ್ಕೆಜನಾರ್ಧನ್‌ಚಿಕ್ಕಣ್ಣ, ಹರಿಕೃಷ್ಣಎನ್. ಸಂಭಾಷಣೆ, ವಿಘ್ನೇಶ್‌ರಾಜ್‌ಛಾಯಾಗ್ರಹಣ, ಜಯಂತ್‌ಕಾಯ್ಕಿಣಿ ಸಾಹಿತ್ಯ ಮೆದನ್ ಮುಕುಂದನ್ ಸಂಗೀತ, ಶಾಂತಕುಮಾರ್ ಸಂಕಲನ, ವರದರಾಜ್‌ಕಲೆಯಿದ್ದು, ಚಿತ್ರವನ್ನುಅನೂಪ್‌ರಾಮಸ್ವಾಮಿಕಶ್ಯಪ್ ನಿರ್ದೇಶಿಸುತ್ತಿದ್ದಾರೆ.

ತಾರಾಗಣದಲ್ಲಿ ರಿಷಿ, ಧನ್ಯ, ಬಾಲಕೃಷ್ಣ, ಧನ್ಯ, ದತ್ತಣ್ಣರಂಗಾಯಣರಘು, ಸಿದ್ದು ಮೂಲಿಮನೆ, ಸೀನುಮಿತ್ರ ಮುಂತಾದವರಿದ್ದಾರೆ.   

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರಥಮ ಹಂತ ಮುಗಿಸಿದ ಸಾರ್ವಜನಿಕ - Chitratara.com
Copyright 2009 chitratara.com Reproduction is forbidden unless authorized. All rights reserved.