ಬಳೆಗಾರನ ಸಂಚಾರ
Posted date: 5/January/2009

    `ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ` ಈ ಸುಂದರ ಜಾನಪದ ಗೀತೆಯನ್ನು ಕೇಳದ ಕಿವಿಗಳು ಕನ್ನಡ ನೆಲದಲ್ಲಿ ಸಿಗಲಾರದು. ಈ ಗೀತೆಯ ಮೊದಲ ಪದವನ್ನು ಚಿತ್ರದ ಶೀರ್ಷಿಕೆಗೆ ಬಳಸಿಕೊಂಡಿದ್ದಾರೆ ನಿರ್ಮಾಪಕ ರಮೇಶ್‌ಕಶ್ಯಪ್. ಹಿಂದಿನ ವರ್ಷದಲ್ಲಿ ತೆರೆ ಕಂಡು ಯಶಸ್ಸು ಕಂಡ ಕೆಲವೇ ಚಿತ್ರಗಳಲ್ಲೊಂದಾದ `ನಂದ ಲವ್ಸ್ ನಂದಿತಾ` ಚಿತ್ರವನ್ನು ನಿರ್ಮಿಸಿದ್ದ ರಮೇಶ್‌ಕಶ್ಯಪ್ ಪ್ರಸಕ್ತ ವರ್ಷದಲ್ಲಿ ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಂದ ನಂದಿತನಿಗೆ ಕತೆ ಬರೆದಿದ್ದ ಅಜಯ್‌ಕುಮಾರ್ ಈ ಚಿತ್ರಕ್ಕೂ ಕತೆ ಬರೆಯುವ ಹೊಣೆ ಹೊತ್ತಿದ್ದಾರೆ. ವಾತ್ಸಲ್ಯಭರಿತ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಪ್ರಮುಖರೆನಿಸಿರುವ ಓಂ.ಸಾಯಿಪ್ರಕಾಶ್ `ಭಾಗ್ಯದ ಬಳೆಗಾರ`ನನ್ನು ನಿರ್ದೇಶಿಸುತ್ತಿದ್ದಾರೆ.

   ಪ್ರಸ್ತುತ ಬಳೆಗಾರ ರಾಮನಗರದಲ್ಲಿ ಬೀಡುಬಿಟ್ಟಿದ್ದಾನೆ. ಈ ತಿಂಗಳು ಪೂರ್ತಿ ಚಿತ್ರಕ್ಕೆ ರೇಷ್ಮೆನಗರದಲ್ಲೇ ಚಿತ್ರೀಕರಣ ನಡೆಯಲಿದೆ.  ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ `ಭಾಗ್ಯದ ಬಳೆಗಾರ`ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸುಂದರ ಪ್ರಾಕೃತಿಕ ಸ್ಥಳಗಳಲ್ಲಿ ಚಿತ್ರೀಕೃತವಾಗುವ ಬಳೆಗಾರನನ್ನು ಪಿ.ಕೆ.ಎಚ್ ದಾಸ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ನಾಗೇಂದ್ರಪ್ರಸಾದ್, ಆನಂದ್ ಗೀತರಚನೆ, ಲಿಂಗರಾಜ್ ಕಗ್ಗಲ್ ಸಹನಿರ್ದೇಶನ, ಪಿ.ಆರ್.ಸೌಂದರರಾಜ್ ಸಂಕಲನ, ಮಧುಗಿರಿಪ್ರಕಾಶ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಆದರ್ಶ, ಆದಿಲೋಕೇಶ್, ಸತ್ಯಜಿತ್, ಸುಮಿತ್ರ, ಅಮೃತ, ಪದ್ಮಾವಾಸಂತಿ, ರಮೇಶ್‌ಭಟ್, ಶೋಭಾರಾಘವೇಂದ್ರ, ಪ್ರಕಾಶ್‌ಹೆಗ್ಗೋಡು, ಸುರೇಶ್ಚಂದ್ರ, ಮಳವಳ್ಳಿಸಾಯಿಕೃಷ್ಣ, ಸುರೇಶ್‌ಮಂಗಳೂರು ಮುಂತಾದವರಿದ್ದಾರೆ. ಅಪ್ಪಟ್ಟ ಕನ್ನಡತಿಯೊಬ್ಬಳು  `ಭಾಗ್ಯದ ಬಳೆಗಾರ`ನ iಯಕಿಯಾಗುವ ಸಾಧ್ಯತೆಯಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಳೆಗಾರನ ಸಂಚಾರ - Chitratara.com
Copyright 2009 chitratara.com Reproduction is forbidden unless authorized. All rights reserved.