ಬಹು ನಿರೀಕ್ಷಿತ ಚಿತ್ರ ``ಉತ್ತರಕಾಂಡ``ಬಹುಭಾಷಾ‌ ತಾರೆ ಭಾವನಾ ಮೆನನ್
Posted date: 08 Sat, Jun 2024 01:42:59 PM
ಬಹುಭಾಷಾ‌ ತಾರೆ ಭಾವನಾ ಮೆನನ್ ಉತ್ತರಕಾಂಡ ಚಿತ್ರದಲ್ಲಿ "ವೀರವ್ವ" ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾವನಾ‌ ಅವರ‌ ಹುಟ್ಟುಹಬ್ಬದ ಅಂಗವಾಗಿ‌ ಚಿತ್ರ ತಂಡ ಇಂದು ಘೋಷಿಸಿ ಪೋಸ್ಟರ್ ಬಿಡುಗಡೆ ಮಾಡಿದೆ. ಭಾವನಾ ಅವರನ್ನು ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಅವರೊಡನೆ ತೆರೆಯ ಮೇಲೆ ಕಾಣಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
 
ರೋಹಿತ್ ಪದಕಿ ನಿರ್ದೇಶನದ "ಉತ್ತರಕಾಂಡ" ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ‌ ಧನಂಜಯ, ಐಶ್ವರ್ಯ ರಾಜೇಶ್, ದಿಗಂತ್ ಮಂಚಾಲೆ, ರಂಗಾಯಣ ರಘು, ಚೈತ್ರ ಆಚಾರ್,ವಿಜಯ್ ಬಾಬು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿರುತ್ತಾರೆ.
 
ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed