ಭಾರತೀಪುರ ಕ್ರಾಸ್‌ಗೆ ಮೂರು ಪ್ರಶಸ್ತಿ
Posted date: 03 Thu, May 2018 09:57:33 AM
ಇತ್ತೀಚಿನ ದಿನಗಳಲ್ಲಿ ಕಿರುಚಿತ್ರಗಳು ಎಲ್ಲಾ ಕಡೆ ಸೌಂಡ್ ಮಾಡುತ್ತಿವೆ. ಚಿತ್ರರಂಗಕ್ಕೆ ಬರುವವರಿಗೆ ಕಿರುಚಿತ್ರ ಒಂದು ವೇದಿಕೆಯಾಗಿದೆ. ಅಂತಹ ಚಿತ್ರಗಳನ್ನು ನಿರ್ಮಿಸುವವರಿಗೆ ಪ್ರೋತ್ಸಾಹ ನೀಡಲೆಂದು ಎಬಿ ನೆಟ್ ವರ್ಕ್ ಹಾಗೂ ಎಐಎಂ ಇನ್ಫೋಮೀಡಿಯಾ ಎಂಬ ಸಂಸ್ಥೆಗಳು ಆಯೋಜಿಸಿದ್ದ ಕಿರುಚಿತ್ರೋತ್ಸವ ಸ್ಪರ್ಧೆಯನ್ನು ಏರ್ಪಡಿಸಿದ್ದವು. 
ಇತ್ತೀಚೆಗೆ ನಯನ ಸಭಾಂಗಣದಲ್ಲಿ ೨ ದಿನಗಳ ಕಾಲ ನಡೆದ ಈ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ದೇಶ - ವಿದೇಶಗಳಿಂದ ಹಲವಾರು ಕಿರುಚಿತ್ರಗಳು ಪಾಲ್ಗೊಂಡಿದ್ದವು. ೨ನೇ ದಿನ ಅತ್ಯುತ್ತಮ ಚಿತ್ರಗಳಿಗೆ ಕಲಾವಿದ,  ತಂತ್ರಜ್ಞರಿಗೆ ೩೧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಚಿತ್ರೋತ್ಸವದಲ್ಲಿ ಕನ್ನಡದ ಹಲವಾರು ಚಿತ್ರಗಳು ಪ್ರಶಸ್ತಿ ಗಳಿಸಿದ್ದು ವಿಶೇಷವಾಗಿತ್ತು. 
ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಂಚಾರಿ ವಿಜಯ್ ಪಡೆದರು. ಪತ್ರಕರ್ತ ವಿಜಯ್ ಭರಮಸಾಗರ ಅವರ ಭಾರತೀಪುರ ಕ್ರಾಸ್ ಚಿತ್ರಕ್ಕೆ  ಟಾಪ್  ೩, ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಮತ್ತು ಸುದೀಪ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಧ್ವನಿ ಹಾಗೂ ಇಂಟರ್ ನ್ಯಾಷನಲ್ ಕ್ಯಾಟಗಿರಿ ಅವಾರ್ಡ್ ಕೂಡ ಈ ಚಿತ್ರಕ್ಕೆ ಲಭಿಸಿದೆ.  ಅಂತಾರಾಷ್ಟ್ರೀಯ ವಿಭಾಗದಲ್ಲಿ ಇಂಗ್ಲೆಂಡ್ ನ  ನಾದಿರ್ ಮೌರ್ಯ ನಿರ್ದೇಶನದ ಎಂ.ಎಸ್. ನಂದಿನಿ ಯುಕೆ  ಲುಕುಡ್ ಇನ್ ಮತ್ತು  ಅಮೆರಿಕದ ಇಮಾ ಬುರೆಟ್ ನಿರ್ದೇಶನದ ಟೇಕ್ ದಿ ರೆನ್ಸ್ ಪ್ರಶಸ್ತಿ ಲಭಿಸಿದೆ. ಅಲ್ಲದೆ ಲೈಫ್ ಟೈಮ್  ಅಚೀವ್‌ಮೆಂಟ್ ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್   ಪಡೆದುಕೊಂಡಿದ್ದಾರೆ. ಅತ್ಯುತ್ತಮ ನಿರ್ದೇಶನಕ್ಕಾಗಿ ಮಾ. ಚಂದ್ರು ಅವರು ತಮ್ಮ ಮಾತೃಭಾಷಾ ಎಂಬ ಕಿರುಚಿತ್ರ ನಿರ್ದೇಶನಕ್ಕಾಗಿ ಪಡೆದುಕೊಂಡಿದ್ದಾರೆ.  
ಈ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಹಿರಿಯ ನಿರ್ದೇಶಕ ಭಗವಾನ್, ಅಮೃತಾ ರಾವ್, ಮೈತ್ರಿಯಾ ಗೌಡ, ಸಂಜನಾ ಪ್ರಕಾಶ್ ಹಾಗೂ ನಿರ್ದೇಶಕ್ ಆದತ್ ಎಂ.ಪಿ. ಉಪಸ್ಥಿತರಿದ್ದರು
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಭಾರತೀಪುರ ಕ್ರಾಸ್‌ಗೆ ಮೂರು ಪ್ರಶಸ್ತಿ - Chitratara.com
Copyright 2009 chitratara.com Reproduction is forbidden unless authorized. All rights reserved.