ಮಂಜುನಾಥ ಬಿ.ಎ.ಎಲ್.ಎಲ್.ಬಿ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
Posted date: 09 Mon, Jan 2012 ? 09:00:37 AM

ಗೌರಮ್ಮ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎ.ಸುರೇಶ್ ನಿರ್ಮಿಸುತ್ತಿರುವ ‘ಮಂಜುನಾಥ ಬಿ.ಎ.ಎಲ್.ಎಲ್.ಬಿ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
      ಜಗ್ಗೇಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಮೋಹನ್ ನಿರ್ದೇಶಿಸುತ್ತಿದ್ದಾರೆ. ಸಂಭಾಷಣೆಯನ್ನು ಮೋಹನ್ ಅವರೇ ಬರೆದಿದ್ದಾರೆ. ರೀಮಾವೊರಾ ನಾಯಕಿಯಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಕರಿಬಸವಯ್ಯ, ಸ್ವಸ್ತಿಕ್ ಶಂಕರ್, ಗಿರಿಜಾ ಲೋಕೇಶ್, ಶಂಕರ್ ಪಾಟೀಲ್, ರಾಣಿ ಮುಂತಾದವರಿದ್ದಾರೆ. ವಿನಯ್‌ಚಂದ್ರ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಅಶೋಕ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನವಿರುವ ‘ಮಂಜುನಾಥ ಬಿ.ಎ.ಎಲ್.ಎಲ್.ಬಿ ಚಿತ್ರಕ್ಕೆ ರವಿಶಂಕರ್ ಅವರ ನಿರ್ಮಾಣ ನಿರ್ವಹಣೆಯಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಂಜುನಾಥ ಬಿ.ಎ.ಎಲ್.ಎಲ್.ಬಿ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.