ಮಡಿಕೇರಿಯಲ್ಲಿ ಕೋಕೋ
Posted date: 23 Fri, Sep 2011 ? 05:47:11 PM
ಭರಣಿ ಮಿನರಲ್ಸ್ ಲಾಂಛಾನದಲ್ಲಿ ಭಾಸ್ಕರ್ ಅವರು ನಿರ್ಮಿಸುತ್ತಿರುವ ಕೋಕೋ ಚಿತ್ರಕ್ಕೆ ಮಡಿಕೇರಿಯಲ್ಲಿ ಬಿರುಸಿನ ಚಿತ್ರೀಕರಣನಡೆಯುತ್ತಿದೆ. ಸಕಲೇಶಪುರ ಹಾಗೂ ಕುಕ್ಕೆಸುಬ್ರಹ್ಮಣ್ಯದಲ್ಲೂ ಈ ಹಂತದ ಚಿತ್ರೀಕರಣ ಸಾಗಲಿದೆ. ಮಾತಿನ ಭಾಗದ ಸನ್ನಿವೇಶಹಾಗೂ ಎರಡು ಹಾಡುಗಳು ಈ ಹಂತದಲ್ಲಿ ಚಿತ್ರೀಕರಣಗೊಳ್ಳಲಿದೆ. ಶ್ರೀನಗರಕಿಟ್ಟಿ, ಪ್ರಿಯಾಮಣಿ, ಬುಲೆಟ್ ಪ್ರಕಾಶ್ ಹಾಗೂ ಸಹಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಆರ್.ಚಂದ್ರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಆದಿ ಅವರ ಸಹ ನಿರ್ಮಾಣವಿದೆ.ರಮಣಗೋಕುಲ ಅವರ ಸಂಗೀತ ನಿರ್ದೇಶನವಿರುವ ?ಕೋಕೋ?ಗೆ ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ಸಂಕಲನ, ಹೊಸ್ಮನೆಮೂರ್ತಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು, ರಾಮ್‌ಲಕ್ಷ್ಮಣ್ ಸಾಹಸ ನಿರ್ದೇಶನವಿರುವ ಈ ಚಿತ್ರದತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ಪ್ರಿಯಾಮಣಿ, ಶ್ರೀಹರಿ, ಅನುಪ್ರಭಾಕರ್, ಹರ್ಷಿಕಾ ಪೂಣಚ್ಛ, ರವಿಕಾಳೆ, ರಂಗಾಯಣ ರಘು,ಸಂಪತ್‌ಕುಮಾರ್, ಸುರೇಶ್ ಮಂಗಳೂರು, ಹೊನ್ನವಳ್ಳಿ ಕೃಷ್ಣ, ರಾಜು ತಾಳಿಕೋಟೆ, ಮಿತ್ರಾ, ರಘುರಾಂ, ಮೋಹನ್ಜುನೇಜಾ, ಬಿರಾದಾರ್, ಜಿಮ್‌ರವಿ, ಪದ್ಮಜಾರಾವ್, ವಿಜಯಸಾರಥಿ, ಯತಿರಾಜ್, ಸ್ವಯಂವರ ಚಂದ್ರು ಮುಂತಾದವರಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಡಿಕೇರಿಯಲ್ಲಿ ಕೋಕೋ - Chitratara.com
Copyright 2009 chitratara.com Reproduction is forbidden unless authorized. All rights reserved.