ಮಹರ್ಷಿವಾಣಿ ಕಾರ್ಯಕ್ರಮಕ್ಕೆ 5ನೇ ವರ್ಷದ ಸಂಭ್ರಮ
Posted date: 13 Thu, Jun 2019 09:00:14 AM

ಜ಼ೀ ಕನ್ನಡ ವಾಹಿನಿಯಲ್ಲಿ ಡಾ|| ಮಹರ್ಷಿ ಆನಂದ್ ಗುರೂಜಿಯವರು ನಡೆಸಿಕೊಡುತ್ತಿರುವ ಮಹರ್ಷಿವಾಣಿ ಕಾರ್ಯಕ್ರಮ ಈಗ ಯಶಸ್ವಿಯಾಗಿ 4 ವರ್ಷಗಳನ್ನು ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದೆ. ಕಿರುತೆರೆಯಲ್ಲಿ ಪ್ರಸಾವಾಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದಂತಹ ಕಾರ್ಯಕ್ರಮ ಇದಾಗಿದೆ. ಇದಕ್ಕೆ ಕಾರಣ ಆನಂದ್ ಗುರೂಜಿಯವರು ಜನರಿಗೆ ನೀಡುವಂತಹ ಉಪಯುಕ್ತ ಸಲಹೆ, ಸೂಚನೆಗಳು ಎನ್ನಬಹುದು.  ನೊಂದವರ ಬದುಕಿನಲ್ಲಿ ಪುನಃಶ್ಚೇತನ ಪಡೆಯುವಂತಹ ಸಲಹೆಗಳು, ಮಾರ್ಗದರ್ಶನಗಳು ಈ ಕಾರ್ಯಕ್ರಮದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜಕ್ಕೆ ದೈವ ಪ್ರೇರಣೆ ತುಂಬಿ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಮಹರ್ಷಿವಾಣಿ ಅಗ್ರಸ್ಥಾನ.

ಹಳೆಯ ದಾರಿಗೆ ಹೊಸ ಹೆಜ್ಜೆಗಳನ್ನು ಹಾಕುತ್ತಾ ಸಾಗುತ್ತಿರುವ ಮಹರ್ಷಿವಾಣಿಯ ಪ್ರಯತ್ನ, ಸ್ನೇಹಸಂಬಂಧ ನಂಬಿಕೆಗೆ ನೋವು-ನಲಿವಿಗೆ ದೇಶ ಭಕ್ತಿ, ದೈವಭಕ್ತಿಗೆ ಪ್ರೇರಣೆ ನೀಡುವ ಆನಂದ್ ಗುರೂಜಿಯವರ ಮಾತುಗಳನ್ನು ಕೇಳಲು ಜನ ಕಾಯುತ್ತಾರೆ. ಇದರಲ್ಲಿ ಯಾವುದೇ ವ್ಯಕ್ತಿ ಪೂಜೆ, ಆಡಂಬರದ ಆಚರಣೆಗಳನ್ನು ಪ್ರೇರೇಪಿಸದೆ ಮಾನಸಿಕವಾಗಿ ದೈವಾರಾಧನೆ ಸರಳ ಪದ್ದತಿಗಳನ್ನು ಪರಿಹಾರವಾಗಿ ಹೇಳುವ ಗುರೂಜಿಯವರ ಶೈಲಿಯೇ ಈ ಕಾರ್ಯಕ್ರಮದ ಯಶಸ್ಸಿನ ಸೂತ್ರವಾಗಿದೆ. ನಂಬಿದವರ ಮನೋಬಲ ಹೆಚ್ಚಿಸುವಂತಹ ಮಾತುಗಳು ಸಾಂತ್ವನಗಳು ಮಹರ್ಷಿವಾಣಿ ಕಾರ್ಯಕ್ರಮದ ಹೈಲೈಟ್ ಎನ್ನಬಹುದು. ಮಹರ್ಷಿವಾಣಿ ಯಾತ್ರೆ, ಮಹರ್ಷಿವಾಣಿ ಸಾಂತ್ವನ ಜೀ ಕನ್ನಡ ವಾಹಿನಿಗೆ ಹೊಸ ಮೆರಗನ್ನು ತಂದುಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ 1800ಎಪಿಸೋಡ್‌ಗಳನ್ನು ಪೂರೈಸಿರುವ ಮಹರ್ಷಿವಾಣಿ ಈಗಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ ಎಂದರೆ ಅದರ ಪ್ರಭಾವ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ. ಉತ್ತರ ಭಾರತದ ಅನೇಕ ಪುಣ್ಯಕ್ಷೇತ್ರಗಳನ್ನು ತನ್ನ ಪ್ರೇಕ್ಷಕರ ಮನೆಬಾಗಿಲಿಗೆ ತಂದ ರೀತಿ ಈ ಮಹರ್ಷಿವಾಣಿ ಕಾರ್ಯಕ್ರಮವಾಗಿದೆ. ನಾಡಿನ ಅನ್ನದಾತರ ಬಗ್ಗೆ ಹಾಗೂ ದೇಶ ಕಾಯುವ ಯೋಧರ ಬಗ್ಗೆ ಗುರೂಜಿಗಳು ತೋರಿಸುವ ಕಾಳಜಿ ಮಾತುಗಳು ಅದರಲ್ಲಿ ಆತ್ಮಸ್ಥೈರ್ಯ ತುಂಬಿದೆ. ಮಹರ್ಷಿವಾಣಿ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಭಾನುವಾರದವರೆಗೆ 8.00 ರಿಂದ 9.30 ರವರೆಗೆ ಪ್ರಸಾರವಾಗಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಹರ್ಷಿವಾಣಿ ಕಾರ್ಯಕ್ರಮಕ್ಕೆ 5ನೇ ವರ್ಷದ ಸಂಭ್ರಮ - Chitratara.com
Copyright 2009 chitratara.com Reproduction is forbidden unless authorized. All rights reserved.