ಮಹರ್ಷಿವಾಣಿ ಕಾರ್ಯಕ್ರಮದ 4 ವರ್ಷದ ಸಂಭ್ರಮ
Posted date: 13 Wed, Jun 2018 06:07:09 PM

ಧಾರ್ಮಿಕತೆಯ ಸ್ವರೂಪ, ಪ್ರತಿದಿನದ ಶುಭಾರಂಭ, ಮುಂಜಾವಿಗೆ ಮೊದಲ ಮುನ್ನುಡಿಜ಼ೀಕನ್ನಡ ವಾಹಿನಿಯ ಹೆಮ್ಮೆಯ ಪ್ರಸ್ತುತಿ ಮಹರ್ಷಿವಾಣಿ.
 ನಂಬಿಕೆಯರೂವಾರಿ , ನೊಂದ ಬದುಕಿಗೆ ನಂದಾದೀಪವಾಗಿ ಶ್ರೀ ಶ್ರೀಶ್ರೀಡಾ. ಮಹರ್ಷಿಆನಂದ್‌ಗುರೂಜಿಅವರ ಸಾರಥ್ಯದಲ್ಲಿಜ಼ೀಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ 8 ರಿಂದ 9.30 ರ ವರೆಗೆ ಪ್ರಸಾರವಾಗುವ
ಮಹರ್ಷಿವಾಣಿಗೆ 4 ವರ್ಷ ಪೂರೈಸಿದ ಸಂಭ್ರಮ.

ಸಮಾಜಕ್ಕೆದೈವ ಪ್ರೇರಣೆಯನ್ನುತುಂಬಿ ,ಜನರ ಸಮಸ್ಯೆಗೆ ಪರಿಹಾರ ನೀಡುವಲ್ಲಿತೊಡಗಿರುವ ಈ ಕಾರ್ಯಕ್ರಮಕ್ಕೆ1260 ಎಪಿಸೋಡ್ ಗಳನ್ನು ಪೂರೈಸಿದ ಸಾರ್ಥಕತೆ.
ನೇರ ಪ್ರಸಾರದಲ್ಲಿ ಸ್ವೀಕರಿಸಿದ್ದು 7ಸಾವಿರ  ಕರೆಗಳು 5 ಸಾವಿರ  ಪತ್ರಗಳಿಗೆ ಉತ್ತರ.
4 ವರ್ಷಗಳ ಅವಧಿಯಲ್ಲಿ 500 ಕಾರ್ಯಕ್ರಮಗಳು, 28 ಜಿಲ್ಲೆ ಮತ್ತು 150 ತಾಲ್ಲೂಕುಗಳಲ್ಲಿ ನಿರಂತರ ಸಾಮೂಹಿಕ ಪೂಜಾ ಮತ್ತು ಸಾಂತ್ವನದಕಾರ್ಯಕ್ರಮ.

ಕರ್ನಾಟಕದಾದ್ಯಂತ ಸಂಚರಿಸಿದ 500 ಕಾರ್ಯಕ್ರಮದಲ್ಲಿ 10 ಸಾವಿರಜನರಿಗೆ ಮಹರ್ಷಿ ಸಾಂತ್ವಾನ,  4 ವರ್ಷದ ಮೆಟ್ಟಿಲು ಹತ್ತಿರುವ ಮಹರ್ಷಿವಾಣಿಗೆಇನ್ನೂ ಲಕ್ಷ ಲಕ್ಷಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಹೊಣೆಗಾರಿಕೆಇದೆ ....
ಮನೆ, ಮನಸ್ಸಿಗೆ ಸೀಮಿತವಾಗದೆ, ಮಾನವಜೀವನಕ್ಕೆ ಮೌಲ್ಯಗಳನ್ನು ನೀಡುತ್ತಾಗುರೂಜಿತಮ್ಮ ಪ್ರಯಾಣ ನಡೆಸುತ್ತಾ ಬಂದಿದ್ದಾರೆ.
ದೇವರು, ಧರ್ಮ, ಸಂಸ್ಕಾರ , ಸಂಸಾರಕ್ಕೆಷ್ಟೆ ಮೀಸಲಿಡದೆಗುರೂಜಿಜನರ ದಿನ ನಿತ್ಯದಜೀವನದಲ್ಲಿಒಂದು ಭಾಗವಾಗಿದ್ದಾರೆ. ಸಮಾಜದ ಸೇವೆಗೆ ಮುಂದು ನಿಂತು ಸಮಾಜದ ಒಳಿತಿಗೆ ದುಡಿಯುತ್ತಿದ್ದಾರೆ. ಸಮಾನತಗೆಆಧ್ಯತೆ ನೀಡುತ್ತಿರುವ ನಮ್ಮಕಾರ್ಯಕ್ರಮ ಹಾಗು ಜನರ ನಂಟನ್ನು ಬೆಸೆಯಲು ವಿಶೇಷ ಕಾಳಜಿ ವಹಿಸಿದ್ದಾರೆ.
ಹಳೆಯ ದಾರಿಗೆ ಹೊಸ ಹೆಜ್ಜೆಗಳನ್ನು ಹಾಕುತ್ತಾ ಸಾಗುತ್ತಿರುವ ಮಹರ್ಷಿವಾಣಿಯ ಪ್ರಯತ್ನ ಸ್ನೇಹ, ಸಂಬಂಧ
ನಂಬಿಕೆಗೆ, ನೋವು ನಲಿವಿಗೆ ದೇಶ ಭಕ್ತಿ, ದೈವ ಭಕ್ತಿಗೆ ಸಮಾಜದ ಶ್ರೇಯಸ್ಸಿಗಾಗಿ ಪ್ರಸಾರವಾಗುತ್ತಿದೆ.
ನಮ್ಮ ಸಂಸ್ಕೃತಿಯಆಚಾರ - ವಿಚಾರಗಳು ಇಂದಿನ ಆಧುನಿಕಅಬ್ಬರಕ್ಕೆ ಮಾಸಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ತಿಳಿದ ಗುರುವಾಗಿ ನಮ್ಮಡಾ. ಮಹರ್ಷಿಆನಂದ್‌ಗುರೂಜಿಯವರು ನಮ್ಮನ್ನು ದಿನ ನಿತ್ಯ ಜಾಗೃತಗೊಳಿಸುತ್ತಿದ್ದಾರೆ.
ಬುದ್ಧಿ ಮಾತಿಗೆ ಮೀಸಲಿಡದೆ ನಮ್ಮಜೀವನ ಶೈಲಿ , ಸಂಬಂಧಗಳ ಘರ್ಷಣೆಗಳನ್ನ ನಿಭಾಯಿಸಿ ಅನ್ಯೂನ್ಯತೆಗೆ ಬೇಕಾದ ಸಲಹೆ ನೀಡುತ್ತಾರೆ. ಹೆಣ್ಣು ಮಕ್ಕಳ ಏಳಿಗೆಗೆ ಪ್ರಾಮುಖ್ಯತೆಕೊಡುತ್ತಾರೆ.
ಟಿ.ವಿ ಮಾಧ್ಯಮಎಂದರೆ ಮನರಂಜನೆಗೆ ಮೊದಲ ಆಧ್ಯತೆಆದರೆ ಮಹರ್ಷಿವಾಣಿಕಾರ್ಯಕ್ರಮದ ಮೂಲಕ ಡಾ. ಮಹರ್ಷಿಆನಂದ್‌ಗುರೂಜಿಯವರುಕಾಡುವ ನಿರಂತರಜನರ    ವಯ್ಯುಕ್ತಿಕ ಸಮಸ್ಯೆಗಳಿಗೆಸಮಸ್ಯಗೆಳಿಗೆ ಸ್ಪಂದಿಸುವ ಮನೋಗುಣಗಳನ್ನ ಬೆಳೆಸಿಕೊಂಡು ಬಂದಿದ್ದಾರೆ.ಮನೋಬಲ ಹೆಚ್ಚಿಸುವಂತ,  ಸಮಸ್ಯೆಗಳಿಗೆ ಮಾನಸಿಕ ಶಾಂತಿ ನೀಡುವಂತ  ವ್ರತಗಳು , ಅನುಷ್ಟಾನಗಳು, ಪೂಜಾ ಪದ್ದತಿಗಳನ್ನು
ಮಹರ್ಷಿವಾಣಿಯ ನೇರ ಪ್ರಸಾರದಕಾರ್ಯಕ್ರಮದಲ್ಲಿಅತ್ಯಂತ ಸರಳ ರೀತಿಯಲ್ಲಿ ತಿಳಿಸುತ್ತಾ ಬಂದಿದ್ದಾರೆ
ರೈತರ ಮನೆಗಳಿಗೆ ಭೇಟಿ ನೀಡಿಅವರ ನೋವಿಗೆ ಸಾಂತ್ವನ ಹೇಳಿ ಸಮಸ್ಯಗೆ ಸ್ಪಂದಿಸಿದ್ದಾರೆ. ಯೋಧರ ಬಗ್ಗೆ ಅಪಾರ ಕಾಳಜಿ ಹೊಂದಿರುವಗುರೂಜಿ ಸಮಾಜದ ಹಲವು ಭಾಗಗಳಲ್ಲಿ ತಮ್ಮನ್ನುತಾವು ತೊಡಗಿಸಿಕೊಂಡಿದ್ದಾರೆ.

ಮನೆ, ಪರಿವಾರದ ಸಮಸ್ಯೆಗಳಿಗೆ ಪರಿಹಾರ ನೀಡುವುದರಜೊತೆಗೆ ಸಮಾಜದ ಒಳಿತಿಗಾಗಿ ಸಾಮೂಹಿಕ ಪೂಜೆಯ ಕಾರ್ಯಕ್ರಮಗಳು ಅನ್ನದಾತನ ಶ್ರೇಯಸಿಗಾಗಿ ಮಳೆ ಬೆಳೆಯ ಸಮೃದ್ದಿಗಾಗಿ ನಿರಂತರ ಕಾರ್ಯಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ. ವರ್ಷಪೂರ್ತಿಕರ್ನಾಟಕದ ಮೂಲೆ ಮೂಲೆಗಳಿಗು ಸಂಚರಿಸಿ ಸುಮಾರು 500 ಕ್ಕೆ ಹೆಚ್ಚು ಕಾರ್ಯಕ್ರಮಗಳನ್ನ ನಡೆಸಿಕೊಟ್ಟಿದ್ದಾರೆ.

ಶ್ರೀ ಡಾ. ಮಹರ್ಷಿಆನಂದ್‌ಗುರೂಜಿತಮ್ಮ ಮಾತಿನ ಮುಖಾಂತರ ವೀಕ್ಷಕರಿಗೆ ಮನೋ ಶಕ್ತಿ , ಮನೋ ಬಲದ ಸಂಕೇತವಾಗಿದ್ದಾರೆ.

ಜನರ ನಂಬಿಕೆಗಳಿಗೆ ನೋವುಗಳಿಗೆ ದೈವಕಾರಣಋಣವನ್ನು ಸಹಜವಾಗಿ
 ಅರ್ಥಮಾಡಿಸಿ, ಮೂಢ ನಂಬಿಕೆಯನ್ನು
ದೂಡಿಜೀವನವನ್ನು ಸಾರ್ಥಕ ಮಾಡಿಕೊಳುವ ದೈವ ಮಾರ್ಗವನ್ನುಗುರೂಜಿಯವರ ಮುಖಾಂತರ ತಿಳಿಯುತ್ತಿದ್ದಾರೆ.

ಸಂಸ್ಕಾರ ಮನೆಗಳಿಗೆ ಸೀಮೀತವಾಗದೆ ಅದನ್ನುಆಧುನಿಕಯುಗದಲ್ಲಿಕ್ರಾಂತಿಯನ್ನಾಗಿ ಮಾಡಿದ್ದು ಮಹಾ ಸಾಧನೆ.

ಕಷ್ಟಗಳಿಗೆ ಕಂಗೆಡದೆ ಅವುಗಳನ್ನು ಧೈರ್ಯವಾಗಿ ಸ್ವಾಗತಿಸುವಗುಣವನ್ನು ಸಮಾಜದಲ್ಲಿ ಬೆಳಸಬೇಕಾದದ್ದು
ನಮ್ಮಕರ್ತವ್ಯ...
ಗುರೂಜಿಯವರು  ಈ ಕೆಲಸವನ್ನುತಮ್ಮ ಪಾಲಿನ ಭಾಗ್ಯವೆಂದೆ ನಿರ್ವಹಿಸುತ್ತಿದ್ದಾರೆ.
ಹೀಗೆ ಜನ ಸೇವೆಯಲ್ಲಿತಮ್ಮಜೀವನ ಕಳೆಯುತ್ತಿರುವ ಡಾ. ಮಹರ್ಷಿಆನಂದ್‌ಗುರೂಜಿಯವರಕೊಡುಗೆ ಅಕ್ಷರಗಳಿಗೆ ನಿಲುಕದ್ದು. ಕಾರ್ಯಕ್ರಮಗಳಲ್ಲಿ ಪಾಲ್ಗೊಂಡುಜಾತಿಧರ್ಮದ ಭೇದವಿಲ್ಲದೆ ಸೇರುವ ಭಕ್ತ ಸಮೂಹಕ್ಕೆ ಅನ್ಯೂನ್ಯತೆ, ಹೋಂದಾಣಿಕೆ ಮಹತ್ವವನ್ನ  ತಿಳಿಸಿಕೊಡುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿಜೀಕನ್ನಡ ವಾಹಿನಿ ತನ್ನ ಬೆಳಗಿನ ಶುಭಾರಂಭದಕಾರ್ಯಕ್ರಮದ೪ನೇ ವರ್ಷದ ಸಂಭ್ರಮಕ್ಕೆ
ಸಮಾಜದಆರೋಗ್ಯಕ್ಕಾಗಿ ಮಹರ್ಷಿವಾಣಿಇನ್ನು ಮುಂದೆಯು ವೀಕ್ಷಕರೊಂದಿಗೆ ಕೈ ಜೋಡಿಸುತ್ತದೆ
ಇದಕ್ಕೆ ನಿಮ್ಮ ಪ್ರೋತ್ಸಾಹ ಹೀಗೆ ಮುಂದು ವರಿಯುತ್ತದೆಎಂದು ಭಾವಿಸುತ್ತೇವೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಹರ್ಷಿವಾಣಿ ಕಾರ್ಯಕ್ರಮದ 4 ವರ್ಷದ ಸಂಭ್ರಮ - Chitratara.com
Copyright 2009 chitratara.com Reproduction is forbidden unless authorized. All rights reserved.