ಮಾತು ಮುಗಿಸಿದ `ವೀರ ಮದಕರಿ`
Posted date: 15/January/2009

ಚಿತ್ರ ಬಿಡುಗಡೆಯಾದ ಮೇಲೆ ಶತದಿನೋತ್ಸವ ಆಚರಿಸುವುದು ವಾಡಿಕೆ. ಆದರೆ ನಮ್ಮ `ವೀರ ಮದಕರಿ` ಚಿತ್ರೀಕರಣದಲ್ಲೇ ಶತದಿನ ಕಂಡ ಸಂತಸದಲಿದ್ದಾನೆ. ಕರ್ನಾಟಕದ ಹೆಮ್ಮೆಯ ತಾಣಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ ಸೇರಿದಂತೆ ಮುಂತಾದ ಕಡೆ ಚಿತ್ರಕ್ಕೆ ನೂರುದಿನಗಳ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಕರಿಸುಬ್ಬು ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ಕೂಡ ಮುಗಿದಿದೆ ಎಂದು ನಿರ್ಮಾಪಕ ದಿನೇಶ್ಗಾಂಧಿ ತಿಳಿಸಿದ್ದಾರೆ. ಆರೋಗ್ಯ ಸರಿಯಿಲ್ಲದ ಸಮಯದಲ್ಲೂ ಚಿತ್ರೀಕರಣ ಕಾರ್ಯದಲ್ಲಿ ತೊಡಗಿ ಚಿತ್ರಕ್ಕಾಗಿ ಹೆಚ್ಚಿನ ಶ್ರಮವಹಿಸಿರುವ ನಾಯಕ ಹಾಗೂ ನಿರ್ದೇಶಕ ಸುದೀಪ್ ಅವರನ್ನು ನಿರ್ಮಾಪಕರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಪವಿತ್ರ ಹಾಗೂ ರಹಿಣಿ ಎಂಬ ಚೆಲುವೆಯರು ಮದಕರಿಯ ನಾಯಕಿಯರಾಗಿದ್ದಾರೆ.
ಎಸ್.ಎಸ್.ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಸುದೀಪ್ ನಿರ್ದೇಶಿಸುತ್ತಿದ್ದಾರೆ. ಕೀರವಾಣಿ ಸಂಗೀತವಿರುವ `ವೀರ ಮದಕರಿ`ಗೆ ಶ್ರೀವೆಂಕಟ್ ಅವರ ಛಾಯಾಗ್ರಹಣವಿದೆ. ವಿಜಯಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಸುರೇಶ್ರಾಜ್ ಸಹನಿರ್ದೇಶನ ಹಾಗೂ ಕೆ.ವಿ.ಮಂಜಯ್ಯ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಸುದೀಪ್, ಪವಿತ್ರ, ರಹಿಣಿ, ದಿನೇಶ್ಗಾಂಧಿ, ದೊಡ್ಡಣ್ಣ ಟೆನ್ನಿಸ್ಕೃಷ್ಣ ಮುಂತಾದವರಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ವಿಶೇಷ ಪಾತ್ರದಲಿದ್ದಾರೆ

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾತು ಮುಗಿಸಿದ `ವೀರ ಮದಕರಿ` - Chitratara.com
Copyright 2009 chitratara.com Reproduction is forbidden unless authorized. All rights reserved.