ಮಾನಸ ಸರೋವರ ದಲ್ಲಿ ಅದ್ದೂರಿ ಮದುವೆ
Posted date: 14 Thu, Mar 2019 09:17:57 AM

ಉದಯಟಿವಿಯಲ್ಲಿ ಪ್ರಸಾರವಾಗುತ್ತಿರುವ ಯಶಸ್ವಿ ಧಾರಾವಾಹಿ, ಮಾನಸ ಸರೋವರ. ಪುಟ್ಟಣ್ಣಕಣಗಾಲ್‌ಅವರ ನಿರ್ದೇಶನದ ಚಲನಚಿತ್ರದ ಮುಂದುವರೆದ ಭಾಗವಾಗಿ ಶುರುವಾದಕಥೆ, ಶ್ರೀನಾಥ್, ರಾಮಕೃಷ್ಣ, ಪದ್ಮಾ ವಾಸಂತಿಯರನ್ನುಅದೇ ಪಾತ್ರಗಳಲ್ಲಿ ಮುಂದುವರೆಸಿದ ಕ್ರಿಯಾಶೀಲತೆಯ ಹೆಮ್ಮೆಯಧಾರಾವಾಹಿ. ತನ್ನ ವಿಶೇಷ ಕಥಾಹಂದರದಿಂದ ಈ ಧಾರಾವಾಹಿ ಆರಂಭದಿಂದಇಲ್ಲಿಯವರೆಗೂಎಲ್ಲ ವರ್ಗದ ವೀಕ್ಷಕರ ಪ್ರೀತಿಗೆ ಪಾತ್ರವಾಗಿದೆ.

ಸಂತೋಷ್-ವಾಸಂತಿ ಮಗಳು ಸುನಿಧಿ, ಮಾನಸಿಕ ವೈದ್ಯೆ, ಡಾ.ಆನಂದ್ಗೆಚಿಕಿತ್ಸೆ ನೀಡುತ್ತಿರುತ್ತಾಳೆ. ತನ್ನತಂದೆ-ತಾಯಿಯೇಡಾ.ಆನಂದಮಾನಸಿಕ ಖಿನ್ನತೆಗೆಕಾರಣರಾದವರುಎಂದು ತಿಳಿದು, ತನ್ನತಂದೆತಾಯಿ ಡಾ.ಆನಂದ್ರನ್ನು ಕೊಲೆ ಮಾಡಲು ಸಹ ಮುಂದಾಗಿದ್ದರು ಎಂಬ ತಪ್ಪುಕಲ್ಪನೆಯಲ್ಲಿಅವರನ್ನುದ್ವೇಷ ಮಾಡಲು ಶುರು ಮಾಡುತ್ತಾಳೆ. ತನ್ನ ನಿಶ್ಚಿತಾರ್ಥವನ್ನೂ ರದ್ದು ಮಾಡಿಕೊಂಡ ಸುನಿಧಿಗೆ ಕೊನೆಗೆ ಡಾ. ಆನಂದರೇ ಮನವೊಲಿಸಿ, ತಪ್ಪುಕಲ್ಪನೆಯನ್ನು ಹೋಗಲಾಡಿಸಿ ಎಲ್ಲರನ್ನೂಒಂದು ಮಾಡುತ್ತಾರೆ, ಸುನಿಧಿ-ಚಿಂತನ್ ಮದುವೆಗೆಅಣಿಮಾಡಿಕೊಡುತ್ತಾರೆ.

ಆದರೆಡಾ. ಆನಂದ್ಗೆಎದುರಾದದೊಡ್ಡತಡೆಯೆಂದರೆ ಸುನಿಧಿ ತಂಗಿ ಶರಧಿ, ಅವಳೂ ಕೂಡಚಿಂತನ್ನನ್ನು ಪ್ರೀತಿಸುತ್ತಿದ್ದಾಳೆ. ಯಾವುದೇಕಾರಣಕ್ಕೂಚಿಂತನ್‌ನನ್ನಿಂದದೂರಾಗಲುಬಿಡುವುದಿಲ್ಲ?ಎಂದುಹುಚ್ಚುಹಠಕ್ಕೆಬಿದ್ದು, ಬೇರೆಯಾವಸಂಬಂಧಗಳನ್ನೂಲೆಕ್ಕಿಸದೇಎಲ್ಲರಿಗೂನೋಯಿಸಿಅವನನ್ನುಪಡೆಯುವಹಠಕ್ಕೆಬೀಳುತ್ತಾಳೆ.  

ಸುನಿಧಿ-ಚಿಂತನ್ ಮದುವೆತಯಾರಿಯಲ್ಲಿ ಮನೆಯವರೆಲ್ಲಾ ಸಂಭ್ರಮಿಸುತ್ತಿರಲು, ತನ್ನ ಪ್ರೀತಿತನಗೇ ಬೇಕೆಂದುತಂದೆ-ತಾಯಿಯ ಮುಂದೆ ಹಠ ಮಾಡಿಎಲ್ಲರನ್ನೂಚಿಂತೆಗೀಡು ಮಾಡುತ್ತಾಳೆ. ಮನೆಯವರು ಇವಳ ಮಾತಿಗೆ ಬೆಲೆ ಕೊಡದಿದ್ದಾಗ ಅವಳು ಸುನಿಧಿಯ ಬಳಿಯೇ ಹೋಗಿ ಚಿಂತನ್ನನ್ನು ಬಿಟ್ಟುಕೊಡಲು ಹೇಳುತ್ತಾಳೆ. ಸುನಿಧಿ ಕೂಡಚಿಂತನ್ನನ್ನು ಬಿಟ್ಟುಕೊಡಲಾರೆಎಂದು ಹೇಳಲು ಶರಧಿಗೆ ಭೂಮಿಯೇ ತಲೆಕೆಳಗಾದಂತಾಗುತ್ತದೆ.

ಇವರೆಲ್ಲರ ವಿರೋಧದ ನಡುವೆ ಶರಧಿ ಮದುವೆತಪ್ಪಿಸಲು ಮಾಡುವ ಹುನ್ನಾರಗಳೇನು? ಸುನಿಧಿ-ಚಿಂತನ್ ಮದುವೆ ಸರಾಗವಾಗಿ ನಡೆಯುತ್ತಾ, ಇಲ್ಲವಾ ಎಂಬ ಕುತೂಹಲಗಳಿಂದ ಮದುವೆ ಸಂಚಿಕೆಗಳು ಸಾಗುತ್ತಿದ್ದರೆ, ಡಾ.ಆನಂದ್ ಗೆ ಶರಧಿಯ ಒಳಗಡಗಿದ ಬೇರೆಯೇಒಂದು ಪ್ರಪಂಚಕಾಣಲು ಶುರುವಾಗಿ ಆತಂಕಕ್ಕೊಳಗಾಗುತ್ತಾರೆ. ಶರಧಿಯ ಆ ಮನಸ್ಥಿತಿ ಯಾವುದು, ಅದುಇಡೀ ಸಂಸಾರಕ್ಕೆ, ಮುಖ್ಯವಾಗಿ ಸುನಿಧಿ-ಚಿಂತನ್ ಬಾಳಲ್ಲಿ ಹೇಗೆ ಪರಿಣಾಮ ಬೀಳಲಿದೆ ಎಂಬ ರಹಸ್ಯ ಮತ್ತು ಕುತೂಹಲಗಳನ್ನು ಹೊತ್ತುತರಲಿವೆ.

ಈ ವಿಶೇಷ ಕಂತುಗಳನ್ನು ನಗರದ ಹೊರವಲಯದ ಭವ್ಯವಾದಕನ್ವೆನ್ಶನಲ್ ಹಾಲ್ನಲ್ಲಿಅದ್ದೂರಿಯಾಗಿ ಸಾಂಪ್ರದಾಯಿಕ ಸೆಟ್ನಲ್ಲಿ ಸತತ ೪ ದಿನ ಶೂಟ್ ಮಾಡಲಾಯಿತು. ರಂಗುರಂಗಿನಉಡುಗೆಯಲ್ಲಿಎಲ್ಲಾಕಲಾವಿದರೂ ಮಿಂಚುತ್ತಾ ಆಟ, ನೃತ್ಯಗಳಲ್ಲಿ ಪಾಲ್ಗೊಂಡುಕಾರ್ಯಕ್ರಮಕ್ಕೆ ಮೆರಗು ನೀಡಿದ್ದಾರೆ.
ಈ ಎಲ್ಲಾ ಮನೋರಂಜನೆ, ಕುತೂಹಲಗಳನ್ನು ಹೊತ್ತುತರುತ್ತಿರುವ ವಿಜ್ರಂಭಣೆಯ ಮಾನಸ ಸರೋವರ ಸಂಚಿಕೆಗಳನ್ನು ಸೋಮವಾರದಿಂದ ಶುಕ್ರವಾರ ರಾತ್ರಿ೯.೩೦ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.

ಮಾನಸ ಸರೋವರ ಸೋಮ - ಶುಕ್ರರಾತ್ರಿ ೯:೩೦ಕ್ಕೆ ನಿಮ್ಮಉದಯಟಿವಿಯಲ್ಲಿ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾನಸ ಸರೋವರ ದಲ್ಲಿ ಅದ್ದೂರಿ ಮದುವೆ - Chitratara.com
Copyright 2009 chitratara.com Reproduction is forbidden unless authorized. All rights reserved.