ಮಾಸಾಂತ್ಯಕ್ಕೆ ?ಪಾನಿಪುರಿ? ಪ್ರಾರಂಭ
Posted date: 5/July/2010

   ಕರಣ್ ರಚನೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ‘ಪಾನಿಪುರಿ ಚಿತ್ರದ ಚಿತ್ರೀಕರಣ ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿದೆ. ಚಿತ್ರದ ನಾಯಕನಾಗಿ ದಿಗಂತ್ ಅಭಿನಯಿಸುತ್ತಿದ್ದಾರೆ. ದಿಗಂತ್ ‘ಪಂಚರಂಗಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿರುವುದರಿಂದ ನಮ್ಮ ಚಿತ್ರ ಆರಂಭವಾಗುವುದು ಸ್ವಲ್ಪ ತಡವಾಯಿತೆಂದು ನಿರ್ಮಾಪಕ ಗೂಡುರು ವೆಂಕಟೇಶ್ವರಲು ತಿಳಿಸಿದ್ದಾರೆ.
   ರವಿಚಂದ್ರನ್ ಅವರು ನಟಿಸಿದ ‘ಕನಸುಗಾರ ಚಿತ್ರವನ್ನು ನಿರ್ದೇಶಿಸಿ ಕರಣ್ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದರು. ಈ ಚಿತ್ರ ಕೂಡ ಸದಭಿರುಚಿ ಚಿತ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುತ್ತಾರೆ ನಿರ್ದೇಶಕರು. ನಾಯಕಿ ಸೇರಿದಂತೆ ಎಲ್ಲಾ ಕಲಾವಿದರ ಮತ್ತು ತಂತ್ರಜ಼್ಞರ ಆಯ್ಕೆ ಪ್ರಗತಿಯಲ್ಲಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾಸಾಂತ್ಯಕ್ಕೆ ?ಪಾನಿಪುರಿ? ಪ್ರಾರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.