ಮಾಸ್ಟರ್ ಆನಂದ್ ಈಗ `ನಾ ಕೋಳಿಕ್ಕೇ ರಂಗ`
Posted date: 31 Sat, Aug 2019 08:29:40 AM

 ಶ್ರೀದುರ್ಗಾ ಆಂಜನೇಯ ಮೂವೀಸ್ ಲಾಂಛನದಲ್ಲಿ ಎಸ್.ಟಿ.ಸೋಮಶೇಖರ್ ಅವರು ನಿರ್ಮಿಸುತ್ತಿರುವ ‘ನಾ ಕೋಳಿಕ್ಕೇ  ರಂಗ‘ ಚಿತ್ರದ ನಾಯಕರಾಗಿ ಮಾಸ್ಟರ್ ಆನಂದ್ ಅಭಿನಯಿಸಿದ್ದಾರೆ.

ಗೊರವಾಲೆ ಮಹೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ದ್ವಾರಕೀಶ್, ಹೊನ್ನವಳ್ಳಿ ಕೃಷ್ಣ, ದ್ವಾರ್ಕಿ, ಬೂದಾಳ್ ಕೃಷ್ಣಮೂರ್ತಿ, ಕೆ.ವಿ.ಪ್ರಸಾದ್ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ಗೊರವಾಲೆ ಮಹೇಶ್ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಿನಿಮಾ ಕುರಿತು ತರಭೇತಿಯನ್ನು ಪಡೆದಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.

5 ಹಾಡುಗಳಿರುವ ಈ ಚಿತ್ರಕ್ಕೆ ರಾಜು ಎಮ್ಮಿಗಾನೂರು ಸಂಗೀತ ನೀಡುತ್ತಿದ್ದಾರೆ. ‘ಒಳಿತು ಮಾಡು ಮನುಸ‘ ಹಾಡಿನ ಖ್ಯಾತಿಯ ನಮ್‌ಋಷಿ ಹಾಗೂ ಹನಸೊಗೆ ಸೋಮಶೇಖರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಧನುಷ್ ಛಾಯಾಗ್ರಹಣ, ವಿಶ್ವ ಸಂಕಲನ, ಅಶೋಕ್ ಸಾಹಸ ನಿರ್ದೇಶನ ಹಾಗೂ ಹೈಟ್ ಮಂಜು, ಮನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಮಾಸ್ಟರ್ ಆನಂದ್ ಅವರಿಗೆ ನಾಯಕಿಯಾಗಿ ರಾಜೇಶ್ವರಿ ಅಭಿನಯಿಸಿದ್ದಾರೆ. ಭವ್ಯ, ಹೊನ್ನವಳ್ಳಿ ಕೃಷ್ಣ, ಶಕಿಲಾ, ಬಿರಾದಾರ್, ಗುರುರಾಜ್ ಹೊಸಕೋಟೆ, ರಾಕ್‌ಲೈನ್ ಸುಧಾಕರ್, ಗಡ್ದಪ್ಪ, ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಾಸ್ಟರ್ ಆನಂದ್ ಈಗ `ನಾ ಕೋಳಿಕ್ಕೇ ರಂಗ` - Chitratara.com
Copyright 2009 chitratara.com Reproduction is forbidden unless authorized. All rights reserved.