ಮೂರು ಭಾಷೆಗಳಲ್ಲಿ `ಪ್ರೀತಿ ಇರಬಾರದೇ` ಚಿತ್ರ ನಿರ್ಮಾಣ
Posted date: 05 Wed, Jun 2019 07:33:13 PM

ಗೋಲ್ಡ್ ಟೈಮ್ ಇನ್ ಪಿಕ್ಚರ್ಸ್ ಲಾಂಛನದಲ್ಲಿ ಡಾ||ಲಿಂಗೇಶ್ವರ್ ಅವರು ನಿರ್ಮಿಸುತ್ತಿರುವ ‘ಪ್ರೀತಿ ಇರಬಾರದೇ‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಬೆಂಗಳೂರು, ಮೈಸೂರು, ಹೈದರಾಬಾದ್, ರಜಮಂಡ್ರಿ, ಊಟಿ ಮುಂತಾದ ಕಡೆ 45ದಿನಗಳ ಚಿತ್ರೀಕರಣ ನಡೆದಿದೆ. ಕಾಲೇಜ್ ಲವ್ ಸ್ಟೋರಿ ಹಾಗೂ ತಂದೆ - ಮಗಳ ಭಾಂದವ್ಯ ಸಾರುವ ಕಥಾ ಸಾರಾಂಶ ಈ ಚಿತ್ರದಲ್ಲಿದೆ.

ನಿರ್ಮಾಪಕ ಡಾ||ಲಿಂಗೇಶ್ವರ್ ಅವರು ಬರೆದಿರುವ ಕಥೆಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ನವೀನ್ ನಾಯಿನ್. ಆರು ಹಾಡುಗಳಿರುವ ಈ ಚಿತ್ರಕ್ಕೆ ಸಾಗು ವರ್ಗೀಸ್ ಸಂಗೀತ ನೀಡುತ್ತಿದ್ದಾರೆ. ಶ್ರೀನು ವಿನುಕೋಟ ಛಾಯಾಗ್ರಹಣ, ಜಾನಕೀರಾಂ ಸಂಕಲನ, ನರೇಶ್ ಆನಂದ್ ನೃತ್ಯ ನಿರ್ದೇಶನ ಹಾಗೂ ರಾಮ ಸುಂಕರ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಸುಬ್ಬರಾಯ್ಡು ಸಂಭಾಷಣೆ ಬರೆದಿದ್ದಾರೆ. ಕೆ,ಕಲ್ಯಾಣ್ ಗೀತರಚನೆ ಮಾಡಿದ್ದಾರೆ.

ತರುಣ್‌ತೇಜ್, ಲಾವಣ್ಯ, ಕೇದರ್ ಶಂಕರ್, ಸತ್ಯಕೃಷ್ಣ, ಅಜೇಯ್ ಘೋಶ್, ಸೀನಿಯರ್ ಸೂರ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೂರು ಭಾಷೆಗಳಲ್ಲಿ `ಪ್ರೀತಿ ಇರಬಾರದೇ` ಚಿತ್ರ ನಿರ್ಮಾಣ - Chitratara.com
Copyright 2009 chitratara.com Reproduction is forbidden unless authorized. All rights reserved.