ಮೈ ನೇಮ್ ಈಸ್ ರಾಜಾ ಹಾಡಿನೊಂದಿಗೆ ಚಿತ್ರೀಕರಣ ಫಿನಿಷ್!
Posted date: 06 Fri, Sep 2019 06:31:14 PM

ಅಮೊಘ್  ಎಂಟರ್ ಪ್ರೈಸಸ್ ಲಾಂಛನದ ಅಡಿಯಲ್ಲಿ, ರಾಜ್ ಸೂರ್ಯನ್ ,ಪ್ರಭಾಕರ್ ರೆಡ್ಡಿ, ಕಿರಣ್ ರೆಡ್ಡಿ ನಿರ್ಮಾಣದ, ಸಂಚಾರಿ, ಜಟಾಯು  ಖ್ಯಾತಿಯ ಆಕ್ಷನ್ ಸ್ಟಾರ್ `ರಾಜ್ ಸೂರ್ಯನ`ನಾಯಕನಾಗಿ  ಮೂರು ವಿಭಿನ್ನ  ಔಟ್ಲುಕ್ ನಲ್ಲಿ ಕಾಣಿಸಿಕೊಂಡಿರುವ ‘ಮೈ ನೇಮ್ ಈಸ್ ರಾಜ್’ ಒಂದು ಹಾಡಿನೊಂದಿಗೆ ಚಿತ್ರೀಕರಣ ಪೂರ್ತಿಗೊಳಿಸಿದೆ.

ಅಲ್ಟ್ರಾ ಮಾಡರ್ನ್  ಗ್ಲಾಮರ್ ಬೆಡಗಿಯರಾದ ಆಕರ್ಷಿಕ ಮತ್ತು ನಸ್ರೀನ್ ನಾಯಕಿಯರಾಗಿ  ನಟಿಸಿದ್ದು, ಪ್ರಭು ಸೂರ್ಯ ,  ನೇಪಾಳದ ಆಯುಶ್ರೀ ,  ಇರಾನ್  ದೇಶದ  ಸೂಪರ್ ಮಾಡೆಲ್  ಏವಾ ಸಫಾಯಿ ನಟಿಸಿರುವ  ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕ ಕಾಲದಲ್ಲಿ ತಯಾರಾಗುತ್ತಿರುವ ಬಹು ನಿರೀಕ್ಷಿತ  ಆಕ್ಷನ್ ಥ್ರಿಲ್ಲರ್ ಚಿತ್ರ ಮೈ ನೇಮ್ ಈಸ್ ರಾಜಾ ತೆಲುಗಿನಲ್ಲಿ " ನಾ ಪೇರು ರಾಜಾ " ಎಂದು ನಾಮಕರಣ ಮಾಡಲಾಗಿದೆ.

ಕರ್ನಾಟಕ, ಕೇರಳ, ಮತ್ತು  ಆಂದ್ರ-ತೆಲಂಗಾಣ ರಾಜ್ಯಗಳ ಬಹಳಷ್ಟು ಸ್ಥಳಗಳಲ್ಲಿ  ೬೫  ದಿನಗಳ ಶೂಟಿಂಗ್  ಮುಗಿಸಿ, ಕೊನೆಯದಾಗಿ  ತೆಲುಗಿನ ಲಿರಿಕ್ ರೈಟರ್ ಸಾಹಿತಿ ಹಾಗು ಕನ್ನಡದ ಅನಿಲ್ (ದಿಲ್ವಾಲ) ಬರೆದಿರುವ ಹಾಟ್ ಟೈಟಲ್ ಸಾಂಗ್ `ರಾಜಾ ರಾಜಾ ಮನ್ಮತ ರಾಜಾ ಆಜಾ ಆಜಾ ನಾ ರಾಜಾ `  ಎಂಬ  ಹಾಡಿಗೆ ಕೊರಿಯೊಗ್ರಾಫರ್ ನಾಗೇಶ್ ಹಾಲಿವುಡ್ ಆಲ್ಬಮ್ ಸಾಂಗ್ ಶೈಲಿಯಲ್ಲಿ ನೃತ್ಯ ಸಂಯೋಜನೆ ಮಾಡಿದ್ದಾರೆ ,  ಬಾಹುಬಲಿ ಚಿತ್ರದ ಗಾಯಕಿ ಮೋಹನ ಭೋಗರಾಜು ಹಾಡಿರುವ ಈ ಹಾಡಿಗೆ ನಿರ್ಮಾಪಕರಾದ ರಾಜ್ ಸೂರ್ಯನ್, ಪ್ರಭಾಕರ್ ರೆಡ್ಡಿ ,ಕಿರಣ್ ರೆಡ್ಡಿ ಬಜೆಟ್ ಲೆಕ್ಕಿಸದೆ  ಕನ್ಟೆಂಟ್  ಮೇಲಿನ ಭರವಸೆಯಿಂದ ಬಾರಿ ಬಜೆಟ್ ನ  ಅದ್ದೂರಿ  ಸೆಟ್ ವೊದಗಿಸಿದ್ದು ಭರ್ಜರಿಯಾಗಿ ಹಾಡಿನ ಚಿತ್ರೀಕರಣ  ಮುಗಿಸಿ ಕುಂಬಳಕಾಯಿ ಹೊಡೆದಿರುವುದಾಗಿ  ಚಿತ್ರದ ನಿರ್ದೇಶಕ ಅಶ್ವಿನ್ ಕೃಷ್ಣ ತಿಳಿಸಿದ್ದಾರೆ.

ಅಕ್ಟೋಬರ್ ನಲ್ಲಿ ಆಡಿಯೋ ಲಾಂಚ್ ಮತ್ತು ನವೆಂಬರ್‌ನಲ್ಲಿ ಈ ಚಿತ್ರವು ಕರ್ನಾಟಕ,  ಆಂಧ್ರ-ತೆಲಂಗಾಣ ದಲ್ಲಿ ಏಕ ಕಾಲದಲ್ಲಿ ಭರ್ಜರಿ  ಬಿಡುಗಡೆ ಆಗಲಿದೆ ಎಂದು ನಿರ್ಮಾಪಕರಾದ ರಾಜ್ ಸೂರಿಯನ್, ಪ್ರಭಾಕರ್ ರೆಡ್ಡಿ, ಕಿರಣ್ ರೆಡ್ಡಿ ತಿಳಿಸಿದ್ದಾರೆ .
ಎಲ್ವಿನ್ ಜೊಶ್ವಾ  “ಮೈ ನೇಮ್ ಈಸ್ ರಾಜಾ “ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ "ಮೈ ನೇಮ್ ಈಸ್ ರಾಜಾ" " ಚಿತ್ರದ ಹಾಡುಗಳನ್ನು ಡಾ. ವಿ. ನಾಗೇಂದ್ರ ಪ್ರಸಾದ್ , ಕವಿರಾಜ್ ಮತ್ತು  ಅನಿಲ್ (ದಿಲ್ವಾಲ) ಬರೆದಿದ್ದಾರೆ.
 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೈ ನೇಮ್ ಈಸ್ ರಾಜಾ ಹಾಡಿನೊಂದಿಗೆ ಚಿತ್ರೀಕರಣ ಫಿನಿಷ್! - Chitratara.com
Copyright 2009 chitratara.com Reproduction is forbidden unless authorized. All rights reserved.