ಮೈಸೂರು ಯುವದಸರಾದಲ್ಲಿ `ಭೈರಾದೇವಿ` ಚಿತ್ರದ ಹಾಡು ಬಿಡುಗಡೆ
Posted date: 08 Tue, Oct 2019 02:22:23 PM

ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ನಿರ್ಮಿಸುತ್ತಿರುವ ‘ಭೈರಾದೇವಿ‘ ಚಿತ್ರಕ್ಕಾಗಿ  ಶ್ರೀಜೈ ಅವರು ಬರೆದಿರುವ ‘ಬಂದಾಳಮ್ಮ ಕಾಳಿಕಾ‘ ಹಾಡು ಮೈಸೂರಿನ ಯುವದಸರಾದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಮಾಲತಿ ಲಕ್ಷ್ಮಣ್ ಈ ಹಾಡನ್ನು ಹಾಡಿದ್ದಾರೆ. ಯುವದಸರಾದ ವರ್ಣರಂಜಿತ ವೇದಿಕೆಯಲ್ಲಿ ನಡೆದ ಈ ಸಮಾರಂಭದಲ್ಲಿ ಸಂಸದ ಪ್ರತಾಪಸಿಂಹ, ರಾಧಿಕಾ ಕುಮಾರಸ್ವಾಮಿ, ನಟ ರಮೇಶ್ ಅರವಿಂದ್, ನಿರ್ದೇಶಕ ಶ್ರೀಜೈ ಹಾಗೂ ಚಿತ್ರತಂಡದ ಅನೇಕ ಸದಸ್ಯರು ಭಾಗವಹಿಸಿದ್ದರು.   ರವಿರಾಜ್ ಹಾಗೂ ಯಾದವ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಶ್ರೀಜೈ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತೆರಚನೆ ಮಾಡಿ, ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕಾಶಿ, ಬೆಂಗಳೂರು, ತಮಿಳುನಾಡು ಮುಂತಾದಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ.

ಜೆ.ಎಸ್.ವಾಲಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಕೆ.ಸೆಂಥಿಲ್ ಪ್ರಸಾದ್ ಅವರ ಸಂಗೀತ ನಿರ್ದೇಶನವಿದೆ. ರವಿಚಂದ್ರನ್ ಸಂಕಲನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ರವಿಶಂಕರ್, ರಂಗಾಯಣ ರಘು, ಶಿವರಾಂ, ಸ್ಕಂದ ಅಶೋಕ್, ಸುಚೇಂದ್ರ ಪ್ರಸಾದ್, ಮಾಳವಿಕ ಅವಿನಾಶ್, ಪದ್ಮಜಾರಾವ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೈಸೂರು ಯುವದಸರಾದಲ್ಲಿ `ಭೈರಾದೇವಿ` ಚಿತ್ರದ ಹಾಡು ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.