ಮೊದಲ ಹಂತದಚಿತ್ರೀಕರಣ ಮುಗಿಸಿದ ರಿಪ್ಪರ್
Posted date: 12 Tue, Jun 2018 01:33:51 PM

ಬಣ್ಣದಕೊಡೆಅನ್ನುವಕಲಾತ್ಮಕಚಿತ್ರದ ನಂತರ ನಿರ್ದೇಶಕ ಕೃಷ್ಣ ಬೆಳ್ತಂಗಡಿ ಕೈಗೆತ್ತಿಕೊಂಡಿರುವಎರಡನೇಚಿತ್ರರಿಪ್ಪರ್ ಮೊದಲ ಹಂತದಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದೆ.

ಜಿ.ಕೆರಿಯಲ್‌ಇಮೇಜಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವರಿಪ್ಪರ್ ಚಲನಚಿತ್ರವು, ಸತ್ಯಘಟನಾಆಧಾರಿತಚಿತ್ರವಾಗಿದ್ದು, ಈಗಿನ ಕಾಲಘಟ್ಟಕ್ಕೆಅನುಗುಣವಾಗಿತುಸು ಬದಲಾವಣೆಗಳೊಂದಿಗೆ ಚಿತ್ರೀಕರಿಸಲಾಗುತ್ತಿದೆ.

ಮೊದಲ ಹಂತದ ಹತ್ತು ದಿನಗಳ ಚಿತ್ರೀಕರಣವು ಆಗುಂಬೆ ಹಾಗೂ ಆಸುಪಾಸಿನಲ್ಲಿ ನಡೆಯಿತು.ಪೊಲೀಸರಕಸ್ಟಡಿಯಿಂದ ತಪ್ಪಿಸಿಕೊಂಡು ಹೋದ ಖಳನಾಯಕನನ್ನು ಪೊಲೀಸರು ಹುಡುಕಾಡುವುದು, ಖಳನಾಯಕನ ಪತ್ನಿಯರೋಷ, ನಾಯಕನಾಯಕಿಯ ಭಾವನಾತ್ಮಕ ಸನ್ನಿವೇಶಗಳ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
ಖಳನಾಯಕನ ದೃಶ್ಯ ಹೊರತುಪಡಸಿ, ಉಳಿದಂತೆ ಹಲವು ದೃಶ್ಯಗಳ ಚಿತ್ರೀಕರಣ ನಡೆಯಿತು.ಖಳನಾಯಕರ ಪತ್ನಿ ಪಾತ್ರದಲ್ಲಿಅಮುಲ್‌ಗೌಡ, ಇನ್ಸ್‌ಪೆಕ್ಟರ್ ಪಾತ್ರದಲ್ಲಿಚಕ್ರವರ್ತಿಚಂದ್ರಚೂಡ್, ನಾಯಕ ಶ್ರೀರಾಮ್, ನಾಯಕಿ ಶ್ರೀಮಯ್ಯ ಇವರ ದೃಶ್ಯಗಳು ಚಿತ್ರೀಕರಣಗೊಂಡವು.

ಕೃಷ್ಣ ಬೆಳ್ತಂಗಡಿ ನಿರ್ದೇಶನಚಿತ್ರಕ್ಕಿದ್ದು, ಅನಿಲ್ ಕುಮಾರ್‌ಛಾಯಾಗ್ರಹಣ, ಹಿತನ್ ಹಾಸನ್ ಸಂಗೀತ, ಶಕ್ತಿಪ್ರಸಾದ್, ಶ್ರೀದೇವಿ ಮಂಜುನಾಥ್ ಹಾಗೂ ಅರ್ಪಿತಾಇವರ ನಿರ್ದೇಶನ ಸಹಕಾರಚಿತ್ರಕ್ಕಿದೆ.

ಎರಡನೇ ಹಂತದಚಿತ್ರೀಕರಣ ಬೆಂಗಳೂರಲ್ಲಿ ಶೀಘ್ರ ನಡೆಯಲಿದೆಎಂದು ನಿರ್ದೇಶಕ ಕೃಷ್ಣ ಬೆಳ್ತಂಗಡಿ ತಿಳಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೊದಲ ಹಂತದಚಿತ್ರೀಕರಣ ಮುಗಿಸಿದ ರಿಪ್ಪರ್ - Chitratara.com
Copyright 2009 chitratara.com Reproduction is forbidden unless authorized. All rights reserved.