ಮೋಜಿತೋ ಮೋಷನ್ ಪೋಸ್ಟರ್ ಬಿಡುಗಡೆ
Posted date: 16 Wed, May 2018 11:49:56 AM
ಸೈಂಟಿಫಿಕ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಮೋಜಿತೋ ಚಲನಚಿತ್ರದ ಮೋಷನ್ ಪೋಸ್ಟರ್‌ನ್ನು ನಟಿ ರಾಗಿಣಿ ದ್ವಿವೇದಿ ಅವರು ಬಿಡುಗಡೆಗೊಳಿಸಿದರು. ವೇಣುಗೋಪಾಲ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಹಿಳಾ ಪ್ರಧಾನ ಕಥಾನಕವಿದ್ದು, ಅಮಿತಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೈನ್ಸ್ ಫಿಕ್ಷನ್ ಚಿತ್ರಗಳು ಕನ್ನಡದಲ್ಲಿ ತೀರಾ ವಿರಳ. ಅಂಥಾ ಎಳೆ ಇಟ್ಟುಕೊಂಡು ನಿರ್ದೇಶಕ ವೇಣುಗೋಪಾಲ್ ಈ ಚಿತ್ರವನ್ನು ತಯಾರಿಸುತ್ತಿದ್ದಾರೆ. 
ಕನ್ನಡ ಹಾಗೂ ತಮಿಳು ಸೇರಿ ದ್ವಿಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ  ಮನುಷ್ಯನ ಮನಸ್ಸು ಹಾಗೂ ಮೆದುಳಿನ ನಡುವೆ ನಡೆಯುವ ಸಂಘರ್ಷದ ಕಥೆಯನ್ನು ಹೇಳಲಾಗುತ್ತಿದೆ. ಈಗಾಗಲೇ ಈ ಚಿತ್ರದ ಮೊದಲಹಂತದ ಚಿತ್ರೀಕರಣದಲ್ಲಿ ಸುಮಾರು ೨೦ರಷ್ಟು ಭಾಗದ ಚಿತ್ರೀಕರಣವನ್ನು ಮಾಡಲಾಗಿದ್ದು, ಉಳಿದ ಬಹುತೇಕ ಭಾಗದ ಚಿತ್ರೀಕರಣವನ್ನು ಗ್ರೀನ್‌ಮ್ಯಾಟ್‌ನಲ್ಲಿಯೇ ಚಿತ್ರೀಕರಿಸಬೇಕಾಗಿರುವುದರಿಂದ ಅಂಥಾ ಸ್ಟುಡಿಯೋಗಾಗಿ ಹುಡುಕಾಟ ನಡೆಸಲಾಗಿದೆ. ವಿಶೇಷವಾಗಿ ಈ ಚಿತ್ರದ ವಿಎಫ್‌ಎಕ್ಸ್‌ನ್ನು ನ್ಯೂಜಿಲ್ಯಾಂಡ್‌ನ ಸ್ಕೈಬ್ಲ್ಯೂ ಸ್ಟುಡಿಯೋದಲ್ಲಿ ನಡೆಸಲಾಗುವುದು. ದ್ವಿಭಾಷಾ ಚಲನಚಿತ್ರ ಇದಾಗಿರುವುದರಿಂದ ಕನ್ನಡ ಹಾಗೂ ತಮಿಳಿನ ಹಲವಾರು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳಿನ ಸಮುದ್ರಖನಿ ಅವರು ಈ ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹಾಕ್ ಐ ಇಂಕ್ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶ್ರೀಕಾಂತ್ ಅವರ ಸಂಕಲನ ಹಾಗೂ  ಮುಜಾಹಿದ್ ರಾಜಾ ಅವರ  ಛಾಯಾಗ್ರಹಣ ಈ ಚಿತ್ರಕ್ಕಿದೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೋಜಿತೋ ಮೋಷನ್ ಪೋಸ್ಟರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.