ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ `ಕೈಟ್ ಬ್ರದರ್ಸ್` ಚಿತ್ರದ ಲಿರಿಕಲ್ ಸಾಂಗ್
Posted date: 04 Mon, Nov 2019 08:47:04 AM

ಭಜರಂಗ ಸಿನೆಮಾ ಲಾಂಛನದಲ್ಲಿ ರಜನಿಕಾಂತ್ ರಾವ್ ದಳ್ವಿ, ಮಂಜುನಾಥ್ ಬಿ.ಎಸ್ ಹಾಗೂ ಮಂಜುನಾಥ್ ಬಗಾಡೆ ಅವರು ನಿರ್ಮಿಸಿರುವ `ಕೈಟ್ ಬ್ರದರ್ಸ್` ಚಿತ್ರದ `ಆ ಅರಸ ಆ ಆನೆ..` ಎಂಬ ಹಾಡಿನ ಲಿರಿಕಲ್ ಸಾಂಗ್ ರಾಜ್ಯೋತ್ಸವದಂದು ಲಹರಿ ಆಡಿಯೋ ಮೂಲಕ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು, ವಿರೇನ್ ಸಾಗರ್ ಬಗಾಡೆ ಬರೆದಿರುವ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಧಿಕ ಸಂಖ್ಯೆಯಲ್ಲಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಅನನ್ಯ ಭಟ್ ಹಾಗೂ ವಿರೇನ್ ಸಾಗರ್ ಬಗಾಡೆ ಈ ಹಾಡನ್ನು ಹಾಡಿದ್ದಾರೆ

ವಿರೇನ್ ಸಾಗರ್ ಬಗಾಡೆ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಹಳ್ಳಿಗಾಡಿನ ಬದುಕು ಮತ್ತು ಅಲ್ಲಿಯ ಮಕ್ಕಳ ಬಾಲ್ಯದ ಸಹಜ, ಸರಳ ನೈಜ ರೀತಿಯ ಚಿತ್ರಣ ಈ ಚಿತ್ರದ ಮುಖ್ಯ ಆಕರ್ಷಣೆ. ಶಿಕ್ಷಣ ಹಕ್ಕು, ಘನವಾದ ಸ್ನೇಹ ಮತ್ತು ಮಕ್ಕಳ ಸಾಹಸಗಾಥೆಯ ಕಥೆಯನ್ನು ಮನೋರಂಜನಾತ್ಮಕ ಹಾಗೂ ರೋಚಕರೀತಿಯಲ್ಲಿ ಹೇಳಲಾಗಿದೆ ಎನ್ನುತ್ತಾರೆ ನಿರ್ದೇಶಕ ವಿರೇನ್ ಸಾಗರ್ ಬಗಾಡೆ.

ಅನೀಶ್ ಚೆರಿಯನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ವಿಜಯ್ ಭರಮಸಾಗರ, ಸುನಿ ಹಾಗೂ ವಿರೇನ್ ಸಾಗರ್ ಬಗಾಡೆ ರಚಿಸಿದ್ದಾರೆ. ಅಶೋಕ್ ಕಶ್ಯಪ್ ಛಾಯಾಗ್ರಹಣ, ಸಂತೋಷ್ ರಾಧಕೃಷ್ಣನ್ ಸಂಕಲನ ಹಾಗೂ ವಿನೋದ್ ಬಗಾಡೆ ಅವರ ನಿರ್ಮಾಣ ಸಮನ್ವಯ ಈ ಚಿತ್ರಕ್ಕಿದೆ.  ವಿನೋದ್ ಬಗಾಡೆ, ಅನಂತ್ ದೇಶಪಾಂಡೆ, ಸಮರ್ಥ್ ಆಶಿ, ಪ್ರಣೀಲ್ ನಾಡಿಗೇರ, ಶ್ರೇಯ ಹರಿಹರ, ಅಭೀಷೇಕ್ ಮದರ್ಡ್ದಿ, ಪ್ರಭು ಹಂಚಿನಾಳ, ಅನಸೂಯ ಹಂಚಿನಾಳ, ರಾಜೀವ್ ಸಿಂಗ್ ಹಲವಾಯಿ, ಮುಕುಂದ ಮೈಗೂರು, ಕಿರಣ್ ಬಗಾಡೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ `ಕೈಟ್ ಬ್ರದರ್ಸ್` ಚಿತ್ರದ ಲಿರಿಕಲ್ ಸಾಂಗ್ - Chitratara.com
Copyright 2009 chitratara.com Reproduction is forbidden unless authorized. All rights reserved.