ರಾಣಿ ಜೇನು ಮ್ಯೂಸಿಕ್ ಆಲ್ಬಂ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆ
Posted date: 27 Fri, Nov 2020 06:53:12 PM

ಸಂಗೀತ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿರುವ ಜಂಕಾರ್ ಮ್ಯೂಸಿಕ್
ಸಂಸ್ಥೆ ಈವರೆಗೂ ಸಾಕಷ್ಟು ವಿಡಿಯೋ ಆಲ್ಬಂ ಬಿಡುಗಡೆ ಮಾಡಿದೆ.
ಈ ಬಾರಿ ಸೋನಿ ಆಚಾರ್ಯ ಅವರ ಸಾರಥ್ಯದಲ್ಲಿ ರಾಣಿ ಜೇನು ಎಂಬ ರೊಮ್ಯಾಂಟಿಕ್ ವಿಡಿಯೋ
 ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
 ಸೋನಿ‌‌ ಆಚಾರ್ಯ ಮತ್ತು ಪೂಜಾ ನಾಣಯ್ಯ ನಟಿಸಿರುವ ಈ ಸುಂದರ ಆಲ್ಬಂನ ಚಿತ್ರೀಕರಣ ಶ್ರೀರಂಗಪಟ್ಟಣ, ಕರಿಫಟ್ಟ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ.
 ಸೋನಿ ಆಚಾರ್ಯ ಸಾಹಿತ್ಯ ಬರೆದು, ಸಂಗೀತ ನೀಡಿ, ನಟಿಸಿರುವ ಈ ಆಲ್ಬಂ ಗೆ ರಾಮ್ ಸಂತೋಷ್ ಛಾಯಾಗ್ರಹಣ, ಶಶಾಂಕ್ ಮುರಳೀಧರನ್ ಸಂಕಲನ ಹಾಗೂ ಶ್ರೀಧರ್ ಶ್ರೀ ನೃತ್ಯ ನಿರ್ದೇಶನವಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಣಿ ಜೇನು ಮ್ಯೂಸಿಕ್ ಆಲ್ಬಂ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.