ರ‍್ಯಾಂಬೋ 2 ನಾಳೆಯಿಂದ ತೆರೆಗೆ
Posted date: 17 Thu, May 2018 08:02:19 AM
ಲಡ್ಡು ಸಿನಿಮಾ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಮತ್ತೊಂದು ಕಾಮಿಡಿ ಕಥಾನಕ ಹೊಂದಿರೊ ರ‍್ಯಾಂಬೋ-೨ ಚಿತ್ರ ನಾಳೆಯಿಂದ ತೆರೆಗೆ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಹಿಂದೆ ತೆರೆಕಂಡಿದ್ದ ರ‍್ಯಾಂಬೋ ಚಿತ್ರದ ಕಥೆಗೂ  ಈ ಚಿತ್ರದ ಕಥೆಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೂ ಚಿತ್ರದ ಹಾಡುಗಳು ಈಗಾಗಲೇ ವೈರಲ್ ಆಗಿದ್ದು ಚಿತ್ರದ ನಿರೀಕ್ಷೆಯನ್ನು ದ್ವಿಗುಣಗೊಳಿಸಿವೆ. ಅನಿಲ್‌ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಶರಣ್ ಜಿ.ಕೆ. ಹಾಗೂ ಅಟ್ಲಾಂಟ ನಾಗೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಉದಯ್ ಹಾಗೂ ತರುಣ್ ಸುಧೀರ್ ಈ ಚಿತ್ರದ ಕಥೆ ರಚಿಸಿದ್ದು, ಅನಿಲ್ ಸಂಭಾಷಣೆ ಹೆಣೆದಿದ್ದಾರೆ. ಸುಧಾಕರ್ ಎಸ್.ರಾಜ್ ಈ ಚಿತ್ರದ ಛಾಯಾಗ್ರಾಹಕರಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಮುರಳಿ, ಭೂಷಣ್ ನೃತ್ಯ ನಿರ್ದೇಶನ ರವಿವರ್ಮ ಸಾಹಸ ನಿರ್ದೇಶನ, ಮೋಹನ್ ಬಿ.ಕೆರೆ ಕಲಾನಿರ್ದೇಶನ ಈ ಚಿತ್ರಕ್ಕಿದೆ. ಶರಣ್, ಆಶಿಕಾ ರಂಗನಾಥ್, ಚಿಕ್ಕಣ್ಣ, ಸಾಧುಕೋಕಿಲ, ರವಿಶಂಕರ್, ಕುರಿಪ್ರತಾಪ್, ತಬಲನಾಣಿ, ಲಕ್ಷ, ನಿಹಾಲ್, ನಂದಿನಿ ವಿಠಲ್, ನಿಹಾಲ್, ವಿದ್ಯು ಲೇಖನ್, ಕರಿಸುಬ್ಬು, ವಿನಯ್, ಸಚಿನ್, ಜಯಂತ್, ಜಹಂಗೀರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರ‍್ಯಾಂಬೋ 2 ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.