ಲಕ್ಷ್ಯಚಿತ್ರಕ್ಕೆ `U` ಸರ್ಟಿಫಿಕೆಟ್.
Posted date: 03 Tue, Mar 2020 09:44:10 AM

ಜನ ಸಾಮಾನ್ಯರಿಗೆ ಬಹಳ ಆಪ್ತವೆನಿಸುವ, ಹಾಗೂ ಅವರುಗಳ ಅನುಭವಕ್ಕೆ ನಾಟುವಂತಹ, ಒಂದುಗಟ್ಟಿಯಾದಕಥಾ ವಸ್ತುವನ್ನ ಒಳಗೊಂಡ ಚಿತ್ರ ಲಕ್ಷ್ಯಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯವರು "ಯೂ" ಸರ್ಟಿಫಿಕೆಟ್ ನೀಡಿ, ಚಿತ್ರತಂಡದ ಮುಂದಿನ ಕೆಲಸಗಳಿಗೆ ಅಸ್ತು ಎಂದಿದ್ದಾರೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಅಧಿಕಾರಿಗಳಾದ ಶ್ರೀನಿವಾಸಪ್ಪನವರು ಮತ್ತುಇತರಜ್ಯೂರಿ ಸದಸ್ಯರು, ಚಿತ್ರತಂಡಕ್ಕೆ ಪ್ರೊತ್ಸಾಹ ನೀಡಿ ಮೆಚ್ಚುಗೆ ಸೂಚಿಸಿದ್ದು, "ನಮಗೆಲ್ಲಾ ಬಹಳ ಖುಷಿ ಮತ್ತು ನಾವು ಮಾಡಿದ ವಿಭಿನ್ನ ಪ್ರಯತ್ನಕ್ಕೆ ಸಮಾಧಾನತಂದಿದೆ" ಎಂಬುದುಚಿತ್ರತಂಡದಅಂಬೋಣ.
ಇತ್ತೀಚಿಗೆ ಬಹಳಷ್ಟು ಕನ್ನಡ ಚಿತ್ರಗಳು ವಿಭಿನ್ನವಾದ ಹೊಸ ರೀತಿಯಕಥಾವಸ್ತುವಿನೊಂದಿಗೆ ಕನ್ನಡಚಿತ್ರೊಧ್ಯಮಕ್ಕೆ ಬರುತ್ತಿದ್ದು, ತಮ್ಮ ಪ್ರತಿಭೆಯನ್ನ ಸಾಭೀತು ಮಾಡಲು ಬಹಳ ಕಠಿಣ ಪರಿಶ್ರಮವನ್ನು ಪಡುತ್ತಾರೆ, ಅಂತಹ ಸಾಲಿಗೆ ಸೇರುವ ಮತ್ತೊಂದುಅಪ್ಪಟಕನ್ನಡದ ಮನೋರಂಜನೆಯಚಿತ್ರವೇ ಈ "ಲಕ್ಷ್ಯ"

ಪ್ರಾಯ ಪ್ರಾಯ ಪ್ರಾಯಚಿತ್ರದ "ಭೂಮಿತಾಯಾಣೆ ನೀ ಇಷ್ಟ ಕಣೆ" ಎಂಬ ಅಧ್ಬುತವಾದ ಹಾಡಿಗೆ ಹೆಜ್ಜೆ ಹಾಕಿ, ಅಂದಿನ ಕಾಲಘಟ್ಟದಲ್ಲಿತಮ್ಮದೇಆದ ವಿಭಿನ್ನ ಮ್ಯಾನರಿಸಮ್ ಮತ್ತು ನಟನೆಯಿಂದ ಹೆಸರು ಮಾಡಿದ್ದ, ಹಿರಿಯ ನಟ
ರಾಮಕೃಷ್ಣರನ್ನ ಈ ಚಿತ್ರದಲ್ಲಿ ಬಹಳ ವಿಶೇಷ ಪಾತ್ರದಲ್ಲಿ ತೋರಿಸಿದ್ದಾರೆ.

ಇನ್ನುಳಿದಂತೆ ಚಿತ್ರದ ತಾರಾಬಳಗದಲ್ಲಿ, ಸುಮಾರು 15 ಮೆಘಾ ಸೀರಿಯಲ್‌ಗಳಲ್ಲಿ ನಾಯಕ ನಟನಾಗಿ ಮೆರೆದಕಿರುತೆರೆಯ ಪ್ರಸಿದ್ದ ಮೂಡಲ ಮನೆಯ ಶ್ರೀಹರಿ, ಬಂಗಾರಖ್ಯಾತಿಯ ಡಿ.ಸಿ ಎಂದೇಕರೆಯಲ್ಪಡುವ ಸಂತೋಷ್‌ರಾಜ್‌ಝಾವರೆ, ಯುವ ಪ್ರತಿಭೆ ನಿತಿನದ್ವಿ, ಹಿರಿಯ ನಟಿ ಮಾಲತಿಶ್ರೀ, ಶರ್ಮಿಳಾ ಚಂದ್ರಶೇಖರ್, ಮತ್ತುಕಿನ್ನರಿಖ್ಯಾತಿಯ ಬೇಬಿ ಗಮನ ಮುಂತಾದವರಿದ್ದಾರೆ.

ಮೇಘಾ ಕಂಬೈನ್ಸ್ ಬ್ಯಾನರ್‌ಅಡಿಯಲ್ಲಿ ಸಿದ್ದವಾಗಿರುವ ``ಲಕ್ಷ್ಯ`` ಚಿತ್ರದ ನಿರ್ಮಾಪಕರಾಗಿ, ಮಹಾಂತೇಶ ತಾಂವಶಿ,
ಸಹ ನಿರ್ಮಾಪಕರಾಗಿ, ಪ್ರಕಾಶ್‌ಕೊಲ್ಹಾರ್, ಸುಧೀರ್‌ದೇವೇಂದ್ರ ಹುಲ್ಲೋಳಿ, ಆನಂದ ಶಿವಯೋಗಪ್ಪ ಕೊಳಕಿ, ಮತ್ತುಕಾರ್ಯಕಾರಿ ನಿರ್ಮಾಪಕರಾಗಿ ಸಂತೋಷ್‌ರಾಜ್‌ಝಾವರೆ, ಚಿತ್ರತಂಡಕ್ಕೆಆಧಾರ ಸ್ಥಂಭಗಳಾಗಿ ನಿಂತಿದ್ದಾರೆ.

ಕಥೆ - ನಿರ್ದೇಶನದಜವಾಬ್ದಾರಿ ಹೊತ್ತಿರುವರವಿ ಸಾಸನೂರ್‌ರವರಿಗೆಚಿತ್ರಕಥೆ - ಸಹ ನಿರ್ದೇಶನ - ಸಂಕಲನ ಮಾಡುವದರ ಮೂಲಕ ಸಾಥ್‌ಕೊಟ್ಟಿರುವುದು ಶಿವ ಸರ್ವಮ್.

ಜುವಿನ್ ಸಿಂಗ್ ಸಂಗೀತ, ಆನಂದುಚಂದ್ರಸಬುಛಾಯಾಗ್ರಹಣ, ಭವ್ಯ ಪ್ರದೀಪ್ ಮತ್ತು ಸತ್ಯನಾಥ್‌ರ ಸಾಹಿತ್ಯವಿದೆ.
ಹಾಡುಗಳನ್ನು ಅನುರಾಧಾ ಭಟ್, ಜೆಸ್ಸಿ ಗಿಫ್ಟ್, ಕೆ.ಎಸ್. ಹರಿಶಂಕರ್, ವಿಶಾಕ್ ನಾಗಲಾಪುರ ಮುಂತಾದವರು ಹಾಡಿದ್ದು
ಆಡಿಯೋ ಹಕ್ಕುಗಳನ್ನು ಖ್ಯಾತ ಸಂಸ್ಥೆ ಲಹರಿ ಪಡೆದುಕೊಂಡಿದೆ.

ಈಗಿನ ಯುವ ಪೀಳಿಗೆಯ ಮನಸ್ಸಿಗೆ ನಾಟುವಂತಹ ನೈಜ್ಯಘಟನೆಯಆಧಾರಿತಕಮರ್ಷಿಯಲ್‌ಚಿತ್ರಇದಾಗಿದ್ದು ಪ್ರತಿಯೊಬ್ಬರೂ ಮಿಸ್ ಮಾಡದೆ ನೋಡಲೇ ಬೇಕಾದಂತಹಚಿತ್ರವಾಗಿರುತ್ತದೆ.
ಟ್ರೆಂಡ್‌ಗೆತಕ್ಕಂತೆಕಲರ್‌ಫುಲ್‌ಕಂಟೆಂಟ್‌ಒರಿಯೆಂಟೆಡ್‌ಚಿತ್ರವಾದಿದ್ದು, ಪ್ರತೀ ಸನ್ನಿವೇಶವು ನೋಡುಗರಲ್ಲಿಕುತೂಹಲ ಉಂಟು ಮಾಡುತ್ತದೆಎಂಬುದುಚಿತ್ರತಂಡದ ಭರವಸೆಯಾಗಿದೆ.
ಈಗಾಗಲೆ ಬಿಡುಗಡೆಯಾಗಿರುವ ``ಟೀಸರ್``ಅತೀ ಮೆಚ್ಚುಗೆಯನ್ನ ಪಡೆದುಕೊಂಡಿದ್ದು, `` ಹುಡುಕಾಡಿದೆ ಮನಸ್ಸು ನಿನಗೆ`` ಎಂಬ ಡುಯಟ್ ಹಾಡುಎಲ್ಲರನ್ನ ಸೆಳೆಯುತ್ತಾ, ``ಹೇ ದಿಲ್ ದಾರು `` ಹಾಡೂ ಸಹ ಯುವಕರನ್ನಕುಣಿಯುವಂತೆ ಮಾಡಿದ್ದು, ಸಧ್ಯದಲ್ಲೇ ``ಲಕ್ಷ್``ಚಿತ್ರ ಬಿಡುಗಡೆಗೆಯಾಗಲಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed