ಲೆಕ್ಕಾಚಾರ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ನಟ ಶಿವಣ್ಣ
Posted date: 04 Thu, Jul 2019 09:00:43 AM

ಎಸ್. ಸೀಮಾ ಪಿಕ್ಚರ‍್ಸ್ ಲಾಂಛನದಲ್ಲಿ ಎಂ.ಎಸ್. ಕುಮಾರ್, ಆರ್ ಚಂದ್ರು ನಿರ್ಮಿಸುತ್ತಿರುವ ಲೆಕ್ಕಾಚಾರ ಚಿತ್ರದ ಪೋಸ್ಟರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ನಂತರ ಮಾತಾಡಿದ ಶಿವಣ್ಣ ಲೆಕ್ಕಾಚಾರ ಚಿತ್ರತಂಡಕ್ಕೆ ಕನ್ನಡ ನಾಡಿನ ಜನತೆಯ ಆಶೀರ್ವಾದವಿರಲಿ ಹಾಗೂ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು. ಈ ಹಿಂದೆ ಸಖತ್ ರಿಸ್ಕ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಎಂ.ಜಿ. ರಾಜ್ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಮೊದಲು ಹಾರರ್ ಚಿತ್ರವನ್ನು ಮಾಡಿದ್ದ ನಿರ್ದೇಶಕರು ಈಗ ಒಂದು ಪಕ್ಕಾ ಲವ್ ಸಬ್ಜೆಕ್ಟ್ ಅನ್ನು ಮಾಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ.

ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ, ರಾಜು ಶಿರಾ ಮತ್ತು ರಾಜೇಶ್ ಛಾಯಾಗ್ರಹಣ, ವಿ. ರಾಮದೇವ್ ಸಾಹಸ, ಪ್ರಶಾಂತ್ ಸೈ ಗೀತಾ ನೃತ್ಯ ನಿರ್ದೇಶನ, ದುರ್ಗಾ ಪಿ.ಎಸ್. ಸಂಕಲನ, ಪ್ರದೀಪ್ ಸಂಭಾಷಣೆ ಇದೆ. ಹರ್ಷ್ ಯಶಸ್ವಿ, ಪ್ರೀತಂ, ಚನ್ನಪ್ಪ ಬಿ., ನರಸಿಂಹ, ನಟರಾಜ್, ಆರ್ ಚಂದ್ರು, ಎಂ.ಎಸ್. ಕುಮಾರ್. ಮಂಜುನಾಥ್, ಅಮಿತ್, ರಾಮಚಂದ್ರ ಕೆ.ವಿ., ಸುರೇಶ್, ಬಲರಾಂ, ಮುತ್ತುಂ, ಪೂಜಾ, ಮೀನಾ, ಪ್ರಿಯಾಂಕಾ, ರೇಖಾ, ವಿಜಯ್, ತೆಲಂಗಾಣ ರವಿ, ಶಿವು ಮುಂತಾದವರ ತಾರಾಬಳಗವಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಲೆಕ್ಕಾಚಾರ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ನಟ ಶಿವಣ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.