ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಹೊಸ ಬಗೆ ಪ್ರತಿಭೆ ತಲಾಷ್
Posted date: 07 Thu, Jun 2018 10:38:07 AM

ಈ ಹಿಂದೆ ‘ಲೂಸುಗಳು’ ಕನ್ನಡ ಚಿತ್ರ ನಿರ್ದೇಶನ ಮಾಡಿದ ಅರುಣ್ ಮುಂದಿನ ಸಿನಿಮಾಕ್ಕೆ ಮುದ್ದಾದ ಯುವ ತಂಡವನ್ನು ತಲಾಷ್ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ. ಕೆಲವು ದಿವಸಗಳ ಹಿಂದೆ ಚಿತ್ರದ ಪೋಸ್ಟರ್ ಬಿಡುಗಡೆಯನ್ನು ನಿರ್ಮಾಪಕ ಹಾಗೂ ವಿತರಕ ಭೋಗೇಂದ್ರ ಅವರು ನೆರವೇರಿಸಿಕೊಟ್ಟಿದ್ದರು.
ಈಗ ಪ್ರತಿಭೆ ಹುಡುಕಲು ನಿರ್ದೇಶಕ ಅರುಣ್ ಆಧುನಿಕ ತಂತ್ರಜ್ಞಾನವನ್ನು ಅನುಸರಿಸಿದ್ದಾರೆ. 10 ಅಥವಾ 12ನೇ ತರಗತಿಯಲ್ಲಿ ಓದುತ್ತಿರುವ ಯುವಕರು ನಾಯಕ, ನಾಯಕಿ, ಪೋಷಕ ನಟ, ಹಾಸ್ಯ ನಟ ಹಾಗೂ ವಿಲನ್ ಪಾತ್ರಗಳಿಗೆ ಬೇಕಾಗಿದ್ದಾರೆ. ಅವರ ಮೊದಲ ಸುತ್ತಿನ ಪರಿಚಯ ದೂರವಾಣಿ ಸಂಖ್ಯೆ
6351333375 ಮೂಲಕ ಮಾಡಿಕೊಂಡು ಮೂರು ಛಾಯಾಚಿತ್ರಗಳನ್ನು ಕಳುಹಿಸಬೇಕು. ಆಮೇಲೆ ಅವರಿಗೆ ಪಾತ್ರದ ಬಗ್ಗೆ ತಿಳುವಳಿಕೆ ನೀಡಿ ಅದನ್ನು ವೀಡಿಯೋ ಮೂಲಕ ಕಳುಹಿಸತಕ್ಕದ್ದು. ಅದನ್ನು ವೀಕ್ಷಿಸಿದ ನಿರ್ದೇಶಕರು ಆಮೇಲೆ ಖುದ್ದಾಗಿ ಆಯ್ಕೆ ಆದವರನ್ನು ಕರೆಸಿಕೊಂಡು ಸಿನಿಮಾಕ್ಕೆ ಸಂಬಂದಪಟ್ಟ ವಿಚಾರಕ್ಕೆ ಕಾರ್ಯಾಗಾರ ನಡೆಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರೆ ಚಿತ್ರೀಕರಣ ಪ್ರಾರಂಭ ಮಾಡುವರು.
ಇಲ್ಲಿ ಗಮನಿಸಬೇಕಾದ ವಿಚಾರ ಏನಪ್ಪಾ ಅಂದರೆ ಕನ್ನಡ ಭಾಷೆ ಬಲ್ಲವರಾಗಿರಬೇಕು, ಟಿ ವಿ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿರುವವರು, ನಾಟಕಗಳಲ್ಲಿ ಅಭಿನಯಿಸಿರುವವರು ನಟನೆಯ ಬಗ್ಗೆ ಶ್ರದ್ದೆ ಇರುವವರಿಗೆ ಆದ್ಯತೆ ನೀಡಲಾಗುವುದು.
ಹೀಗೆ ವಿದೇಶದಲ್ಲಿ ಆಯ್ಕೆ ಹೊಸ ಪ್ರತಿಭೆಗಳ ತಲಾಷ್ ಸಹ ನಡೆಯುತ್ತದೆ. ಇದರಿಂದ ಆಸಕ್ತರ ಸಮಯ, ಹಣ ಹಾಗೂ ಅವರ ಓಡಾಟ ತಪ್ಪಿಸಿ ಸೂಕ್ತವಾಗಿ ಆಯ್ಕೆ ಮಾಡುವುದು.
ವೆರೈಟಿ ಬ್ಯಾನ್ನರ್ ಅಡಿಯಲ್ಲಿ ಶಿವಲಿಂಗ ಗೌಡ್ರು ಹಾಗೂ ಸುಬ್ರಮಣಿ ಕುಕ್ಕೆ ಅವರು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆಸಕ್ತ ಯುವಕ ಯುವತಿಯರು ಈ ಜೂನ್ ತಿಂಗಳ 30 ರ ಒಳಗೆ ಸಂಪರ್ಕಿಸಬೇಕು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಹೊಸ ಬಗೆ ಪ್ರತಿಭೆ ತಲಾಷ್ - Chitratara.com
Copyright 2009 chitratara.com Reproduction is forbidden unless authorized. All rights reserved.