ವಿನಯ್ ಪ್ರಸಾದ್ ಅಭಿನಯದ ಪಾರು ಡಿಸೆಂಬರ್ 3 ರಿಂದ ಪ್ರಾರಂಭ
Posted date: 27 Tue, Nov 2018 08:21:35 AM

ವಿನೂತನ ರಿಯಾಲಿಟಿ ಷೋಗಳು ಹೊಸ ಶೈಲಿಯ ಧಾರವಾಹಿಗಳನ್ನು ಪ್ರಸಾರ ಮಾಡುವ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನೆ ಮಾತಾಗಿರುವ ಕನ್ನಡದ ನಂಬರ್ ೧ ಚಾನಲ್ ಜೀ ಕನ್ನಡ ವಾಹಿನಿ ಇದೀಗ ಮತ್ತೊಂದು ಹೊಸ ಧಾರವಾಹಿಯನ್ನು ಕೊಡುಗೆಯಾಗಿ ನೀಡಲು ಅಣಿಯಾಗಿದೆ.  ಈಗಾಗಲೇ ಪ್ರೇಮಕಥೆ, ಹಾರರ್ ಥ್ರಿಲ್ಲರ್ ನಂಥಹ  ಬೇರೆ ಬೇರೆ ಜಾನರ್ ಕಥಾ ಹಂದರಗಳನ್ನು ಪ್ರೇಕ್ಷಕರಿಗೆ ನೀಡಿರುವ ಜೀ ವಾಹಿನಿ ಇದೀಗ ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ನಡೆಯುವ ದೊಡ್ಡ ಮನೆತನದ ಕಥೆಯೊಂದನ್ನು ಪಾರು ಎಂಬ ಹೊಸ ಧಾರವಾಹಿಯ ಮೂಲಕ ನಿರೂಪಿಸ ಹೊರಟಿದೆ.  ಅರಸನ ಕೋಟೆಯ ದೊಡ್ಡ ಮನೆತನದ ಒಡತಿ ಅಖಿಲಾಂಡೇಶ್ವರಿ ಹಾಗೂ ಅದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಪಾರು ಇಬ್ಬರ ನಡುವಿನ ಕಥೆಯನ್ನು ಪಾರು ಧಾರವಾಹಿಯ ಮೂಲಕ ನಿರ್ದೇಶಕ ಗುರುಪ್ರಸಾದ್ ಮುಡೇನಹಳ್ಳಿ ನಿರೂಪಿಸುತ್ತಿದ್ದಾರೆ. ಬರುವ ಡಿಸೆಂಬರ್ ೩ ರಿಂದ ಜೀ ವಾಹಿನಿಯಲ್ಲಿ ಪ್ರತಿ ರಾತ್ರಿ ೯.೩೦ ಕ್ಕೆ ಪ್ರಸಾರವಾಗಲಿರುವ ಈ ಧಾರವಾಹಿಯನ್ನು ಧೃತಿ ಕ್ರಿಯೇಷನ್ಸ್ ಮೂಲಕ ನಟ-ನಿರ್ದೇಶಕ ದಿಲೀಪ್ ರಾಜ್ ನಿರ್ಮಾಣ ಮಾಡುತ್ತಿದ್ದಾರೆ.  ಇನ್ನೂ ಹುಟ್ಟಿನಿಂದಲೇ ಶ್ರೀಮಂತಿಕೆಯನ್ನು ಹೊದ್ದುಕೊಂಡೇ ಬಂದಂತಹ ಅರಸನ ಕೋಟೆಯ ಅರಮನೆಯ ಮಹಾರಾಣಿ ಅಖಿಲಾಂಡೇಶ್ವರಿಯ ಪಾತ್ರವನ್ನು ಹಿರಿಯ ನಟಿ ವಿನಯ್‌ಪ್ರಸಾದ್ ಅವರು ನಿರ್ವಹಿಸುತ್ತಿದ್ದಾರೆ.  ಶಿಸ್ತಿನ ಸಿಪಾಯಿಯಾಗಿರುವ  ಅಖಿಲಾಂಡೇಶ್ವರಿ ಎಂದರೆ ಆ ಗ್ರಾಮದ ಜನರ ಪಾಲಿಗೆ ಸಿಂಹಿಣಿ.  ಆಕೆ ಹೇಳಿದ್ದೇ ಅಲ್ಲಿ ವೇದ ವಾಕ್ಯ ಇನ್ನೂ ಅಖಿಲಾಂಡೇಶ್ವರಿಯ ಹಿರಿಯ ಮಗ ಆದಿತ್ಯ ದೊಡ್ಡ ಬಿಸಿನೆಸ್ ಐಕಾನ್  ಆದಿತ್ಯ ಗ್ರೂಪ್ ಆಪ್ ಕಂಪನಿಯ ಒಡೆಯ. ಒಡೆತನವೋ, ಸಿರಿತನವೋ ಇರುವುದರಲ್ಲೇ ಬದುಕನ್ನು ಪ್ರೀತಿಸಬೇಕು ಎನ್ನವುದು ಪಾರು ಹಾಗೂ ತನ್ನದೇ ಆದ ಕಟ್ಟಪ್ಪಣೆಯೊಳಗೆ ಬದುಕಿದರೆ ಹೇಗೆ ಬದುಕಬೇಕು ಎಂದುಕೊಂಡಿರುವ ಅಖಿಲಾಂಡೇಶ್ವರಿಯ ನಡುವೆ ನಡೆಯುವ ಪ್ರಮುಖ ಘಟನೆಗಳನ್ನು ಪಾರು ಮೂಲಕ ಹೇಳಲಾಗುತ್ತಿದೆ.  ಈಗ ಪ್ರಸಾರವಾಗುತ್ತಿರುವ ಎಲ್ಲಾ ಧಾರವಾಹಿಗಳಿಗಿಂತ ಪಾರು ಒಂದು ವಿಭಿನ್ನ ನಿರೂಪಣೆಯ ಧಾರವಾಹಿಯಾಗಿದ್ದು ಪ್ರೇಕ್ಷಕರನ್ನು ರಂಜಿಸಲಿದೆ.  ಕನ್ನಡ ಪ್ರೇಕ್ಷಕರಿಗೆ ಪಾರು ಮತ್ತೊಂದು ಹಂತದ ಮನೋರಂಜನೆಯನ್ನು ನೀಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ  ಎನ್ನುತ್ತಾರೆ ಜೀ ಕನ್ನಡದ ಬಿಸಿನೆಸ್ ಹೆಡ್ ಆದ ರಾಘವೇಂದ್ರ ಹುಣಸೂರ್. 


Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿನಯ್ ಪ್ರಸಾದ್ ಅಭಿನಯದ ಪಾರು ಡಿಸೆಂಬರ್ 3 ರಿಂದ ಪ್ರಾರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.