ವಿನೋದ್ ಪ್ರಭಾಕರ್ ಅಭಿನಯದ ಫ಼ೈಟರ್ ಚಿತ್ರದ ಫ಼ಸ್ಟ್ ಲುಕ್ ಬಿಡುಗಡೆ.
Posted date: 03 Tue, Jul 2018 08:48:57 AM

ಆಕಾಶ್ ಎಂಟರ್ ಪ್ರೈಸಸ್ ಲಾಂಛನದಲ್ಲಿ  ಕೆ.ಸೋಮಶೇಖರ್ ಕಟ್ಟಿಗೇನಹಳ್ಳಿ ಅವರು ನಿರ್ಮಿಸುತ್ತಿರುವ, ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ‘ಫ಼ೈಟರ್‘ ಚಿತ್ರದ ಫ಼ಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಯಿತು.

ಈ ಹಿಂದೆ ‘ಕೃಷ್ಣನ್ ಮ್ಯಾರೇಜ್ ಸ್ಟೋರಿ‘ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ನೂತನ್ ಉಮೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಳೆದ ಶನಿವಾರ ನಾಯಕ ವಿನೋದ್ ಪ್ರಭಾಕರ್ ಅವರ ನಿವಾಸದಲ್ಲಿ ಅವರ ಅಭಿಮಾನಿಗಳು ಈ ಚಿತ್ರದ ಫ಼ಸ್ಟ್ ಲುಕ್ ಹಾಗೂ ಶೀರ್ಷಿಕೆ ಬಿಡುಗಡೆ  ಮಾಡಿದರು. ಇದೇ ತಿಂಗಳ ೫ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ.

ನೂತನ ಉಮೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶೇಖರ್ ಚಂದ್ರ, ರಾಕೇಶ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿನೋದ್ ಪ್ರಭಾಕರ್ ಅಭಿನಯದ ಫ಼ೈಟರ್ ಚಿತ್ರದ ಫ಼ಸ್ಟ್ ಲುಕ್ ಬಿಡುಗಡೆ. - Chitratara.com
Copyright 2009 chitratara.com Reproduction is forbidden unless authorized. All rights reserved.