ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ 26 ವರ್ಷಗಳ ನಂತರ `ನಿಶ್ಕರ್ಷ` ಮರು ಬಿಡುಗಡೆ
Posted date: 31 Sat, Aug 2019 08:34:09 AM

ನಿಶ್ಕರ್ಷ ಸುನೀಲ್‌ಕುಮಾರ್ ದೇಸಾಯಿ ಅವರ ಸೂಪರ್ ಹಿಟ್ ಚಿತ್ರಗಳಲ್ಲೊಂದು. ವಿಷ್ಣುವರ್ಧನ್, ಅನಂತನಾಗ್, ಬಿ.ಸಿ.ಪಾಟೀಲ್, ಸುಮನ್ ನಗರಕರ್, ರಮೇಶ್‌ಭಟ್ ಅಭಿನಯಿಸಿದ್ದ ಈ ಚಿತ್ರವನ್ನು ಬಿ.ಸಿ.ಪಾಟೀಲ್ ಅವರೆ ಸೃಷ್ಠಿ ಫ಼ಿಲಂಸ್ ಮೂಲಕ ನಿರ್ಮಾಣ ಮಾಡಿದ್ದರು. 1993 ರಲ್ಲಿ ತೆರೆಕಂಡಿದ್ದ ಈ ಚಿತ್ರ ಶತದಿನೋತ್ಸವ ಆಚರಿಸಿತ್ತು.

ಹಾಲಿವುಡ್‌ನ  ಡೈ ಹಾರ್ಡ್ ಸಿನಿಮಾದ ಸ್ಪೂರ್ತಿಯಿಂದ ತಯಾರಾಗಿದ್ದ ಸಿನಿಮಾವನ್ನು ಮತ್ತೊಮ್ಮೆ ತೆರೆಗೆ ತರಲು ಹೊರಟ್ಟಿದ್ದಾರೆ ಬಿ.ಸಿ.ಪಾಟೀಲ್. ಸೆಪ್ಟೆಂಬರ್ 20 ರಂದು ನಿಶ್ಕರ್ಷ ರೀರಿಲೀಸ್ ಆಗುತ್ತಿದೆ ಡಿಜಿಟಲ್ ರೂಪದಲ್ಲಿ. ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಅವರ ಹುಟ್ಟುಹಬ್ಬವಾಗಿದ್ದು ಇದೇ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವುದು ಥ್ರಿಲ್ಲರ್ ಸಿನಿಮಾಗಳು. 93 ರಲ್ಲೇ ಅಂಥಾದ್ದೊಂದು ಅದ್ಭುತ ಥ್ರಿಲ್ಲರ್ ಸಿನಿಮಾ ಕೊಟ್ಟಿದ್ದರು ಸುನೀಲ್ ಕುಮಾರ್ ದೇಸಾಯಿ. ಈ ಚಿತ್ರ ಹಲವು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಚಿತ್ರವನ್ನು ಜಯಣ್ಣ ವಿತರಣೆ ಮಾಡುತ್ತಿದ್ದು, ಸಿನಿಮಾ ಭರ್ಜರಿಯಾಗಿಯೇ ರೀರಿಲೀಸ್ ಆಗುತ್ತಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ 26 ವರ್ಷಗಳ ನಂತರ `ನಿಶ್ಕರ್ಷ` ಮರು ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.